ವಿಕಲತೆ ಅಡ್ಡಿಯಲ್ಲ, ಅದ್ಭುತತೆಗೆ ದಾರಿ : ಮಲ್ಲಪ್ಪ ಎಚ್‌

 ವಿಕಲತೆ ಅಡ್ಡಿಯಲ್ಲ, ಅದ್ಭುತತೆಗೆ ದಾರಿ : ಮಲ್ಲಪ್ಪ ಎಚ್‌ Disability is not an obstacle, it is a path to greatness: Mallappa H

 ವಿಕಲತೆ ಅಡ್ಡಿಯಲ್ಲ, ಅದ್ಭುತತೆಗೆ ದಾರಿ : ಮಲ್ಲಪ್ಪ ಎಚ್‌.   

ಗದಗ  16 : ನಗರದ ಪ್ರತಿಷ್ಠಿತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ಇತ್ತಿಚಿಗೆ ಗದಗ ನಗರದ ಸೇವಾ ಭಾರತಿ ಟ್ರಸ್ಟ್‌(ರಿ), ಸೇವಾ ಚೇತನದ, ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಭೇಟಿ ನೀಡುವದರ ಜೊತೆಗೆ ಅಲ್ಲಿಯ ವಿದ್ಯಾರ್ಥಿಗಳ ಸ್ಥತಿಗತಿಗಳನ್ನು ತಿಳಿದುಕೋಂಡು ಶಾಲೆಯ ಮಕ್ಕಳ ಜೊತೆಗೆ ಅವರ ಕಲಿಕೆಯಲ್ಲಿ ಭಾಗಿಯಾದರು.   ನಂತರ ಆ ಶಾಲೆಯ ಪ್ರಾಂಶುಪಾಲರಾದ ಶ್ರೀ.ಮಲ್ಲಪ್ಪ ಎಚ್‌. ಅವರು  ಎನ್‌. ಎಸ್‌. ಎಸ್‌. ಸ್ವಯಂಸೇವಕರ ಜೊತೆಗೆ ಮಾತನಾಡಿ ಚರ್ಚಿಸುತ್ತಾ ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಕೊಡಿ, ವಿದ್ಯಾರ್ಥಿಗಳು ಡಿಸೆಂಬರ 03ರ ಅಂಗವಿಕಲರ ದಿನಾಚರಣೆಯ ಅಂಗವಾಗಿ ನೆಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು, ವಿಶೇಷ ಚೇತನ ಮಕ್ಕಳಮಾನಸಿಕ ವೃದ್ಧಿಗೆ ಪಾಲಕರ ಪಾತ್ರವೂ ಅಗತ್ಯ, ಅಂಗವಿಕಲತೆಗೆ ಕಾರಣಗಳು, ಅರುಣೋದಯ 2007 ರಲ್ಲಿ ಗದಗನಲ್ಲಿ ಪ್ರಾರಂಭವಾಯಿತು, ಇಲ್ಲಿಯವರೆಗೆ ಒಟ್ಟು 189 ಮಕ್ಕಳು ಅರುಣೋದಯ ಶಾಲೆಯಲ್ಲಿ ತರಬೇತಿ ತೆಗೆದುಕೊಂಡಿದ್ದಾರೆ, ಇಲ್ಲಿಯವರೆಗೆ ಒಟ್ಟು 29 ಮಕ್ಕಳು ಸಾಮಾನ್ಯ ಶಾಲೆಗೆ ಸೇರಿದ್ದಾರೆ, ವಿವಿಧ ವಿದ್ಯಭ್ಯಾಸಗಳನ್ನು ಮಾಡಿದ್ದಾರೆ, ಅದರಲ್ಲಿ ಎಮ್‌. ಎಸ್‌. ಡಬ್ಲು. ಮಾಡಿದ್ದಾರೆ, 03 ಜನ ಉದ್ಯೊಗ ಮಾಡುತ್ತಿದ್ದಾರೆ ಎಂದು ಹಲವಾರು ವಿಷಯಗಳನ್ನು ತಿಳಿಸಿದರು.  ಈವಿಶೇಷ ಕಾರ್ಯಕ್ರಮದಲ್ಲಿಗದಗ ನಗರದ ಸೇವಾ ಭಾರತಿ ಟ್ರಸ್ಟ್‌(ರಿ), ಸೇವಾ ಚೇತನದ, ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಪ್ರಾಂಶುಪಾಲರಾದ . ಮಲ್ಲಪ್ಪ ಎಚ್‌. ಶಾಲೆಯ ಪ್ರಮುಖರಾದ ಶ್ರೀ. ಮಲ್ಲಿಕಾರ್ಜುನ್ ನಾಗಲಾಪೂರ, ಅಲ್ಲಿಯ ಶಿಕ್ಷಕರಾದ  ಜಗದೀಶ ಹಡಪದ,  ಜಯಶ್ರೀ ಭಾವರೆ, ಆಯಾರುಗಳಾಗಿ ಮಕ್ಕಳನ್ನು ನೊಡಿಕೊಳ್ಳುವ  ರೇಣುಕಾ ದಾಸರ,  ವೀಣಾ ಕೊಲ್ಲಾಪುರಿ, ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ,, ಎನ್‌. ಎಸ್‌. ಎಸ್‌. ತಂಡದ ನಾಯಕರಾದ ಕುಮಾರ. ಪ್ರಶಾಂತ ಕಲರ್ಬುಗಿ, ಕುಮಾರಿ. ರುಕ್ಸಾರ್ ಕೋಪ್ಪಳ,ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕನಾದ ಕುಮಾರ. ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಯಾದ ಕುಮಾರ. ಪ್ರಶಾಂತ ಕಲಬುರ್ಗಿ, ಕುಮಾರ. ರುದ್ರಗೌಡ ಹಿರೇಗೌಡ್ರ, ಕುಮಾರಿ. ಸಹನಾ ನಾಲ್ವಾಡದ,ಕುಮಾರ. ಆಕಾಶ ಕಳಗಣ್ಣವರ,ಸೇವಾ ಭಾರತಿ ಟ್ರಸ್ಟ್‌(ರಿ), ಸೇವಾ ಚೇತನದ, ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಸಿಬಂಧಿಗಳು, ವಿದ್ಯಾರ್ಥಿಗಳು ಮತ್ತು ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಎನ್‌. ಎಸ್‌. ಎಸ್‌. ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.