ಮಲ್ಲಿಕಾರ್ಜುನ ಕಂಬಿ ಪೂಜೆ ಸಲ್ಲಿಸಿ ಪಾದಯಾತ್ರಾರ್ಥಿಗಳ ಬಿಳ್ಕೊಟ್ಟ ಭಕ್ತರು

ಮಲ್ಲಿಕಾರ್ಜುನ ಕಂಬಿ ಪೂಜೆ ಸಲ್ಲಿಸಿ ಪಾದಯಾತ್ರಾರ್ಥಿಗಳ  ಬಿಳ್ಕೊಟ್ಟ ಭಕ್ತರು Devotees offer prayers to Mallikarjuna Kambi and welcome pilgrims

ಮುಗಳಖೋಡ 02 : ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ಬೆಳಿಗ್ಗೆ  10 ಗಂಟೆಗೆ ಗಜಾನನ ವೃತ್ತದಲ್ಲಿ ಮಲ್ಲಿಕಾರ್ಜುನ ಕಂಬಿಗೆ ಪೂಜೆ ಸಲ್ಲಿಸಿ ಪಾದಯಾತ್ರಾರ್ಥಿಗಳಿಗೆ  ಹಣ್ಣು, ತಂಪು  ಪಾನೀಯ ನೀಡಿ ಬಿಳ್ಕೋಟ್ಟರು . ತರಕಾರಿ ವ್ಯಾಪಾರಿಗಳು,ಅಂಗಡಿ ವ್ಯಾಪಾರಸ್ತರು, ಕುಲಿಗೋಡ ತೋಟದಲ್ಲಿ,ವಿವೇಕಾನಂದ ವೃತ್ತದಲ್ಲಿ,ಗೋರವನ ಹಳ್ಳದ ಆಂಜನೇಯ ಮಂದಿರದಲ್ಲಿ ಹಾಗೂ ಬಡಿಗೇರ ಗೋಕಾಕ  ತೋಟದಲ್ಲಿ, ಚನ್ನಬಸವೇಶ್ವರರ ವಿದ್ಯಾವರ್ಧಕ ಸಂಘದಲ್ಲಿ  ಹಾಗೂ ದಾರಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಭಕ್ತರು  ಕಬ್ಬಿಣ ಹಾಲು, ಪಾನಕ, ಹಣ್ಣು,ಅಂಬಲಿ, ತಂಪು ಪಾನೀಯ ಸೇವೆ ಸಲ್ಲಿಸಿದರು.

ಮಧ್ಯಾಹ್ನ ಅಗಸಿ ಆಂಜನೇಯ ಮಂದಿರದಲ್ಲಿ ಮಲ್ಲಿಕಾರ್ಜುನ ಭಕ್ತರು ವಾದ್ಯವೃಂದದೊಂದಿಗೆ ದೇವರ  ನಾಮಾವಾಳಿಯ ಪಠಿಸಿ ಮಹಾಮಂಗಳಾರುತಿ ಮಾಡಿ ಕಂಬಿ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸಿದರು.  ಪಾದಯಾತ್ರಿಕರಿಗೆ ಶಿವರುದ್ರ​‍್ಪ ಹೊಸಪೇಟಿ ಬಂದು ಬಾಂಧವರು ಎರಡು ದಿನ  ಸಿಹಿ ಭೋಜನ ದಾಸೋಹ ಸೇವೆ ಸಲ್ಲಿಸಿ ಶುಭ ಹಾರೈಸಿದರು. ಖಿನಾಲ ಬಸವೇಶ್ವರ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮಂಗಳಾರತಿ  ಮಾಡಿ ಬಿಳ್ಕೋಟ್ಟರು. ಸುಕ್ಷೇತ್ರ ಮುಗಳಖೋಡ ಮಾರ್ಗವಾಗಿ ಸಾಗುವ   ಸುತ್ತ ಮುತ್ತಲು ತಾಲೂಕಿನ 25 ಗ್ರಾಮಗಳ ಯಾತ್ರಾರ್ಥಿಗಳು ಶ್ರೀ ಯಲ್ಲಾಲಿಂಗೇಶ್ವರ ಭೃಹ್ನ ಮಠದ ದರ್ಶನ ಪಡೆದು ಯಾತ್ರೆ ಕೈಗೊಂಡರು ಕ್ಷೇತ್ರದ ಭಕ್ತರು ತನು ಮನ ಧನ ದಿಂದ ದಾಸೋಹ ಸೇವೆ ಸಲ್ಲಿಸಿದರು.

ಮಲ್ಲಿಕಾರ್ಜುನ ಹಿರೇಮಠ, ರೇವಣಸಿದ್ದಯ್ಯ ಮಠಪತಿ ,ಷಡಕ್ಷರಿ ಗವಿಮಠ , ಗಿರಮಲ್ಲ ಮುಧೋಳ, ಮುತ್ತು ಕುಲಿಗೋಡ, ಬಸವರಾಜ ಎಪಿಎಂಸಿ, ಯಲ್ಲಾಲಿಂಗ ಬಾಳೋಜಿ, ಶೋಭಾ ಬಿರಗಡ್ಡಿ, ಸಂಗಮೇಶ ಶಿರೂರ ,ಮಲ್ಲಪ್ಪ ಮುಧೋಳ, ಮಹಾದೇವ ನಾಯಿಕ ,ಗುರು ಗೋಕಾಕ, ಶಿವಾನಂದ ಕುಲಿಗೋಡ, ರಮೇಶ ಸ್ವೀಟ್ ಮಾರ್ಟ, ಮೋಹನ ನಾಯಿಕ, ಮಹಾಲಿಂಗ ಮುಧೋಳ, ಸಂತೋಷ ಬೆಂಡವಾಡ, ರಮೇಶ ಕಾಪಶಿ, ಸಾತಪ್ಪ ಹುಲ್ಲೊಳ್ಳಿ ,ರಾಜು ಕುಲಿಗೋಡ, ಮಹಾದೇವ ಗೋಕಾಕ, ಸುರೇಶ ಕುಲಿಗೋಡ, ರಾಮು ಹುಲ್ಲೊಳ್ಳಿ, ಸಹದೇವ ಮೆಕ್ಕಳಕಿ, ಅಶೋಕ ಗೌಲೆತ್ತಿನವರ, ಪವನ ಬಾಬಣ್ಣವರ ,ಸೋಮು ಕಂಬಾರ, ಕಲ್ಲಪ್ಪ ಯಡವಣ್ಣವರ, ಶಂಕರ ಕುಲಿಗೋಡ, ಸದಾಶಿವ ಬಡಿಗೇರ, ಗಿರಮಲ್ಲ ಕುಲಿಗೋಡ, ಸಂತೋಷ ಕುಲಿಗೋಡ, ಸದಾಶಿವ ಯಡವಣ್ಣವರ, ಲಕ್ಷ್ಮಣ್ಣ ಗೋಕಾಕ ,ರತ್ನಪ್ಪ ಲಮಾಣಿ, ಹಣಮಂತ ತಳವಾರ ,ಪ್ರವೀಣ ರಜಪೂತ, ಮಹಾದೇವ ಬಾಳೋಜಿ, ಶ್ರೀಶೈಲ ಕುಲಿಗೋಡ ಇತರರು ಇದ್ದರು.