ಭಕ್ತಿ ಗೀತೆ ಸ್ಪರ್ಧೆ : ಶಿಕ್ಷಕಿ ಶಿಲ್ಪಾ ಕಲಿಕೇರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಭಕ್ತಿ ಗೀತೆ ಸ್ಪರ್ಧೆ : ಶಿಕ್ಷಕಿ ಶಿಲ್ಪಾ ಕಲಿಕೇರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Devotional song competition: Teacher Shilpa Kalikeri selected for district level

  ಹೂವಿನಹಡಗಲಿ   07- 2025-26ನೇ ಸಾಲಿನ ತಾಲ್ಲೂಕು ಮಟ್ಟದ ಶಿಕ್ಷಕರ ಸಹ ಪಠ್ಯ ಚಟುವಟಿಕೆ  ಸ್ಪರ್ಧೆಯಲ್ಲಿ ಕೊಯಿಲಾರಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ  ಶಿಲ್ಪಾ ಕಲಿಕೇರಿಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.ಪಟ್ಟಣದ ಲಿಟಲ್ ಚಾಂಪ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರ ಕಲ್ಯಾಣ ನಿಧಿವತಿಯಿಂದ ಆಯೋಜಿಸಿದ್ದ 2025-26 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ  ಶಿಕ್ಷಕಿ ಶಿಲ್ಪಾ ಕಲಿಕೇರಿ ಭಕ್ತಿ ಗೀತೆಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಕ್ಷೇತ್ರದ ಸಮನ್ವಯಾಧಿಕಾರಿ ಎ.ಕೋಟೆಪ್ಪ ಅವರು ಶಿಕ್ಷಕಿ ಶಿಲ್ಪಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.ಸಾಧನೆ ಗೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ಸಿಬ್ಬಂದಿ ಮತ್ತು ಶಾಲಾಭಿವೃದ್ದಿ ಸಮಿತಿ ಯವರು ಅಭಿನಂದಿಸಿದ್ದಾರೆ.