ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ
Distribution of free aids and equipment to the disabled
ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ
ವಿಜಯಪುರ 26: ನಿಜಸುಖಿ ಹಡಪದ ಅಪ್ಪಣ ದೇವಸ್ಥಾನ ಆರಾಧನಾ ಸಮಿತಿ ಚಾರಿಟೇಬಲ್ ಟ್ರಸ್ಟ್ ವಿಜಯಪುರದ ಮೊದಲನೇಯ ವಾರ್ಷಿಕೋತ್ಸವ ನಿಮಿತ್ಯವಾಗಿ ವಿಕಲಚೇತನಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಭೆಯ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ರಮೇಶ್ ಬಿದನೂರು ವಹಿಸಿದ್ದರು. ಉದ್ಘಾಟಕರಾಗಿ ಭೀಮಾಶಂಕರ್ ಹದನೂರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ದಾಸ್ ಸೂರ್ಯವಂಶ ಮಾನ್ಯ ಆಯುಕ್ತರು ರಾಜ್ಯ ಅಂಗವಿಕಲರ ಕಾಯ್ದೆ 2016 ಕರ್ನಾಟಕ ಸರ್ಕಾರ, ಶಿವ ಶಾಂತವೀರ ದಿವಾಕರ್ ಮುಖ್ಯಸ್ಥರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಜಗದೀಶ್ ಕೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳು, ಮಲ್ಲಿಕಾರ್ಜುನ್ ಹಿರೇಮಠ, ಸಂತೋಷ್ ತಲಕೇರಿ, ಪ್ರಜ್ಞೇಶೀಲ ಖ್ಯಾತನ್ ರಾಹುಲ್ ಕುಬಕಡ್ಡಿ ಶ್ರೀಶೈಲ ಗೌಡ್ ಬಿರಾದರ್ ಭೀಮಾಶಂಕರ್ ಹಡಪದ್ ಹಾಗೂ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ರಾಜ್ಯ ಆಯುಕ್ತರಾದ ದಾಸ ಸೂರ್ಯವಂಶ ರವರು ಡಿಸೆಂಬರ್ ತಿಂಗಳಲ್ಲಿ 5 6 7 ರಂದು ನಡೆಯುವ ರಾಜ್ಯ ನೇರಳೆ ದಿನಾಚರಣೆಯನ್ನು ಅತಿ ವಿಜ್ರಂಭಣೆಯಿಂದ ಆಚರಿಸಲು ಎಲ್ಲಾ ಜಿಲ್ಲಾಮಟ್ಟದ ವಿಶೇಷ ಚೇತನರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಆಹ್ವಾನ ನೀಡಿದರು. ಮತ್ತು ಎಲ್ಲಾ ಕಚೇರಿಗಳಲ್ಲಿ ಮೂರು ದಿನಗಳ ನೇರಳೆ ಬಣ್ಣದ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ತಿಳಿಸಿದರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಚೇತನರನ್ನು ಬರುವಂತೆ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ಸಾಧನಾ ಸಲಕರಣೆಗಳನ್ನು ನಿಜಸುಖಿ ಹಡಪದ ಅಪ್ಪಣ್ಣ ಸಂಸ್ಥೆಯವರು ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 