ವರುಣಗೌಡ್ರ ಅಭಿಮಾನಿ ಬಳಗದಿಂದ ನೋಟ್ ಪುಸ್ತಕ ಪೆನ್ನು ವಿತರಣೆ
ಶಿಗ್ಗಾವಿ 20: ಸದಾ ಬಡವರ ಪರವಾಗಿ ದೀನ ದಲಿತರ ಪರವಾಗಿ ಮಿಡಿಯುವ ಹೃದಯ ವರುಣಗೌಡ ಪಾಟೀಲ ಅವರದು ಎಂದು ವಿನಯ್ ಹೊನ್ನಣ್ಣವರ ಹೇಳಿದರು. ತಾಲೂಕಿನ ಶ್ಯಾಡಂಬಿ ಕುನ್ನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಹಿರೇಬೆಂಡಿಗೇರಿ ಗ್ರಾಮದ ಕಾನ್ವೆಂಟ್ ಶಾಲೆಗೆ ವರುಣಗೌಡ ಪಾಟೀಲ ಅವರ ಜನ್ಮ ದಿನದ ನಿಮಿತ್ತ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ್ ಪೆನ್ನು ಪೆನ್ಸಿಲ್ ವಿತರಣೆ ಮಾಡಿ ಮಾತನಾಡಿದ ಅವರು ವರುಣಗೌಡ ಪಾಟೀಲ ಅವರ ಜನ್ಮ ದಿನದ ಅಂಗವಾಗಿ ಅವರ ಸಮಾಜ ಸೇವೆಗೆ ಪ್ರೇರಿತರಾಗಿ ಇಂದು ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ನೀಡಿರುವದು ಸಂತೋಷ ತಂದಿದೆ ಅವರಿಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದರು. ಜಾನಪದ ಕಲಾವಿದ ಶರೀಫ್ ಮಾಕಪ್ಪನವರ ಅವರು ಮಾತನಾಡಿ ವರುಣಗೌಡ ಪಾಟೀಲ ಅವರು ಜನ್ಮದಿನಾಚರಣೆ ವಿಶೇಷವಾದ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವದರ ಮೂಲಕ ಆಚರಣೆ ಮಾಡುತ್ತ ಬಂದಿದ್ದಾರೆ ಈ ಭಾರಿಯ ಜನ್ಮ ದಿನವನ್ನು ವರುಣ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಶಿಗ್ಗಾವಿ ತಾಲೂಕಿನ ಸರ್ಕಾರಿ ಶಾಲೆಯ ಐದನೂರು ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ್ ಪೆನ್ನು ಪೆನ್ಸಿಲ್ ವಿತರಣೆ ಹಾಗೂ ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿನ ವೇದ ಪಾಠ ಶಾಲಾವಿದ್ಯಾರ್ಥಿಗಳಿಗೆ ಮದ್ಯಾಹ್ನ ಅನ್ನ ಸಂತರೆ್ಣ ಮಾಡುವ ಮೂಲಕ ಜನ್ಮ ದಿನ ಆಚರಣೆ ಮಾಡಲಾಗಿದೆ.ಇವೆಲ್ಲವೂ ಅವರ ಸಾಮಾಜಿಕ ಕೆಲಸಗಳಿಂದ ಪ್ರೇರಣೆಯಾಗಿದೆ ಎಂದರು. ಈ ಸಂದರ್ಭದಲ್ಲಿ ವರುಣ ಪಾಟೀಲ ಅಭಿಮಾನಿ ಬಳಗದ ನಾಗರಾಜ್ ಕ್ಯಾಬಳ್ಳಿ, ಮಂಜುನಾಥ ಮಾಕಪ್ಪನವರ, ಮೈಲಾರಿ ಅಗಸರ, ಕೃಷ್ಣ ಭೀಮನವರ, ಸುರೇಶ ಸಂಜೀವಣ್ಣವರ, ಮಂಜು ಚವಾಣ, ಅಜ್ಜಪ್ಪ ಸಂಜೀವಣ್ಣವರ, ಗಣೇಶ ಭೀಮನವರ, ಸಂಜೀವ್ ಓಲೇಕಾರ ಹಾಗೂ ಇತರರು ಹಾಜರಿದ್ದರು.