ವಿದ್ಯಾರ್ಥಿ ಗಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಿ
Develop a taste for literature in students
ವಿದ್ಯಾರ್ಥಿ ಗಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಿ
ಹೂವಿನ ಹಡಗಲಿ 05: ಪಠ್ಯ ದ ಜತೆಯಲ್ಲಿ ವಿದ್ಯಾರ್ಥಿ ಗಳಿಗೆ ಸಾಹಿತ್ಯ ಸಾಂಸ್ಕೃತಿಕ ಅಭಿರುಚಿ ಬೆಳೆಸುವುದು ಅತ್ಯಗತ್ಯ ಎಂದುನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್ ಎಂ ಬೆಟ್ಟಯ್ಯ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಮಲ್ಲಿಗೆ ಪ್ರಕಾಶನ 33 ನೇ ವರ್ಷದ ನಿಮಿತ್ತ ಮಲ್ಲಿಗೆ ಕಲಾ ಸಂಸ್ಥೆ, ಸರ್ಕಾರಿ ನೌಕರರ ಸಂಘ,ಕಸಾಪ, ಪತ್ರಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ 156 ನೇ ಮಹಾತ್ಮ ಗಾಂಧೀಜಿ ದಿನಾಚರಣೆ ಹಾಗೂ ದಸರಾ ಅಂಗವಾಗಿ ವಿಚಾರ ಸಂಕಿರಣ, ಕವಿಗೋಷ್ಠಿ,ದತ್ತಿನಿಧಿ ಸ್ವೀಕಾರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಾಲಾ ಕಾಲೇಜುಗಳಲ್ಲಿ ಕನ್ನಡದ ಸಾಹಿತಿಗಳಲೇಖಕರ ಪರಿಚಯ ಜತೆಗೆ ಸಾಹಿತ್ಯದ ಓದು ಮನುಷ್ಯನ ವ್ಯಕ್ತಿತ್ವವನ್ನೇ ಬದಲಾವಣೆ ಮಾಡುವ ಶಕ್ತಿ ಇದೆ ಎಂದರು.ಸಾಹಿತಿ ತೋ ಮ ಶಂಕ್ರಯ್ಯ ಮಲ್ಲಿಗೆ ನಾಡಿನ ವಿವಿಧ ಪ್ರಕಾಶಕರ ಪುಸ್ತಕ ಸೇವೆ ಸ್ಮರಿಸಿದರು.
ಕವಿ ಶಂಕರ್ ಬೆಟಗೇರಿ "ಬಾಪೂಜಿಗೆ ಋಣಿ" ಹನಿಗವನಗಳ ಕೃತಿ ಕುರಿತು ಮಾಹಿತಿ ಹಂಚಿಕೊಂಡರು.ಕಸಾಪ ಅಧ್ಯಕ್ಷ ಟಿ ಪಿ ವೀರೇಂದ್ರ, ಲೇಖಕ ಕರೀವೀರನಗೌಡ ಪಾಟೀಲ್,ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ಎಂ ದಯಾನಂದ ಇದ್ದರು.ಪ್ರಾಚಾರ್ಯ ಡಾ ಕೆ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಎಲ್ ಖಾದರ ಭಾಷಾ ಮಲ್ಲಿಗೆ ಪ್ರಕಾಶನದ ಕಾರ್ಯ ಚಟುವಟಿಕೆಗಳಿಗೆ 25,000 ರೂ ದತ್ತಿನಿಧಿ ಕೊಡುಗೆಯಾಗಿ ನೀಡಿದರು.ಕವಿಗೋಷ್ಠಿ: ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಕವಿಗಳು ಇಂತಹ ಗಂಭೀರ ವಿಷಯಗಳನ್ನು ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನಿವೃತ್ತ ಪ್ರಾಂಶುಪಾಲ ಶಾಂತಮೂರ್ತಿ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ ಕವಯಿತ್ರಿ ಸವಿತಾ ನಾಗಭೂಷಣ ರವರ ಗಾಂಧಿ ಕುರಿತಾದ "ಕರ್ಮಯೋಗಿ"ಕವಿತೆ ಓದಿ ಕವಿಗೋಷ್ಠಿಗೆ ಚಾಲನೆ ನೀಡಿದರು.ನಾಗಮಂಜುಳಾ ಜೈನ್ ನಾಗರಾಜ್ ಮಲ್ಕಿಒಡೆಯರ್ ತುಳಜಾನಾಯ್ಕ್ ಪದ್ಮರಾಜ್ ಜೈನ್ ರೋಷನ್ ಜಮೀರ್ ತಾರಾಸಿಂಗ ಇತರರು ಕವಿತೆ ವಾಚಿಸಿದರು.ಚಿತ್ತಾರ ಕಲಾಬಳಗದ ಶಿಕ್ಷಕಿ ಚಾಂದಿನಿ ನಿರ್ದೇಶನದಲ್ಲಿ ಮಾನ್ವಿತಾ ನಂದಿ, ಎಂ ಸಿರಿ ಮನಮೋಹಕ ಭರತನಾಟ್ಯ ಪ್ರದರ್ಶಿಸಿದರು.ಸಂಗೀತ ಶಿಕ್ಷಕ ಯುವರಾಜ್ ಗೌಡ ಸಂಗಡಿಗರು ಪ್ರಾರ್ಥಿಸಿದರು.ಸಿ ಸೋಮಶೇಖರ್, ಡಿ ಜಾವೇದ್ ಬಾಷಾ, ಬನ್ನೆಪ್ಪ ಕೆ ಟಿ ಎಂ ನಾಗಭೂಷಣ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 