ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ದೇಶದ ಅಭಿವೃದ್ಧಿ ಸಾಧ್ಯ: ಪಾಟೀಲ

Development of country is possible when villages are developed: Patil


ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ದೇಶದ ಅಭಿವೃದ್ಧಿ ಸಾಧ್ಯ: ಪಾಟೀಲ 

ವಿಜಯಪುರ 11: ಗ್ರಾಮಗಳ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ ಹೇಳಿದರು. 

ಇಂದು ನಗರದ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆಗಾಗಿ ಸುಸ್ಥಿರ ಕೃಷಿ ಎಂಬ ಶಿರ್ಷಿಕೆಯೊಂದಿಗೆ ಕೃಷಿ ಮೇಳ 2024-25 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು 14 ಸಾವಿರ ಕೋಟಿ ರೂಗಳನ್ನು ವ್ಯಯಿಸಿ ಜಿಲ್ಲೆಯ ಬಹುತೇಕ ಭೂಮಿಯನ್ನು ನೀರಾವರಿಗೆ ಒಳಪಡಿಸಿದ್ದೇವೆ.  ಜಿಲ್ಲೆಯಲ್ಲಿರುವ ಕರೆಗಳನ್ನು ತುಂಬಿಸಿ ಭೂಮಿಗಳಲ್ಲಿ  ಅಂತರ್ಜಲ ಮಟ್ಟ ವೃದ್ಧಿಯಾಗಿ ಬೋರವೆಲ್ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಕಾಣಹುದಾಗಿದೆ. ಇದರಿಂದ ಜಿಲ್ಲೆಯಲ್ಲಿ 10 ಕಾರ್ಖಾನೆಗಳು ನಡೆಯುವಷ್ಟು ಕಬ್ಬನ್ನು ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ. ಜಿಲ್ಲೆಯು ನೀರಾವರಿಗೆ ಒಳ ಪಟ್ಟನಂತರ ಕೃಷಿ ಕಾರ್ಮಿಕರು  ಗುಳೆ ಹೋಗುವುದು ಕೂಡ ಕಡಿಮೆಯಾಗಿದೆ. ಪ್ರತಿ ವರ್ಷ ಒಂದು ಬೆಳೆಯನ್ನು ಬೆಳೆಯುತ್ತಿದ್ದ ರೈತರು ಇಂದು ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ ಇದರಿಂದ ರೈತರ ಆದಾಯವೂ ಕೂಡ ವೃದ್ಧಿಯಾಗಿದೆ. ಜಿಲ್ಲೆ ನೀರಾವರಿ ಹೊಂದಿದ ಮೇಲೆ ಸಾಕಷ್ಟು ಬದಲಾವಣೆಗಳಾಗಿವೆ ಈ ಕೃಷಿ ಮೇಳ ಹೊಸ ಹೊಸ ಆವಿಷ್ಕಾರ, ಪ್ರಯೋಗಗಳು, ನೂತನ ತಂತ್ರಜ್ಞಾನದಿಂದ ಕೂಡಿದೆ ರೈತರು ಸಮಗ್ರವಾದ ಮಾಹಿತಿ ಪಡೆದುಕೊಂಡು ಲಾಭದಾಯಕ ಬೆಳೆಗಳನ್ನು ಬೆಳೆಯುವಂತೆ ಅವರು ಕರೆ ನೀಡಿದರು.  

ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್‌.ಪಾಟೀಲ್ ಕೃಷಿ ಮೇಳದಲ್ಲಿ ರೈತರ ಮಾಹತಿಗಾಗಿ ಕೃಷಿ ಉತ್ಪನ್ನ ಹಾಗೂ ಮಾರಾಟಗಳ ಮಳಿಯನ್ನು ಉದ್ಘಾಟಿಸಿ ಚಾಲನೆ ನೀಡಿದರು. 

ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್‌. ನಾಡಗೌಡ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಜಗತ್ತಿನಲ್ಲಿ ಹಲವೆಡೆ ಹವಾಮಾನ ವೈಪರಿತ್ಯಗಳಿಂದ ಕೃಷಿ ಚಟುವಟಿಕೆಗಳಲ್ಲಿ ತುಂಬಾ ತೊಂದರೆ ಹಾಗೂ ಕಷ್ಟಗಳನ್ನು ಅನುಭವಿಸುವಂತಾಗಿದೆ ರೈತರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಇದರಿಂದ ರೈತರ ರಕ್ಷಣೆಗೆೆ ಸಂಶೋಧನೆಗಳು ಅತ್ಯವಶ್ಯಕವಾಗಿವೆ ಕೃಷಿ ಮೇಳಗಳಲ್ಲಿ ನುರಿತ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ,ಆವಿಷ್ಕಾರಗಳು ಹಾಗೂ ಪರಿಣಿತರಿಂದ ರೈತರಿಗೆ ಸಲಹೆಳಗನ್ನು ನೀಡುವುದರೊಂದಿಗೆ ರೈತರಿಗೆ ಬಹಳ ಅನುಕೂಲವಾಗಲಿದೆ. ಕೃಷಿ ಮೇಳಗಳು ಜಿಲ್ಲೆಗೆ ಮಾತ್ರ ಸೀಮಿತವಾಗದೆ ಹೆಚ್ಚು ಕೃಷಿ ಪ್ರಧಾನವಾದ ಪ್ರದೇಶಗಳಲ್ಲಿ ಇಂತಹ ಮೇಳಗಳನ್ನು ಆಯೋಜಿಸಿದರೆ ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ. ರೈತರು ಮಿಶ್ರ ಬೆಳೆಗಳನ್ನು ಹೆಚ್ಚು ಹೆಚ್ಚು ಬೆಳೆಯಬೇಕು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಶು ಸಂಗಪನಾ ಇಲಾಖೆ ಸಹಯೋಗದೊಂದಿಗ ಕರ್ತವ್ಯ ನಿರ್ವಹಿಸಿದಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಹೇಳಿದರು. 

ನಗರ ಶಾಸಕರಾದ ಬಸನಗೌಡ ಆರ್‌. ಪಾಟೀಲ(ಯತ್ನಾಳ)ಕೃಷಿ ಪ್ರಕಟಣೆಗಳ ಬಿಡುಗೆಡಗೊಳಿಸಿ ಮಾತನಾಡಿ ಪುರಾತನ ಕಾಲದಿಂದ ಬಂದ ಕೃಷಿ ಪದ್ಧತಿಗಳನ್ನು ನಾವು ಮರೆಯಬಾರದು ಪ್ರತಿಯೊಬ್ಬ ರೈತರು ಗೋವುಗಳನ್ನು ಸಾಕಣೆ ಮಾಡಬೇಕು ಗೋವು ರೈತರ ವರದಾನವಾಗಿದೆ ಹೊಸ ಹೊಸ  ಸಂಶೋದನೆ ಕೈಗೊಳ್ಳುಲು ಸರ್ಕಾರ ಹಾಗೂ ನಾವು ನೀವೆಲ್ಲರೂ ಬೆಂಬಲಿಸಬೇಕು ಎಂದು ಅವರು ಹೇಳಿದರು.  

ನಾಗಠಾಣ ಮತಕ್ಷೇತದ ಶಾಸಕರಾದ ವಿಠ್ಠಲ ಧೋಂಡಿಬಾ ಕಟಕಧೋಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಡಚಣ ಬಾಗದ ರೈತರ ಅನುಕೂಲಕ್ಕಾಗಿ 45 ಕೋಟಿ ರೂ ವೆಚ್ಚದಲ್ಲಿ  ಸ್ಕಾಡಾ ಗೇಟ ಅಳವಸುವುದರಿಂದ ಈ ಬಾಗದ 26 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ ಆದಷ್ಟು ಶೀಘ್ರವಾಗಿ ಈ ಕುರಿತು ಕ್ರಮ ವಹಿಸಲಾಗುವುದು ಮತ್ತು  ಈ ಬಾಗದ ಎಲ್ಲ ಜನಪ್ರತಿನಿಧಿಗಳು ನೀರಾವರಿಗೋಸ್ಕರ ಹೋರಾಟ ಮಾಡೋಣ ರೈತರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅವರು ಹೇಳಿದರು.  

ಕೃಷಿ ಮೇಳದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಜಿಲ್ಲೆಯ 7 ಜನ ಕೃಷಿಕರನ್ನು ಕೃಷಿ ಪಂಡಿತ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೃಷಿ ಪ್ರಕಟಣೆಗಳ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು. 

ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ, ಶ್ರೀಮತಿ ಪಾರ್ವತಿ ಕುರ್ಲೇ, ಬಸವರಾಜ ಶಾಂತಯ್ಯ ಕುಂದಗೋಳಮಠ, ರವಿಕುಮಾರ ಮಳಿಗೆರೆ, ಡಾ.ಅಶೋಕ ಸಜ್ಜನ, ಡಾ.ಆರ್ ಬಸವರಾಜಪ್ಪ, ಡಾ.ಬಿ.ಡಿ. ಬಿರಾದಾರ,  ಡಾ.ಆರ್‌.ಬಿ. ಬೆಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪ್‌.ಎಲ್, ಶಿಕ್ಷಕರು ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.