ದಾಂಡೇಲಿಯಲ್ಲಿ ತಾಲೂಕಾ ಕಛೇರಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹ

ದಾಂಡೇಲಿ 29: ನಗರಸಭೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಅವರನ್ನು ಭೇಟಿ ಮಾಡಿದ ದಾಂಡೇಲಿ ಸಮಗ್ರ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ದಾಂಡೇಲಿ ತಾಲೂಕು ಎಂದು ಘೋಷಣೆಯಾದರು ಪೂತರ್ಿ ಪ್ರಮಾಣದ ತಾಲೂಕಾ ಕಛೇರಿಗಳು ಪ್ರಾರಂಭವಾಗದೆ ಇರುವುದರಿಂದ ದಾಂಡೇಲಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಆದಷ್ಟು ಬೇಗನೆ ತಾಲೂಕಾ ಕಛೇರಿಗಳು ಅತಿ ಶೀಘ್ರದಲ್ಲಿ ಪ್ರಾರಂಭಿಸಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು ಅಲ್ಲದೆ ನಗರದ ವಿವಿಧ ಸಮಸ್ಯೆಗಳ ಬಗ್ಗೆ ವಿವರವಾಗಿ ಚಚರ್ಿಸಿದರು.

ಅನೇಕ ವರ್ಷಗಳಿಂದ ಅಧಿಕಾರಿಗಳು ನಗರದಲ್ಲಿ ಪ್ರಯಾಣಿಕ ರೈಲು ಪ್ರಾರಂಭಿಸುವ ಭರವಸೆ ನೀಡುತ್ತ ಬಂದಿರುವರಾದರೂ ಇದುವರೆಗೂ ರೈಲು ಪ್ರಾರಂಭಿಸಲು ಕ್ರಮ ಕೈಗೊಂಡಿರುವುದಿಲ್ಲ. ಗೃಹ ಮಂಡಳಿಯವರು ಸುಮಾರು 3500 ನಾಗರಿಕರಿಂದ 8 ವರ್ಷಗಳ ಹಿಂದೆ ಹಣ ಸಂಗ್ರಹಿಸಿದ್ದಾರೆ. ಆದರೆ ಗೃಹ ಮಂಡಳಿಯ ಈ ಯೋಜನೆ ಇದುವರೆಗು ಕಾರ್ಯ ರೂಪಕ್ಕೆ ಬಂದಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ 2.5 ಕೋಟಿ ಮಂಜೂರಾಗಿ ಎರಡು ವರ್ಷ ಕಳೆದರೂ ಸಹ ಕಾಮಗಾರಿ ಪೂರ್ಣಗೊಳ್ಳದೆ ಕಳಪೆ ಮಟ್ಟದಾಗಿದೆ ಕಾರಣವಿಲ್ಲದೆ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ನಿಲ್ದಾಣದಲ್ಲಿ ಸಾರಿಗೆ ಬಸ್ಗಳ ಪ್ರವೇಶದ್ವಾರದ ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ಚಾಲಕರಿಗೆ ಬಸ್ ನಿಲ್ದಾಣದ ಒಳ ಪ್ರವೇಶವೆ ಕಠಿಣವಾಗಿ ಪರಿಣಮಿಸಿದೆ. ಇದರಿಂದ ಸಾರ್ವಜನಿಕರಿಗಲ್ಲದೆ ಚಾಲಕರಿಗೂ ಸಹ ದಿನನಿತ್ಯದ ಸಂಕಟವಾಗಿ ಪರಿಣಮಿಸಿದೆ ಎಂದು ಪದಾಧಿಕಾರಿಗಳು ವಿವರಿಸಿದರು. ಹಳೆ ನಗರಸಭೆ ಕಟ್ಟಡದಲ್ಲಿ ತಾಲೂಕು ಪಂಚಾಯತ ಕಛೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆಗಳ ಕಛೇರಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ, ಅಲ್ಲದೇ ಸಮಾಜ ಕಲ್ಯಾಣ ಇಲಾಖೆಗಳ ಕಛೇರಿಗಳಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸುವ ಯೋಜನೆಯಿದೆ ಹಾಗೂ ಪಿ.ಡಬ್ಲೂ.ಡಿ ಕಛೇರಿಯನ್ನು ಪಿ.ಡಬ್ಲೂ.ಡಿ ಬಂಗಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಗೂರನಗರ ಮರಾಠಿ ಶಾಲೆ ಕಟ್ಟಡದಲ್ಲಿ ಈ ಎಲ್ಲ ಇಲಾಖೆಗಳ ಕಛೇರಿಗಳನ್ನು ಪ್ರಾರಂಭಿಸಲು ಮಂಜೂರಾತಿ ಕಳುಹಿಸಲಾಗಿದೆ ಎಂದು ವಿವರಿಸಲಾಯಿತು. ತಮ್ಮನ್ನು ಭೇಟಿ ಮಾಡಿದ ದಾಂಡೇಲಿ ಸಮಗ್ರ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಈಗಾಗಲೆ ಜಿಲ್ಲಾ ಮಟ್ಟದ ಅಧಿಕಾರಿಗಳ  ಜೊತೆ ಕಾರವಾರದಲ್ಲಿ ಸಭೆ ನಡೆಸಿ 26 ಇಲಾಖೆಗಳ ಕಛೇರಿಯನ್ನು ದಾಂಡೇಲಿ ತಾಲೂಕಿಗಾಗಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಸಂಬಂಧಪಟ್ಟ ಇಲಾಖೆಗಳ ಹಣಕಾಸಿನ ಮಂಜೂರಾತಿಗಾಗಿ ಯೋಜನೆಯ ರೂಪರೇಷೆಗಳನ್ನು  ಕಳುಹಿಸಲಾಗಿದೆ ಆದಷ್ಟು ಬೇಗನೆ ಕಛೇರಿ ಪ್ರಾರಂಭಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಪ್ರಯಾಣಿಕ ರೈಲು ಪ್ರಾರಂಭ, ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ, ಗೃಹ ಮಂಡಳಿಯ ಗೃಹ ನಿಮರ್ಾಣ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚಚರ್ಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಅಕ್ರಮ ಖಾನ್, ಬಲವಂತ ಬೊಮ್ಮನಹಳ್ಳಿ, ಫೀರೋಜ್ ಫೀರಜಾದೆ, ಅಶೋಕ ಪಾಟೀಲ, ರಾಘವೇಂದ್ರ ಗಡಪ್ಪನವರ, ಅಬ್ದುಲ್ ವಾಹಬ ಬಾಂಸಾರಿ, ರಮೇಶ ನಾಯ್ಕ, ಡಿ.ಎಮ್.ಮುಲ್ಲಾ, ರಫೀಕ ಮಿರಜಕರ ಮುಂತಾದವರು ಉಪಸ್ಥಿತರಿದ್ದರು.