ಪ್ರದೇಶಗಳಿಗುಣವಾಗಿ ಸೂಕ್ತ ತಳಿಗಳನ್ನು ಅಭಿವೃದ್ಧಿಪಡಿಸಿ: ಸಿಂಗ್ ಕರೆ

ಧಾರವಾಡ 17: ಉತ್ತಮವಾಗಿ ಪ್ರಯೋಗ ತಾಕುಗಳನ್ನು ನಿರ್ವಹಿಸಿದಲ್ಲಿ ಮಾತ್ರ ಅವುಗಳ ದತ್ತಾಂಶಗಳ ಪ್ರಕಾರ ಸೂಕ್ತ ತಳಿಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಬಹುದು. ಅಲ್ಲದೇ ಮುಂಬರುವ ವರ್ಷಗಳಲ್ಲಿ ಆನ್ಲೈನ್ ಮೂಲಕ ದತ್ತಾಂಶಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ಇದರಿಂದ ಸೂಕ್ತ ಸಮಯದಲ್ಲಿ ಅವಶ್ಯಕ ಮಾಗರ್ೋಪಾಯಗಳನ್ನು ಕಬ್ಬಿನ ಬೆಳೆಯಲ್ಲಿ ತೆಗೆದುಕೊಳ್ಳಲು ಸಾಧ್ಯವೆಂದು ನವದೆಹಲಿಯ ಕೃಷಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ವಾಣಿಜ್ಯ ಬೆಳೆ ವಿಭಾಗದ ಸಹಾಯಕ ಮಹಾ ನಿದರ್ೆಶಕ ಡಾ.ಆರ್.ಕೆ.ಸಿಂಗ್ ಹೇಳಿದರು.     

ನವದೆಹಲಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಕಬ್ಬು ಸಂಶೋಧನೆ ಸಮನ್ವಯ ಯೋಜನೆ, ಕಬ್ಬು ಬೆಳೆ ಸಂಶೋಧನೆ ಕೇಂದ್ರ ಲಖನೌ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 14,15 ಮತ್ತು 16 ರಂದು ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ಕಬ್ಬು ಬೆಳೆ ವಾಷರ್ಿಕ ಕಾಯರ್ಾಗಾರ ಕುರಿತ  ಮೂರು ದಿನಗಳ ಈ ಕಾಯರ್ಾಗಾರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ಕನರ್ಾಟಕದಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ವಿವಿಧ ಕಾರಣಗಳಿಂದಾಗಿ ಕಬ್ಬು ಉತ್ಪಾದನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ರೈತರಿಗೆ ಹವಾಮಾನ ಆಧಾರಿತವಾದ ಕಬ್ಬು ಬೆಳೆ ತಳಿಗಳನ್ನು ಶಿಪಾರಸ್ಸು ಮಾಡುವದರಿಂದ ಆಥರ್ಿಕ ವೆಚ್ಚ ಕಡಿಮೆಯಾಗುತ್ತದೆ. ಮತ್ತು ರೈತರಿಗೆ ಹೆಚ್ಚು ಆದಾಯ ತರುತ್ತದೆ ಎಂದು ಅವರು ಹೇಳಿದರು.     

ಲಖನೌದ ಭಾರತೀಯ ಕಬ್ಬು ಬೆಳೆ ಸಂಶೋಧನಾ ಸಂಸ್ಥೆಯ ನಿದರ್ೆಶಕರು ಮತ್ತು ಕಬ್ಬು ಬೆಳೆಯ ಯೋಜನಾ ಸಂಯೋಜಕರಾದ ಡಾ. ಎ.ಡಿ ಪಾಟಕ್ ಅವರು ಮಾತನಾಡಿ, ಈ ವರ್ಷದ ಅಖಿಲ ಭಾರತ ಸಂಶೋಧನಾ ಯೋಜನೆಯಡಿಯಲ್ಲಿ ನಾಲ್ಕು ಉತ್ತಮ ಕಬ್ಬಿನ ತಳಿಗಳನ್ನು ಬಿಡುಗಡೆಗೊಳಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.     

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿದರ್ೆಶಕ ಡಾ ಪಿ.ಎಲ್.ಪಾಟೀಲ ಅವರು ಮಾತನಾಡಿ, ರೈತರು ಮಣ್ಣಿನಲ್ಲಿ ಇರುವ ಇಂಗಾಲದ ಪ್ರಮಾಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದೆಂದು ತಿಳಿಸಿದರು.    

ಕಾಯರ್ಾಗಾರದಲ್ಲಿ ತೆಗೆದುಕೊಂಡ ಪ್ರಮುಖ ನಿಧರ್ಾರಗಳ ಮತ್ತು ಸಲಹೆಗಳ ಕುರಿತು ತಳಿ ಅಭಿವೃದ್ಧಿ ವಿಭಾಗದಿಂದ ಕೊಯಮತ್ತೂರು ಕಬ್ಬು ತಳಿ ಅಭಿವೃದ್ಧಿ ಸಂಸ್ಥೆ ನಿದರ್ೆಶಕ  ಡಾ. ಭಕ್ಷಿರಾಮ, ಕಬ್ಬು ಬೇಸಾಯ ವಿಭಾಗದಿಂದ ಡಾ. ಟಿ.ಕೆ.ಶ್ರೀವಾತ್ಸವಾ, ಕಬ್ಬು ಸಸ್ಯ ರೋಗ ವಿಭಾಗದಿಂದ ಡಾ. ಆರ್. ವಿಶ್ವನಾಥನ್ ಮತ್ತು ಕಬ್ಬು ಕೀಟ ನಿರ್ವಹಣೆ ವಿಭಾಗದಿಂದ ಡಾ. ಎಮ್. ಆರ್. ಸಿಂಗ್ ಅವರು ಪ್ರಸ್ತುತ ಪಡಿಸಿದರು.     

ಕಾಯರ್ಾಗಾರದ ಕೊನೆಯಲ್ಲಿ ಉತ್ತಮ ಸಾಧನೆ ತೋರಿದ ದೇಶದ ಒಂಭತ್ತು ಕಬ್ಬು ಸಂಶೋಧನಾ ಕೇಂದ್ರಗಳಿಗೆ ಪ್ರಶಂಸನೀಯ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಕೇಶ್ವರ ಕಬ್ಬು ಸಂಶೋಧನಾ ಕೇಂದ್ರಕ್ಕೆ ಪುರಸ್ಕಾರ ನೀಡಲಾಯಿತು. ಡಾ. ಸಂಜಯ ಪಾಟೀಲ ಸ್ವಾಗತಿಸಿದರು ಮತ್ತು ಡಾ. ಎ.ಡಿ ಪಾಟಕ್, ವಂದಿಸಿದರು.