ಹೂವಿನಹಾಳ ಸರಕಾರಿ ಶಾಲೆಗೆ ತಂಬ್ರಳ್ಳಿ ಕ್ರೀಡಾ ಸಾಮಗ್ರಿ ವಿತರಣೆ
ಕೊಪ್ಪಳ 20: ತಾಲೂಕಿನ ಹೂವಿನಹಾಳ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತಕ ಪಡೆದುಕೊಂಡಿರುವ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ದೇಣಿಗೆಯಾಗಿ ವಿತರಣೆ ಮಾಡಿದರು.
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೀಠೋಪಕರಣ ಜೊತೆಗೆ ಆಟೋಪಕರಣಗಳು ವಿದ್ಯಾರ್ಥಿಗಳ ಕ್ರೀಡೆಗೆ ಅನುಕೂಲವಾಗಲು ಮತ್ತು ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಕ್ರೀಡಾ ಸಾಮಾಗ್ರಿಗಳಾದ ಕೇರಂ ಬೋರ್ಡ, ಚೆಸ್ ಬೋರ್ಡ, ರಿಂಗ್, ಜಂಪಿಂಗ್ ಗ್ರೂಪ್, ಇತ್ಯಾದಿ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ರವರು ದೇಣಿಗೆಯಾಗಿ ನೀಡಿದ ಸಾಮಾಗ್ರಿಗಳ ವಿತರಣೆಯನ್ನು ಇನ್ನರ್ ವೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಸುಷ್ಮಾ ಪತಂಗೆ ವಿತರಣೆ ಮಾಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರ್, ಐ ಎಸ್ ಓ ಮಧು ನಿಲೋಗಲ್, ಎಡಿಟರ್ ನಾಗವೇಣಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಹಾಗೂ ಸುಜಾತ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,