ಶ್ರದ್ಧಾ ಭಕ್ತಿಯ ಗಣೇಶ ವಿಸರ್ಜನೆ ಕಾರ್ಯಕ್ರಮ
Devotional Ganesh immersion program
ಶ್ರದ್ಧಾ ಭಕ್ತಿಯ ಗಣೇಶ ವಿಸರ್ಜನೆ ಕಾರ್ಯಕ್ರಮ
ತಾಳಿಕೋಟೆ 02: ಪಟ್ಟಣದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ಐದನೆಯ ದಿನವಾದ ಭಾನುವಾರ ಗಣೇಶ ವಿಸರ್ಜನೆಯು ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಮಳೆಯ ಮಧ್ಯೆಯೇ ನೆರವೇರಿತು. ಮಳೆ ಕೊಂಚ ತಣ್ಣಗಾಗುತ್ತಿದ್ದಂತೆ ಅನಂತಪುರ ಪೇಟೆಯಯವರು ಗಣಪತಿ ಮೂರ್ತಿಗಳಿಗೆ ಕೊಡೆಯ ರಕ್ಷಣೆ ಮಾಡಿಕೊಂಡೇ ಗಣಪತಿ ವಿಸರ್ಜಿಸಿದರು. ಪಟ್ಟಣದ ಸಜ್ಜನ, ಬಣಜಿಗ, ಭಾವಸಾರ ಕ್ಷತ್ರಿಯ, ಮರಾಠಾ, ರಾಜಪೂತ, ಕುರುಹಿನಶೆಟ್ಟಿ, ಸೋಮವಂಶ ಆರ್ಯ ಕ್ಷತ್ರೀಯ, ಆರ್ಯವಂಶ, ಮಾರವಾಡಿ, ಅಂಬಿಗೇರ, ಲಂಬಾಣಿ, ಗೋಂದಳಿ ಸೇರಿದಂತೆ ಇನ್ನೂ ಹಲವಾರು ಸಮಾಜ ಬಾಂಧವರು ತಮ್ಮ ಬಳಗದೊಂದಿಗೆ ಸೇರಿಕೊಂಡು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.ಗಣೇಶ ಮೂರ್ತಿಗಳ ಮುಂದೆ ಪ್ರತಿ ಸಂಜೆಯೂ ಮಕ್ಕಳಿಂದ ಮನರಂಜನೆ, ವಿವಿದ ಕಾರ್ಯಕ್ರಮಗಳು, ಭಕ್ತಿಯಿಂದ ಮಾಡಿದ್ದ ಅನ್ನಪ್ರಸಾಧ ವ್ಯವಸ್ಥೆ ಗಮನ ಸೆಳೆದವುಪಟ್ಟಣದ ವಿವಿಧ ಮನೆಗಳಲ್ಲಿ ಹಾಗೂ ಸಂಘಟನೆಗಳ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗಳಿಗೆ ಐದು ದಿನಗಳ ಕಾಲ ಮೋದಕ, ಲಾಡು, ಗರಿಕೆ, ಕಣಗಿಲೆ ಹೂ, ವಿವಿಧ ಫಲ ತಾಂಬೂಲಗಳನ್ನು ಪಂಚಕಜ್ಜಾಯ ಎಡೆ ಹಿಡಿದು, ಕಾಯಿ ಒಡೆದು ಭಕ್ತಿ ಮೆರೆದಿದ್ದ ಭಕ್ತರು ತಮ್ಮ ಬದುಕಲ್ಲಿ ಬರುವ ವಿಘ್ನಗಳನ್ನು ದೂರ ಮಾಡಿ ಕಷ್ಟಗಳನ್ನು ಪರಿಹರಿಸೆಂದು ಬೇಡಿಕೊಂಡು ವಿಸರ್ಜನಾ ಕಾರ್ಯ ನೆರವೇರಿಸಿದರು. ಪಟ್ಟಣದ ಬೀದಿಗಳಲ್ಲಿ ಪಟಾಕಿ ಸದ್ದಿನ ಮೊರೆತ ಕೇಳುತ್ತಿತ್ತು. ಪಟ್ಟಣದ ಹಿಂದು ಸಮುದಾಯಗಳ ಜನರು ತಮ್ಮ ಸಮುದಾಯಗಳೊಂದಿಗೆ ಗುಂಪುಗುಂಪಾಗಿ ಕಾರು, ಬೈಸಿಕಲ್, ದ್ವಿಚಕ್ರವಾಹನ, ಟ್ರ್ಯಕ್ಟರ್ನಲ್ಲಿ, ಕೆಲವರು ತಲೆ ಮೇಲೆ ಹೊತ್ತು ಹೀಗೆ ನಾನಾಬಗೆಯಲ್ಲಿ ಗಣೇಶಮೂರ್ತಿಗಳನ್ನು ಹೊತ್ತು, ಜಯಘೋಷ ಮಾಡುತ್ತ ಪಟಾಕಿ ಸಿಡಿಸುತ್ತ ವಿಸರ್ಜನೆಗೆ ಕರೆದೊಯ್ಯುತ್ತಿದ್ದ ದೃಶ್ಯ ಕಂಡು ಬಂದಿತು. ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿ ದೋಣಿ ನದಿಯ ನೆಲಮಟ್ಟದ ಸೇತುವೆ ಮೇಲೆ ಗಣೇಶ ಮೂರ್ತಿಗಳನ್ನು ವಿಸರ್ಜಿಸುವಾಗ ಅಪಾಯಗಳಾಗದಂತೆ ಪುರಸಭೆ ವತಿಯಿಂದ ಬ್ಯಾರಿಕೇಡ್ ನಿರ್ಮಿಸಿದ್ದರು. ಮೂರ್ತಿಗಳನ್ನು ಒಂದು ಬದಿಯಲ್ಲಿ ಸಾಲುಸಾಲಾಗಿ ಕೂಡ್ರಿಸಿ ಪೂಜೆ, ನೈವೇದ್ಯ ಸಲ್ಲಿಸಿ ಕಪೂರ, ಗಂಧದ ಕಡ್ಡಿ ಬೆಳಗಿ ಕಾಯಿ ಒಡೆದು ಗಣಪ್ಪ ಗಣಪ್ಪ ಮೋರೆಯಾ, ಮಂಗಳ ಮೂರ್ತಿ ಮೋರೆಯಾ ಎನ್ನುವ ಮಂಗಳ ಘೋಷಗಳೊಂದಿಗೆ ನದಿಯಲ್ಲಿ ವಿಸರ್ಜನೆ ಮಾಡಿದರು. ನಂತರ ಅಲ್ಲಿದ್ದ ಭಕ್ತರಿಗೆಲ್ಲ ಫಳಾರ ಹಂಚುತ್ತ ಮನೆಗೆ ತೆರಳಿದರು. ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ ಮಾಡಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 