ಹಾವೇರಿ31: ವಿದ್ಯಾಥರ್ಿಗಳು ಚಿಕ್ಕ ವಯಸ್ಸಿನಲ್ಲಿ ಗುರಿ ಸಾಧಿಸುವ ದೃಢ ನಿಧರ್ಾರವನ್ನು ಕೈಗೊಳ್ಳಬೇಕು. ಜೊತೆಗೆ ಸಕಾರತ್ಮಕ ಚಿಂತನೆ, ಆಳವಾದ ಅಧ್ಯಯನ ಮತ್ತು ತಾಳ್ಮೆ ಗುಣಗಳಿಂದ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಗುರುವಾರ ನಗರದ ಡಿ ದೆವರಾಜ ಅರಸು ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರಸಕ್ತ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾಥರ್ಿನಿಗಳಲ್ಲಿ ಅಂತಿಮ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಐಎಎಸ್, ಐ.ಪಿ.ಎಸ್., ಕೆಎಎಸ್, ಪಿ.ಎಸ್.ಐ., ಬ್ಯಾಂಕಿಂಗ್ ಇತ್ಯಾದಿ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು
ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿಧ್ಯಾಥರ್ಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು.
ಸತತ ಪ್ರಯತ್ನದಿಂದ ಗುರಿ ಸಾಧಿಸಲು ಸಾಧ್ಯ. ದಿನ ಪತ್ರಿಕೆ ಮತ್ತು ಮಾಸ ಪತ್ರಿಕೆಗಳನ್ನು ಓದುವ ಮೂಲಕ ಪ್ರಚಲಿತ ಘಟನೆಗಳ ಅರಿವು ಹೊಂದಬೇಕು. ಓದಿದನ್ನು ನೆನಪಿಟ್ಟುಕೊಳ್ಳುವ ಸ್ಮರಣ ಶಕ್ತಿಯನ್ನು ಬೆಳಸಿಕೊಂಡರೆ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಲು ಸಾಧ್ಯ ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳಿಗೆ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ಕೊರತೆಯಿದೆ. ಅದರಿಂದ ಉದಾಸಿನರಾಗಿ ವಿದ್ಯಾಥರ್ಿಗಳು ಹಿಂದೆ ಉಳಿಯುತ್ತಿದಾರೆ. ವಿದ್ಯಾಥರ್ಿಗಳು ಸಕರ್ಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಯಶಸ್ಸು ಸಾಧಿಸಿ ಬಡವರು ಹಾಗೂ ಶೋಷಿತರಿಗೆ ಸಹಾಯ ಮಾಡಿ ಸಾರ್ಥಕ ಜೀವನವನ್ನು ನಡೆಸಿ ಎಂದು ಸಲಹೆ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ರೆಡ್ಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರಾಘವೇಂದ್ರ ವಿಠ್ಠಲಕರ, ಧಾರವಾಡ ಕ್ಲಾಸಿಕ್ ಕೆ.ಎ.ಎಸ್. ಮತ್ತು ಐ,.ಎ.ಎಸ್.ಸ್ಟಡಿ ಸರ್ಕಲ್ನ ಪ್ರೊ.ವಿನಯಕುಮಾರ ಇತರರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಮಖಾನೆ ಎ.ಎಚ್.ಜಮಖಾನೆ ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎ.ಬಿ.ಗಾಯಕವಾಡ ವಂದಿಸಿದರು. ಧಾರವಾಡ ಕ್ಲಾಸಿಕ್ ಕೆ.ಎ.ಎಸ್. ಮತ್ತು ಐ,.ಎ.ಎಸ್.ಸ್ಟಡಿ ಸರ್ಕಲ್ನ ಕಾರ್ಯಕ್ರಮ ಸಂಯೋಜಕ ಪ್ರೊ.ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು.