ಪಲಾನುಭವಿಗಳಿಗೆ ದಿನ ಬಳಕೆಯ ವಾತ್ಸಲ್ಯ ಕಿಟ್ಟ ವಿತರಣೆ
Distribution of daily use love kits to the beneficiaries
ಉಗರಗೋಳ 08: ಗ್ರಾಮಗಳಲ್ಲಿ ಕಡು ಬಡವರನ್ನು ಗುರುತಿಸಿ, ವಾತ್ಸಲ್ಯ ಯೋಜನೆಯಡಿಯಲ್ಲಿ. ಶೌಚಾಲಯ, ತಿಂಗಳ ಮಾಶಾಸನ, ಸೂರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದ್ದು, ಎಲ್ಲವರ್ಗದ ಜನರು ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುವಂತಾಗಬೇಕೆಂದು ತಾಲೂಕಾ ಯೋಜನಾಧಿಕಾರಿ ಸುಭ್ರಾಯ್ ನಾಯ್ಕ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶನಿವಾರ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲಿ, 23 ಅಶಕ್ತ ಕುಟುಂಭಕ್ಕೆ ವಾತ್ಸಲ್ಯ ಕಿಟ್ಟ, 23 ಕುಟುಂಬಕ್ಕೆ ನಿತ್ಯ ಬಳಿಕೆಯ ಪಾತ್ರೆ ಬಟ್ಟೆಗಳ ಕಿಟ್ ಹಾಗೂ ಜೀವನ ನಿರ್ವಹಣೆಗೆ ಪರಿತಪಿಸುತ್ತಿರುವ 98 ಅಶಕ್ತ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಜ್ಞಾನವಿಕಾಸ ಯೋಜನೆಯಡಿ ತಿಂಗಳು 1000 ರೂ ಮಾಶಾಸನವನ್ನು ವಿತರಿಸಿ ಮಾತನಾಡಿದ ಅವರು ಡಾ,ವಿರೇಂದ್ರ ಹೆಗಡೆ ಅವರು ಗ್ರಾಮಾಭಿವೃದ್ದಿ ಸಂಸ್ಥೆಯ ಮೂಲಕ ಕರ್ನಾಟಕ ರಾಜ್ಯಾಧ್ಯಂತ ಹಲವಾರು ಸಮಾಜಮುಖಿ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಒಕ್ಕೂಟದ ಅಧ್ಯಕ್ಷೆ ನಿಂಗಮ್ಮ ಹಳ್ಳಿ, ಗ್ರಾಪಂ ಸದಸ್ಯರಾದ ಶಂಕ್ರಮ್ಮ ಮುದ್ರಗಣಿ, ಅಪ್ಪು ಕಾಳಪ್ಪನವರ, ಬಸವರಾಜ ಗೊವಪ್ಪನವರ, ಯಲ್ಲಪ್ಪ ಮೀಯಪ್ಪನವರ, ಮೇಲ್ವಿಚಾರಕಿ ಮಮತಾ ವೈಧ್ಯ, ಶಾಂತಮ್ಮ ಮಡಿವಾಳ, ನೀಲಮ್ಮ ಕರೀಕಟ್ಟಿ, ಗಂಗಮ್ಮ ಮಡಿವಾಳರ, ರೇಣಪ್ಪ ರೊಟ್ಟಿ, ವಿಜಯಕುಮಾರ ಹಾಗೂ ಗ್ರಾಮಸ್ಥರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 