ಹಳಕಟ್ಟಿ ಶಾಲೆಗೆ ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಭೇಟಿ
Deputy Coordinator of Integrated Education District Planning visited Halakatti School
ಆಲಮಟ್ಟಿ : ಎಸ್ಸೆಸ್ಸೆಲ್ಸಿ ಹಂತ ಪ್ರತಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ.ಈ ಮಹತ್ವರ ಸನ್ನಿವೇಶದಲ್ಲಿ ಮಕ್ಕಳು ತಮ್ಮ ಭವಿಷ್ಯತ್ತಿನ ಜೀವನ ರೂಪಿಸಿಕೊಳ್ಳಲು ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಶೈಕ್ಷಣಿಕ ಪಯಣ ಹಲ ಕಠಿಣಾತೀತ ರೀತಿಯಲ್ಲಿ ಸಾಗಿಸಬೇಕಾದ ಪರಿಸ್ಥಿತಿ ಎದುರಾದೀತು ಎಂದು ವಿಜಯಪುರ ಜಿಲ್ಲಾ ಸಮಗ್ರ ಶಿಕ್ಷಣ ಯೋಜನಾ ಉಪಸಮನ್ವಯಾಧಿಕಾರಿ ಮಂಜುನಾಥ ಗುಳೇದಗುಡ್ಡ ಹೇಳಿದರು. ಇಲ್ಲಿನ ಎಸ್.ವಿ.ವಿ.ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಗೆ ಬುಧವಾರ ಅನೀರೀಕ್ಷಿತ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ಪ್ರಗತಿ ಪರೀಶೀಲಿಸಿ ಮಾತನಾಡಿದರು.ನೇರವಾಗಿ ಹತ್ತನೇ ತರಗತಿ ಮಕ್ಕಳ ಕಲಿಕಾ ಕೊಠಡಿಗೆ ತೆರಳಿದ ಮಂಜುನಾಥ ಗುಳೇದಗುಡ್ಡ ಅವರು, ಮಕ್ಕಳ ಸ್ಪಷ್ಟ ಓದು, ಬರಹದ ಚಿತ್ರಣ ಪರೀಶೀಲಿಸಿದರು. ಬಳಿಕ ಪ್ರಶ್ನೋತ್ತರ ಮಾಲಿಕೆಯಲ್ಲಿ ತೊಡಗಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದರು. ಸಾಧಾರಣ ಮಕ್ಕಳ ಸ್ಪಂದನೆಗೆ ಉತ್ತೇಜಿಸಿದರು. ಪ್ರತಿಭಾನ್ವಿತರಿಗೆ ಇನ್ನಷ್ಟು ಪ್ರೇರಿಪಿಸಿದರು.
ಒತ್ತಡ ಹಾಗೂ ನಕಾರಾತ್ಮಕ ಭಾವನೆಯಿಂದ ಮಕ್ಕಳು ಮೊದಲು ಹೊರಬರಬೇಕು. ಕಲಿಕೆಗಾಗಿ ಹಿಂಜರಿಕೆ ಭಯಬೇಡ. ನಿರಂತರ ಸ್ಪಷ್ಟ ಓದು ಹಾಗೂ ನೀಟ್ ಬರಹದಲ್ಲಿ ತೋಡಗಿದರೆ ಸಾಕು.ಇದುವೇ ನಿಮ್ಮ ಶೈಕ್ಷಣಿಕ ಬದುಕಿಗೆ ಆರಂಭದಲ್ಲಿ ದಾರೀದೀಪ ಅಗಬಲ್ಲವು. ಆ ನಿಟ್ಟಿನಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಬೌದ್ಧಿಕ ಸಾಮಥ್ರ್ಯ ಬೆಳೆಸಿಕೊಳ್ಳುವುದು ತೀರಾ ಅಗತ್ಯವಿದೆ ಎಂದರು.
ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣ ಜ್ಞಾನ ಅರಿವಿನೆಡೆಗೆ ಹೆಚ್ಚು ಗಮನ ಹರಿಸಬೇಕು.ಕಲಿಕಾ ಜೀವನದಲ್ಲಿ ಒಳ್ಳೆಯ ಕನಸು ಜೊತೆಗೆ ಉತ್ಪ್ರೇಕ್ಷಿತ ದಿಟ್ಟ ಗುರಿಯೊಂದಿಗೆ ಉತ್ತಮ ಸಾಧನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕಲಿಕೆಗೆ ಧೃಡ ಮನಸ್ಸು ಬಲು ಮುಖ್ಯ. ಕಾರಣ ಜಾಣ್ಮೆ, ತಾಳ್ಮೆ, ಕಾರ್ಯಕ್ಷಮತೆಯಿಂದ ಇಂದಿನ ಸ್ಪಧಾ9ತ್ಮಕ ದಿನಮಾನಗಳಲ್ಲಿ ಮಕ್ಕಳು ತಮ್ಮ ಜ್ಞಾನ ಮಟ್ಟ ಸುಧಾರಿಸಿಕೊಂಡು ಸಾಧರಪಡಿಸಬೇಕು. ತಮ್ಮಲ್ಲಿನ ಪ್ರತಿಭೆಯನ್ನು ಸಮಾಜದಲ್ಲಿ ಬಿಂಬಿಸಬೇಕು.ಜೀವನ ಸಾರ್ಥಕತೆಯಡೆಗೆ ಕೊಂಡೊಯ್ಯಲು ಯತ್ನಿಸಬೇಕೆಂದು ಮಕ್ಕಳ ಬಳಗಕ್ಕೆ ಕಿವಿ ಮಾತು ಹೇಳಿದ ಅವರು, ಕಠಿಣ ಕೆಲಸಗಳು ಆಲಸಿಗಳಿಗೆ ಸ್ವಲ್ಪ ಕಷ್ಟವಾಗುತ್ತದೆ. ಏಕಾಗ್ರತೆಯಿಂದ ಮನಸ್ಸು ಇಟ್ಟು ತಮ್ಮ ಕೆಲಸ,ಕಾಯಕದಲ್ಲಿ ತೋಡಗಿಸಿಕೊಂಡರೇ ಯಾವುದು ಕೆಲಸ ಕಷ್ಟಕರವಾಗಿ ಪರಿಣಮಿಸದು. ಒಳ್ಳೆ ಭಾವ ಪರಿವರ್ತನೆ ದಿಕ್ಸೂಚಿಯಾಗಿದೆ. ಕೆಲಸದಿಂದ ಫಲಾಯನ ಪ್ರವೃತ್ತಿ ಹೊಂದುವವರಿಗೆ ಎಲ್ಲವೂ ಕಠಿಣವೇ ಎಂದು ಮಂಜುನಾಥ ಗುಳೇದಗುಡ್ಡ ಮಾಮಿ9ಕವಾಗಿ ನುಡಿದರು.
ಪ್ರಗತಿ, ಪ್ರತಿಭೆ ಶಿಕ್ಷಕರ ಕೈಯಲ್ಲಿ ಅರಳಿಕೆ : ಮಕ್ಕಳನ್ನು ತಿದ್ದಿ,ತೀಡಿ ಶೈಕ್ಷಣಿಕ ಪರಿವರ್ತನೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣದ ಪ್ರಗತಿ, ಪ್ರತಿಭೆಗಳನ್ನು ಬೆಳಗಿಸಲು ಸದಾ ಪ್ರಯತ್ನಿಸುತ್ತಿರಬೇಕು. ಗುಣಮಟ್ಟದ ಶಿಕ್ಷಣ ವಾತಾವರಣ ಕಲ್ಪಿಸಬೇಕು. ಮಕ್ಕಳ ಬದುಕಿನಲ್ಲಿ ಶಿಕ್ಷಣ ಜ್ಞಾನ ಫಸರಿಸಬೇಕು. ಶಿಕ್ಷಣದ ಧ್ಯೇಯವನ್ನು ಅರಿತು ಕಾಯಕ ಗೈಯಬೇಕು ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಕಲಿಕಾ ಮುಖ್ಯ ವಾಹಿನಿಗೆ ತರಬೇಕು. ಆ ನಿಟ್ಟಿನಲ್ಲಿ ಶಿಕ್ಷಕರಲ್ಲಿ ಪ್ರೇರಣಾದಾಯಕ ಉತ್ತೇಜನ ಇರಲಿ. ಮಕ್ಕಳ ಭಾವನೆಗಳನ್ನು ಅರಿತು ಅವರ ಮನದಾಳದಲ್ಲಿ ಇಳಿಯುವಂತೆ ಭಾವನಾತ್ಮಕವಾಗಿ ಪಾಠ ಪ್ರವಚನ ಮೌಲ್ಯಯುತವಾಗಿ ಬೋಧಿಸಿ ಮನಗೆಲ್ಲಿ ಎಂದರು.
ಶಿಕ್ಷಕರ ಮುಂದಾಲೋಚನಾ ಪರಿಶ್ರಮದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಕಾಣಲು ಸಾಧ್ಯ. ಕಾಯಕ ವೃತ್ತಿಯ ಜೊತೆಗೆ ಮಕ್ಕಳ ಭವಿಷ್ಯದ ಕುರಿತು ಇಂದು ನಾವುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಮಕ್ಕಳನ್ನು ಪರೀಕ್ಷೆಗೆ ಪರಿಪಕ್ವವಾಗಿ ಸಿದ್ದತೆ ಮಾಡಬೇಕಾಗಿದೆ. ಸ್ವಹಿತಾಸಕ್ತಿಯಿಂದ ಸೂಕ್ತ ಹೊಣೆಗಾರಿಕೆ ನಿಭಾಯಿಸಬೇಕಾಗಿದೆ. ಶಿಕ್ಷಣ ಇಲಾಖೆ ಶಿಕ್ಷಕರ ಮೇಲೆ ಭರವಸೆ ಇರಿಸಿದ್ದು ಮಕ್ಕಳ ವಿದ್ಯಾಭ್ಯಾಸದ ಜ್ಞಾನ ವಿಕಸನಕ್ಕೆ ಆದ್ಯತೆ ನೀಡಿ ಫಲಿತಾಂಶ ವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಈಮಹತ್ಕಾರ್ಯಕ್ಕೆ ಅಣಿಯಾಗಬೇಕು ಎಂದು ಶಿಕ್ಷಕ ಸಮೂಹಕ್ಕೆ ಮಂಜುನಾಥ ಗುಳೇದಗುಡ್ಡ ಅವರು ಸಲಹೆ ನೀಡಿದರು.
ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಗುಲಾಬಚಂದ ಜಾಧವ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 