ನ್ಯಾಯಪಾಲನೆ ನ್ಯಾಯಾಂಗದ ಕರ್ತವ್ಯ: ನ್ಯಾಯಾಧೀಶೆ ಅಕ್ಷತಾ
Dispensation of justice is the duty of the judiciary: Judge Akshata
ಹೂವಿನಹಡಗಲಿ 03: ಪ್ರಜಾಪ್ರಭುತ್ವದ ಅಂಗ ಸಂಸ್ಥೆಗಳಾದ ಶಾಸಕಾಂಗ, ಕಾರ್ಯಾಂಗ , ನ್ಯಾಯಾಂಗ ಮತ್ತು ಪತ್ರಿಕೋದ್ಯಮಸಮನ್ವಯತೆಯಿಂದ ಕೆಲಸ ಮಾಬೇಕು ಹಾಗಾದಗ ಮಾತ್ರ ಸಮಾಜದ ಸಮಸ್ಯೆ ಬಗೆಹರಿಸಲು ಸಾಧ್ಯ. ಎಂದು ಸಿವಿಲ್ ನ್ಯಾಯಾಧೀಶರಾದ ಟಿ.ಅಕ್ಷತಾ ಹೇಳಿದರು.ಪಟ್ಟಣದ ಲ್ಲಿ ಬುಧವಾರ ವಕೀಲರ ಸಂಘದ ವತಿಯಿಂದ ಏರಿ್ಡಸಲಾಗಿದ್ದ ವಕೀಲರ ದಿನಾಚರಣೆ ಮತ್ತು 2025-27ನೇ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.”ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು. ಯಾವುದೇ ಕಾರಣಕ್ಕೂ ಅನ್ಯಾಯ ಪರ ?????ಬಾರದು ಎಂದ ಅವರು ಕಕ್ಷಿದಾರರ ಹಕ್ಕನ್ನು ರಕ್ಷಿಸಬೇಕು ಜತೆಗೆ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಡವರು ಉಚಿತ ಕಾನೂನು ನೆರವು ಪಡೆದು ಕೊಳ್ಳಬಹುದು ಎಂದರು.
ಡಿ.13ಕ್ಕೆ ಲೋಕ ಅದಾಲತ್ ಇದೇ ತಿಂಗಳು 13ರಂದು ನಡೆಯುವ ಲೋಕ ಅದಾಲತ್ ಮೂಲಕ ಬಾಕಿ ಉಳಿದಿರುವ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲು ವಕೀಲರು ಸಹಕಾರಿಸಬೇಕು ಎಂದರು.ಸರ್ಕಾರಿ ಅಭಿಯೋಜಕ ಅಜ್ಜಯ್ಯ ,ಅದ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅದ್ಯಕ್ಷ ಜೆ.ಮಂಜುನಾಥ ಮಾತನಾಡಿದರು. ಹಿರಿಯ ವಕೀಲರಾದ ಸಿಕೆಎಂ.ಬಸವಲಿಂಗಸ್ವಾಮಿ ಮಾತನಾಡಿ ಕಿರಿಯ ವಕಿಲರು ನ್ಯಾಯಾಧೀಶರು ಮತ್ತು ಹಿರಿಯ ವಕೀಲರಿಗೆ ಗೌರವ ಕೊಡಬೇಕು ಜತೆಗೆ ವೃತ್ತಿ ಯಲ್ಲಿ ಯಾರು ಪರಿಪೂರ್ಣ ರಲ್ಲ , ಕ್ರಿಮಿನಲ್ ಕ್ಕಿಂತ ಸಿವಿಲ್ ಪ್ರಕರಣ ಬಗ್ಗೆ ಹೆಚ್ಚು ಓದುವ ರೂಢಿಯನ್ನು ಬೆಳೆಸಿಕೊಳ್ಳಿ ಎಂದರು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಶಿವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ವಿ.ಪಾಟೀಲ್, ಸಹ ಕಾರ್ಯ ದರ್ಶಿ ಎಸ್.ಬಿ.ಪತ್ರೇಶ, ಖಜಾಂಚಿ ಹೆಚ್.ಸುಜಾತ ಇದ್ದರು. ಇದೇ ವೇಳೆ ಹಿರಿಯ ವಕಿಲರಾದ ಎಲ್.ಚಂದ್ರನಾಯ್ಕ, ಡಿ.ಸಿದ್ದನಗೌಡ, ಪಿ.ಎಂ.ಶಿವಕುಮಾರ್ ಸನ್ಮಾನಿಸಲಾಯಿತು. ಪ್ರಕಾಶ ಜೈನ್ ಸಂಗಡಿಗರು ಪ್ರಾರ್ಥನೆ ನಂತರ ಪ್ರಶಾಂತ ವಿ.ಪಾಟೀಲ್ ಸ್ವಾಗತಿಸಿದರು. ಗದುಗಿನ ಹನುಮಂತಪ್ಪ ನಿರೂಪಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 