ಶ್ರದ್ಧೆ, ಪ್ರಾಮಾಣಿಕತೆ ಮನುಷ್ಯನನ್ನು ಎತ್ತರಕ್ಕೆ ಒಯ್ಯಬಲ್ಲವು: ಆಶೀಫ ಶೇಠ
ಬೆಳಗಾವಿ 24: ಮನುಷ್ಯ ಸಾರ್ವಜನಿಕ ಜೀವನದಲ್ಲಲಾಗಲಿ ವೈಯಕ್ತಿಕ ಬದುಕಿನಲ್ಲಾಗಲಿ ನಂಬಿಕೆ ಮತ್ತು ನಿಷ್ಠೆಯಿಂದ ಇರಬೇಕು ಶ್ರದ್ಧೆ ಮತ್ತು ಪ್ರಾಮಾಣಿಕತೆಗಳು ಮನುಷ್ಯನನ್ನು ಎತ್ತರಕ್ಕೆ ಒಯ್ಯುತ್ತವೆ ಆಗ ಸಮಾಜ ಗುರುತಿಸಿ ಗೌರವಿಸುತ್ತದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು (ಆಸಿಫ್ ) ಶೇಠ ಹೇಳಿದರು. ಅವರು ಇಂದು ಬೆಳಗಾವಿಯ ಕನ್ನಡ ಭವನದಲ್ಲಿ ನಡೆದ ಅಂಜುಮನ್ ಕಾಲೇಜಿನ ಸೇವಾ ನಿವೃತ್ತ ಪ್ರಾಚಾರ್ಯರಾದ ಡಾ ಎಚ್ ಐ ತಿಮ್ಮಾಪೂರ ರವರ ಅಭಿನಂದನಾ ಗ್ರಂಥ ಗುಣಮಧುರ ಬಿಡುಗಡೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಡಾ ತಿಮ್ಮಾಪೂರರವರು ಪ್ರಾಚಾರ್ಯರಾಗಿ ಅಂಜುಮನ ಕಾಲೇಜಿನ ಬೆಳವಣಿಗೆಗೆ ನೀಡಿದ ಸೇವೆ ಅವಿಸ್ಮರಣೀಯ. ಅದರ ಸರ್ವತೋಮುಖದ ಬೆಳವಣಿಗೆಗೆ ಸಾಕಷ್ಟು ದುಡಿದಿದ್ದಾರೆ ಬೆಳೆಸಿದ್ದಾರೆ.ಒಬ್ಬ ಸಾಂಸ್ಕೃತಿಕ ಮನಸ್ಸಿನ ಪ್ರಾಧ್ಯಾಪಕರಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನಸ್ಸು ಮೂಡಲು ಕಾರಣರಾಗಿದ್ದಾರೆ ಎಂದರು. ಡಾ ಸರಜೂ ಕಾಟ್ಕರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಇದು ಕೇವಲ ಅಭಿನಂದನಾ ಗ್ರಂಥವಾಗಿರದೆ ಆಕರ ಗ್ರಂಥವೂ ಆಗಿದೆ ಭಾರತದ ಸಾರ್ವಭೌಮತೆಗೆ ಜಾತ್ಯಾತೀತಗೆ ನಮ್ಮೊಳಗೆ ಒಬ್ಬ ತಿಮ್ಮಾಪೂರ ರಂತಹ ಮನುಷ್ಯ ನಿರಬೇಕು ಎಂದು ಅಭಿಪ್ರಾಯ ಪಟ್ಟರು ಡಾ ಧನವಂತ ಹಾಜವ್ವಗೋಳ ಗ್ರಂಥ ಪರಿಚಯ ಮಾಡಿದರು ಡಾ ಬಸವರಾಜ ಜಗಜಂಪಿ ಅಭಿನಂದನಾ ನುಡಿಗಳನ್ನಾಡಿ ಡಾ ತಿಮ್ಮಾಪೂರರವರದು ಮುಸ್ಲಿಂ ದೇಹದಲ್ಲಿ ಕನ್ನಡದ ಮನಸ್ಸು.ಎಲ್ಲರನ್ನೂ ಪ್ರೀತಿಯಿಂದ ಒಪ್ಪಿಕೊಳ್ಳುವ ಶುದ್ದ ಮನಸ್ಸು ಎಂದರು. ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಗೌರವ ಸ್ವೀಕರಿಸಿ ಮಾತನಾಡಿದ ಡಾ ತಿಮ್ಮಾಪೂರ ಬೆಳಗಾವಿ ನನಗೆ ಏನೆಲ್ಲವನ್ನೂ ಕೊಟ್ಟಿದೆ ಅಂಜುಮನ್ ಸಂಸ್ಥೆ ನನ್ನ ಬೆಳವಣಿಗೆಗೆ ಬಹುಪಾಲು ಕಾರಣವಾಗಿದೆ ಎಲ್ಲರಿಗೂ ನಾನು ಆಜನ್ಮ ಋಣಿಯಾಗಿದ್ದೇನೆ ಎಂದರು ಅಭಿನಂದನಾ ಸಮಿತಿಯ ಮಾಡಿವಾಲೆ, ಬಸವರಾಜ ಕಟ್ಟೀಮನಿ ಟ್ರಸ್ಟ್‌ನ ಅಧ್ಯಕ್ಷ ಡಾ ವೈ ಬಿ ಹಿಮ್ಮಡಿ, ಕಾದಂಬರಿಕಾರ ಯ ರು ಪಾಟೀಲ, ಲೇಖಕಿ ಜೋತಿ ಬದಾಮಿ, ಡಾ ಪಾಂಗ್ಮೊಡೆ, ಸಂಪಾದಕರಾದ ಡಾ ಸುರೇಶ ಹನಗಂಡಿ, ಡಾ ಆನಂದ ಜಕ್ಕನ್ನವರ, ಫಾತಿಮಾ ತಿಮ್ಮಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ ರೋಹಿಣಿ ಗಂಗಾಧರ ಪ್ರಾರ್ಥನೆ ಗೀತೆ ಹಾಡಿದರು. ಡಾ ಆನಂದ ಜಕ್ಕನ್ನವರ ಸ್ವಾಗತಿಸಿದರು. ಬಸವರಾಜ ಗಾರ್ಗಿ ಮತ್ತು ಅಶೋಕ ಮಳಗಲಿ ನಿರೂಪಿಸಿದರೆ, ನಿಂಗಪ್ಪ ಸಂಗ್ರೇಶಕೊಪ್ಪ ವಂದಿಸಿದರು. ಎಂ ಎಸ್ ಇಂಚಲ್, ಡಾ ಎಸ್ ಎಂ ಗಂಗಾಧರಯ್ಯ, ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ, ಡಾ. ಸಾಹುಕಾರ್ ಕಾಂಬಳೆ, ಎ ಎ ಸನದಿ, ಆನಂದ ಪುರಾಣಿಕ, ರವಿ ಭಜಂತ್ರಿ, ಬಸವರಾಜ ಸುಣಗಾರ, ಬಿ ಎಸ್ ಜಗಾಪೂರ, ಮೋಹನ ಗುಂಡ್ಲೂರ, ಶಿ ಗು ಕುಸುಗಲ್ಲ, ಪ್ರೊ ಎಸ್ ವಿ ದಳವಾಯಿ, ಪ್ರೊ ನಝೀರಹಮ್ಮದ ದಳವಾಯಿ, ಡಾ ಕೇಶವ ನಾಯಕ ಮುಂತಾದ ಸಾಹಿತಿಗಳು, ಅಂಜುಮನ್ ಕಾಲೇಜು ಸಿಬ್ಬಂದಿ ಅವರ ಕುಟುಂಬದ ಸದಸ್ಯರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರು ಶಿಷ್ಯರು ಉಪಸ್ಥಿತರಿದ್ದರು.