ಅಮಿತ್ ಷಾ ರಾಜೀನಾಮೆಗೆ ಒತ್ತಾಯ:ರಮೇಶ್ ಗೋನಾಳ್

Demanding Amit Shah's resignation: Ramesh Gonal

ಅಮಿತ್ ಷಾ ರಾಜೀನಾಮೆಗೆ ಒತ್ತಾಯ:ರಮೇಶ್ ಗೋನಾಳ್   

ಬಳ್ಳಾರಿ 21: ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬಳ್ಳಾರಿ ಜಿಲ್ಲಾ ಶಾಖೆ ಲಕ್ಷ್ಮಿ ನಾರಾಯಣ ನಾಗವರ ಬಣ ವತಿಯಿಂದ ಕೇಂದ್ರ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ವಿರುದ್ಧ ಅಗೌರವದ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನುಖಂಡಿಸಿ ಶಾ ರನ್ನು ಬಂದಿಸುವಂತೆ  ಜಿಲ್ಲಾಧಿಕಾರಿಯ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು 

.ಈವೇಳೆ ಜಿಲ್ಲಾ ಸಂಘಟನಾ ಸಂಚಾಲಕರಾದಎಚ್ ರಮೇಶ್ ಗೋನಾಳ್ ಮಾತನಾಡುತ್ತಾ ಭಾರತ ಸಂವಿಧಾನ ಶಿಲ್ಪಿ ಇಡೀ ದೇಶಾದ್ಯಂತ ವಿಶ್ವಜ್ಞಾನಿ ಎನಿಸಿಕೊಂಡಿರುವ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತ ಸಂವಿಧಾನವನ್ನು ಒಪ್ಪಿಕೊಂಡು ಅದರ ಮೌಲ್ಯಗಳ ವಿಶೇಷತೆಗಳನ್ನು ತಾವು ತಮ್ಮ ರಾಷ್ಟ್ರಗಳಲ್ಲಿ ಅಳವಡಿಸಿಕೊಂಡಿರುವ ವಿಶ್ವದ ಪ್ರಜಾಪ್ರಭುತ್ವ ಆಡಳಿತಕ್ಕೆ ನಾಡಿ ಮಿಡಿದಂತಿರುವ ಜಾತ್ಯತೀತ ಧರ್ಮತೀತ ಸಮಾನತೆಗಳನ್ನು ಬಿಂಬಿಸಿರುವ ಏಕತೆಯನ್ನು ಸಾರುತ್ತಿರುವ ಅತ್ಯಮೂಲ್ಯ ಸಂವಿಧಾನವನ್ನು ರೂಪಿಸಿರುವ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಮಾತನ್ನು ಅವಿವೇಕಿ, ಧರ್ಮದ ಅಧಿಕಾರಕಾಂಕ್ಷಿ ಮನೋಭಾವನೆಯನ್ನು ಹೊಂದಿರುವ ಅಲ್ಪಜ್ಞಾನಿ ಸಂಕೋಚದ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾ ಅಂಬೇಡ್ಕರ್ ಅವರ ಬಗ್ಗೆ ತನ್ನ ಸಣ್ಣತನವನ್ನು ತೋರಿರುವ ಅಮಿತ್ ಷಾ ರವರು ಭಾರತೀಯ ಪ್ರಜೆಗಳಲ್ಲಿ ಕ್ಷಮೆಯಾಚಿಸಬೇಕು ಅಲ್ಲದೆ ತನ್ನ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು, ದೇಶದ ಒಬ್ಬ ಗೃಹ ಮಂತ್ರಿಯಾಗಿ ಸರ್ವಧರ್ಮಗಳ ಬಗ್ಗೆ ಸರ್ವ ಭಾಷೆಗಳ ಬಗ್ಗೆ ಸಂಕೀರ್ಣತೆಯನ್ನು ಒಳಗೊಂಡಿರುವ ವ್ಯಕ್ತಿ ಆಗಿರಬೇಕೆ ಹೊರತು ಕೇವಲ ಮೋದಿ, ಮೋದಿ ಮಾಮಾ ರಾಮ ರಾಮ ನಾಮ ವನ್ನು ಜಪಿಸುವುದು ಆತನ ನೈಜತೆಯನ್ನು ಮೌಡ್ಯತೆಯನ್ನು ಪ್ರತಿಬಿಂಬಿಸುವ ವಿಷಯವಾಗಿದೆ. ಸಂವಿಧಾನದ ಭಿಕ್ಷೆಯಿಂದಾಗಿ ಅಧಿಕಾರ ಪಡೆಯುತ್ತೇನೆ ಎನ್ನುವ ಅಲ್ಬಜ್ಞಾನವೂ ಅವರಿಗಿಲ್ಲ, ಇಂತಹ ನೀಚ ಬುದ್ಧಿಯ ವ್ಯಕ್ತಿ ದೇಶದ ಗೃಹ ಮಂತ್ರಿಯಾಗಿರುವುದು ನಮ್ಮ ದುರದೃಷ್ಟವೇ ಸರಿ ಅನಿಸುತ್ತದೆ. ಕೇಂದ್ರ ಗೃಹ ಮಂತ್ರಿಯಾಗಿರುವ ಇವರು ಸಂವಿಧಾನದ ಪೀಠಿಕೆಯನ್ನು ಕಳೆದುಕೊಂಡಿಲ್ಲಂತಿಲ್ಲ, 

 ಅಂಬೇಡ್ಕರ್ ವಿಚಾರವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವ ಯೋಗ್ಯತೆ ಬೆಳೆಸಿಕೊಳ್ಳುವುದು ಒಳ್ಳೆಯದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಹಾಗೂ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ವಿಶ್ವಜ್ಞಾನಿಯಾಗಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪರಿಪಾಲಿಸಿ ಅವರ ರಚನೆಯ ಸಂವಿಧಾನಕ್ಕೆ ದಕ್ಕೆ ಬರದಂತೆ ಕಾಪಾಡಬೇಕಾಗಿದೆ ಅದನ್ನು ಬಿಟ್ಟು ದೇಶದ ಸಂವಿಧಾನವನ್ನೇ ಬದಲಿಸುವ ನಿರ್ಧಾರವನ್ನು ಕೈ ಬಿಡಬೇಕು ಅಮಿತ್ ಶಾ ಅವರೇ ನಿಮ್ಮ ಸರ್ಕಾರದ ಹದಿನೈದು ವರ್ಷಗಳ ಸಾಧನೆ ಏನು? ನ್ಯಾಯ ಕೇಳಲು ಬಂದ ಅನ್ನದಾತರ ಮೇಲೆ ಹಲ್ಲೆ, ಸಂವಿಧಾನ ತಿದ್ದುಪಡಿ ಮಾಡುವ ಹೇಳಿಕೆಗಳು, ಸಂವಿಧಾನ ರಚಿಸಿದ ಮಹಾನುಭಾವನ ಮೇಲೆ ಅಗೌರವದ ಹೇಳಿಕೆ ನೀಡುವುದೇ ನಿಮ್ಮ ಅಚ್ಛೆದಿನ್ ಅಂದುಕೊಂಡಿದ್ದೀರಾ ಎಂದು ಆಕ್ರೋಶಗೊಂಡರು ಈ ಸಂದರ್ಭದಲ್ಲಿ ಟಿ ತಾಯಣ್ಣ,ಎಸ್ ನಾಗಭೂಷಣ, ಎಸ್‌. ದೇವಾನಂದ ಕುಮಾರ್, ಎಂ ಶಿವಪ್ಪ, ಹನುಮಪ್ಪ ರಾಮಾಂಜನೇಯಲು ಸುಧಾಕರ ವಿವಿಧ ಪದಾಧಿಕಾರಿಗಳು ಸದಸ್ಯರು ಇತರರು ಭಾಗವಹಿಸಿದ್ದರು.