ಡಿಜಿಟಲ್ ಸಾಕ್ಷರತೆ ಯುವಕರ ಜ್ಞಾನಾಭಿವೃದ್ಧಿಗೆ ಅಡಿಪಾಯ
Digital literacy is the foundation for the knowledge development of youth
ಗದಗ 02 : ಡಿಜಿಟಲ್ ಸಾಕ್ಷರತೆಯು ಡಿಜಿಟಲ್ ಸಾಧನಗಳನ್ನು ಬಳಸುವ, ಮಾಹಿತಿ ಹುಡುಕುವ, ಮೌಲ್ಯಮಾಪನ ಮಾಡುವ, ಸಂಹವನ ಮಾಡುವ ಸಾಮರ್ಥ್ಯವಾಗಿದ್ದು, ಇದು ಆರ್ಥಿಕ ಪ್ರಗತಿಗೆ, ಉತ್ತಮ ಉದ್ಯೋಗಾವಕಾಶಕ್ಕೆ, ಸಾಮಾಜಿಕ ಒಳಗೊಳ್ಳುವಿಕೆಗೆ, ವಿಮರ್ಶಾತ್ಮಕ ಚಿಂತನೆಗೆ, ಸೈಬರ್ ಸುರಕ್ಷತೆಗೆ, ಸಮುದಾಯ ಭಾಗವಹಿಸುವಿಕೆಗೆ ಸಹಾಯ ಮಾಡುವುದೆಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಶ್ರೀಶವಿಠ್ಠಲ ಹೇಳಿದರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಡಿಜಿಟಲ್ ಸಾಕ್ಷರತೆಗಾಗಿ ಯುವಕರು’ ಕುರಿತು ಉಪನ್ಯಾಸ ಮಾಡುತ್ತ, ಇಂದಿನ ವೇಗದ ಮತ್ತು ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಡಿಜಿಟಲ್ ಸಾಕ್ಷರತೆ ಅಗತ್ಯವಾಗಿದ್ದು, ಯುವಕರು ಟಿಜಿಟಲ್ ಸಾಕ್ಷರತಾ ತಂತ್ರಜ್ಞಾನದಿಂದ ತಮ್ಮ ಅಧ್ಯಯನ, ಬರವಣಿಗೆ, ವಿಷಯ ಸಂಗ್ರಹವನ್ನು ಬಲಪಡಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಬಸವಂತಪ್ಪ ದೊಡ್ಡಮನಿ, ಶರಣಪ್ಪ ಚಿಕ್ಕೇನಕೊಪ್ಪ ಡಿಜಿಟಲ್ ಸಾಕ್ಷರತೆಯಿಂದ ಕೈಗೊಳ್ಳಬಹುದಾದ ಕಾರ್ಯಗಳ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಹಶಿಬಿರಾಧಿಕಾರಿ ಮಹಾಂತೇಶ ಅವರು ತಂತ್ರಜ್ಞಾನ ವೇಗವಾಗಿ ವಿಕಸನವಾಗುತ್ತಿದ್ದು, ಯುವಕರು ಆನ್‌ಲೈನ್‌ದಲ್ಲಿ ಲಭ್ಯವಿರುವ ಡಿಜಿಟಲ್ ಸಾಕ್ಷರತೆಗೆ ಸಂಬಂಧಿತ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಅರಿಯಬೇಕೆಂದು ಹೇಳಿದರು. ಸಹಶಿಬಿರಾಧಿಕಾರಿ ವಿಜಯಕುಮಾರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 