71ನೇ ಹುಟ್ಟುಹಬ್ಬದ ನಿಮಿತ್ಯ ಶ್ರೀಮಂತ ಪಾಟೀಲರಿಗೆ ಅಭಿನಂದಿಸಿದ ಗಣ್ಯರು

71ನೇ ಹುಟ್ಟುಹಬ್ಬದ ನಿಮಿತ್ಯ ಶ್ರೀಮಂತ ಪಾಟೀಲರಿಗೆ ಅಭಿನಂದಿಸಿದ ಗಣ್ಯರು Dignitaries congratulated Shrimant Patil on his 71st birthday


   ಸಂಬರಗಿ, 31 : ಮಾಜಿ ಸಚಿವ ಅಥಣಿ ಸಕ್ಕರೆ ಕಾರ್ಖಾನೆ ಕೆಂಪವಾಡ ಅಧ್ಯಕ್ಷ ಶ್ರೀಮಂತ್ ಪಾಟೀಲ್ ಅವರ 71ನೇ ಹುಟ್ಟುಹಬ್ಬವನ್ನು ಕಾರ್ಖಾನೆ ಸ್ಥಳದಲ್ಲಿ  ಮಾಜಿ ಸಚಿವ ಮತ್ತು ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ನೂರಾರು ಕಾರ್ಯಕರ್ತರು  ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಕಾರ್ಖಾನೆ ಸ್ಥಳದಲ್ಲಿ ಹಾಜರಿದ್ದರು. ಶುಭಾಶಯ ಕೋರಿದರು. 

   ಈ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಶ್ರೀಮಂತ್ ಪಾಟೀಲ್ ಬರ ಪೀಡಿತ ಪ್ರದೇಶಗಳಿಗೆ ನೀರು ತರುವ ಕೆಲಸವನ್ನು ಮಾಡಿದ್ದಾರೆ ಮತ್ತು ಅವರ ಸಕ್ಕರೆ ಕಾರ್ಖಾನೆಯಿಂದಾಗಿ ರೈತರಿಗೆ ಹೆಚ್ಚಿನ ಬೆಲೆ ಸಿಕ್ಕಿದೆ. ಅವರ ಪ್ರಯತ್ನದಿಂದಾಗಿ, ಸಕ್ಕರೆ ಕಾರ್ಖಾನೆ ಈ ಪ್ರದೇಶದಲ್ಲಿ ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಬ್ಬು ಸಗನಕಿ ಮಡುತ್ತಿದ್ದರೆ ಆದ್ದರಿಂದ ರೈತರಿಗೆ ಒಳ್ಳೆಯ ದಿನಗಳು ಬಂದಿವೆ. ಗಡಿ ಪ್ರದೇಶದ ಅನೇಕ ಹಳ್ಳಿಗಳಲ್ಲಿ, ಸಕ್ಕರೆ ಕಾರ್ಖಾನೆಗಳ ಮೂಲಕ ನೀರಿನ ಯೋಜನೆಗಳನ್ನು ಒದಗಿಸುವ ಮೂಲಕ ಅವರು ಕೃಷಿಯನ್ನು ಸ್ವರ್ಗವನ್ನಾಗಿ ಮಾಡಿದ್ದಾರೆ. ಈ ಪ್ರದೇಶಕ್ಕೆ ಹಸಿರು ಕ್ರಾಂತಿಯನ್ನು ತರುವ ಕನಸನ್ನು ಅವರು ಸ್ವೀಕರಿಸಿದ್ದಾರೆ. ಭವಿಷ್ಯದಲ್ಲಿ ಈ ಪ್ರದೇಶವು ಹಸಿರು ಕ್ರಾಂತಿಯಾಗುವುದು ಖಚಿತ. 

   ಸಕ್ಕರೆ ಕಾರ್ಖಾನೆಯ  ಸ್ಥಳದಲ್ಲಿ , ಮಿರಜ  ಸೇವಾ ಸದನ್ ಆಸ್ಪತ್ರೆಯಿಂದ ,  ಆರೋಗ್ಯ ತಪಾಸಣೆ ನಡೆಸಿತು. ನೂರಾರು ಬಡ ಕುಟುಂಬಗಳನ್ನು ಪರೀಕ್ಷಿಸಲಾಯಿತು ಮತ್ತು ಅವರಿಗೆ  ದೇಹ, ಹೃದಯ ಕಾಯಿಲೆ, ಬಿಪಿ, ಸಕ್ಕರೆ, ದಂತ ತಪಾಸಣೆ ನೀಡಲಾಯಿತು. ಎಲ್ಲರಿಗೂ ಇದರ ಪ್ರಯೋಜನ ದೊರೆಯಿತು. ಎಲ್ಲಾರಿಗೆ  ಆಹಾರ ವ್ಯವಸ್ಥೆ ಮಾಡಲಾಯಿತು. 

  ಮಾಜಿ ಶಾಸಕ ಮಹೇಶ ಕುಮಟಳಿ ,ಜಿಲ್ಲಾ ಪಂಚಾಯತ್ ಮಾಜಿ  ಸದಸ್ಯ ಆರ್‌.ಎಂ.ಪಾಟೀಲ, ಕರ್ನಾಟಕ ಛತ್ರಿಯ ಮರಾಠ ಮಹಾಸಂಘದ ರಾಜ್ಯ ಉಪಾಧ್ಯಕ್ಷ  ಭಾವುಸಾಹೇಬ ಜಾಧವ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮುರಗಿಪ್ಪ ಮಗ್ದುಮ್, ರಾಮ ಮಗದುಂಮ,ಈಶ್ವರ ಕುಂಬಾರೆ ನಿಖಿತ್ ಪಾಟೀಲ್,, ಸಿದ್ದಪ್ಪ ಮೂದಕಣವರ, ಪ್ರಭಾಕರ ಚವ್ಹಾಣ, ನಾನಾಸಾಹೇಬ ಅವತಾಡೆ, ಅಪ್ಪಾಸಾಹೇಬ ಅವತಡೆ, ಬಾಳು ಹಜಾರೆ, ಅಸ್ಲಾಂ ನಲಗುಂದ ಕೃಷ್ಣ ಕೋಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕರಾದ ಬಾಪು ಪಾಟೀಲ, ವ್ಯವಸ್ಥಾಪಕರಾದ ಕಾಕಾಸಾಹೇಬ ಪಾಟೀಲ, ಮಹಾಂತೇಶ ಕಾಂಬಳೆ, ಬಾಳು ಮಗ್ದುಂ, ವಿಠ್ಠಲ ಐವಳೆ, ಶರದ ಭೋಸಲೆ, ದತ್ತ ಭೋಸಲೆ, ಯಶವಂತ ದಾರೇಕರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.