ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆ
Distribution of title deeds to slum dwellers
ಜಮಖಂಡಿ 11: ನಗರದ ಕೆಲವು ವಾರ್ಡಗಳ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆಯನ್ನು ಬಿಜೆಪಿ ಶಾಸಕ ಮಾಡುತ್ತಿದ್ದಾರೆ. ಇದರಿಂದ ಜನತೆಯ ದಾರಿ ತಪ್ಪುಸುವ ಕೆಲಸವನ್ನು ಕೈಬಿಡಬೇಕು. ಹಕ್ಕು ಪತ್ರಗಳ ಬಗ್ಗೆ ನಮ್ಮ ಶ್ರಮವಿದೆ. ಕಳೆದ 4 ವರ್ಷಗಳಿಂದ ಸತತ ಪ್ರಯತ್ನ ಪಟ್ಟು ಈಗ ಹಕ್ಕು ಪತ್ರಗಳನ್ನು ವಿತರಿಸುವ ಸಂದರ್ಭ ಬಂದಿದೆ, ಅದನ್ನು ತಾವೇ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಆಕ್ರೋಶವ್ಯಕ್ತ ಪಡಿಸಿದರು.
ನಗರದ ಎಪಿಎಂಸಿ ಯಾರ್ಡನ ರಸಗೊಬ್ಬರ ಮಳಿಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಗೆ ಚುನಾವಣೆಗಳು ಬರುತ್ತಿರುವ ಸಂದರ್ಭದಲ್ಲಿ ತಮ್ಮ ಕೆಲಸವೆಂದು ಬಿಂಸಬಿಸಿಕೊಳ್ಳುತ್ತಿರುವದು ಸರಿಯಾದ ಕ್ರಮವಲ್ಲ. ನಗರದ ಸ್ಲಂ ಪ್ರದೇಶಗಳಾದ ಕತಾಟೆ ಪ್ಲಾಟ, ಮಹಾಲಿಂಗೇಶ್ವರ ಕಾಲೊನಿ, ಚೌಡಯ್ಯ ನಗರ ಮುಂತಾದವುಗಳ ಪಟ್ಟಿಮಾಡಿ 11.8.2021ರಲ್ಲಿ ನಾನು ಶಾಸಕರಿದ್ದ ಸಂದರ್ಭದಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ವಿತ್ತು ಆಗ ಠರಾವು ಪಾಸ್‌ಮಾಡಿ ಸ್ಲಂ ಬೋರ್ಡ್‌ಗೆ ಕಳುಹಿಸಲಾಗಿತ್ತು.
2.3.2022ಕ್ಕೆ ಸ್ಲಂ ಬೋರ್ಡ್‌ನಿಂದ ಈ ಎಲ್ಲ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಕೇಳಿ ಪತ್ರ ಬರೆಯಲಾಗಿತ್ತು. 8.9.2023ಕ್ಕೆ ಆದೇಶವು ಆಯಿತು. ಕೊಳಚೆ ಪ್ರದೇಶದ ಮನೆಗಳ ಮಾಹಿತಿ ಪಡೆದ ಮಂಡಲಿಯವರು 2.3.2023ರಲ್ಲಿ ನೋಟೀಸ್ ಜಾರಿ ಮಾಡಿದ್ದರು. ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಕ್ಕು ಪತ್ರಗಳ ವಿತರಣೆಯಾಗಲಿಲ್ಲ. ಹೀಗಾಗಿ ಹಕ್ಕು ಪತ್ರಗಳ ವಿತರಣೆ ಹಿಂದೆ ಕಾಂಗ್ರೆಸ್‌ನ ಶ್ರಮ ಬಹಳ ಇದೆ ಎಂದರು.
ಬಿಜೆಪಿಯವರ ಯಾವುದೇ ಪ್ರಯತ್ನ ಇಲ್ಲವಾದರೂ ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ನಡೆದುಕೊಳ್ಳುತ್ತಿದ್ದಾರೆ. ಈಗಲೂ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ವಿತ್ತು ಆದರೆ ಅವಧಿ ಮುಗಿದ ನಂತರ ಹಕ್ಕು ಪತ್ರಗಳ ವಿತರಣೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಷಿವರು ರಬಕವಿಯಲ್ಲಿ ಚಾಲನೆ ನೀಡಿ ಸಾಂಕೇತಿಕವಾಗಿ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ ಈಗ ಶಾಸಕರು ಹಕ್ಕುಪತ್ರ ವಿತರಿಸುವ ಕೆಲಸ ಮಾಡುತ್ತಿರುವದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ನಗರದ ಜನಸಂಖ್ಯೆಗೆ ಅನುಗುಣವಾಗಿ ನೂರು ಹಾಸಿಗೆಗಳ ನೂತನ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರಿಗೆ ಮನವಿ ಸಲ್ಲಿಸಿ ಒಪ್ಪಿಗೆ ಪಡೆದಿದ್ದೇನೆ ಅದೂ ಸಹ ಬಿಜೆಪಿಯವರ ಅಭಿವೃದ್ಧಿಕಾರ್ಯವಲ್ಲ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 