ರವಿ ಡಿ ಚನ್ನಣ್ಣನವರ ವರ್ಗಾವಣೆ ಆದೇಶ ಹಿಂಪಡೆದು ಕಮಿಷನರೇಟ್ ಹುದ್ದೆಗೆ ನಿಯೋಜಿಸಲು ಆಗ್ರಹ

ರವಿ ಡಿ ಚನ್ನಣ್ಣನವರ ವರ್ಗಾವಣೆ ಆದೇಶ ಹಿಂಪಡೆದು ಕಮಿಷನರೇಟ್ ಹುದ್ದೆಗೆ ನಿಯೋಜಿಸಲು ಆಗ್ರಹ Demand to withdraw Ravi D Channanna's transfer order and assign him to the Commissionerate post

ಹುಬ್ಬಳ್ಳಿ 7: ಕರ್ನಾಟಕ ಜನಪ್ರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ವರ್ಗಾವಣೆಯ ವಿರುದ್ಧ ಸಾರ್ವಜನಿಕ ವಲಯ ಹಾಗೂ ಅವರ ಅಭಿಮಾನಿ ಬಳಗ ಮತ್ತು ಯುವ ನಾಯಕರಾದ ಸುರೇಶ ಚಲವಾದಿ ಆಗ್ರಹ ವ್ಯಕ್ತಪಡಿಸಿದ್ದಾರೆ. ರವಿ ಡಿ ಚನ್ನಣ್ಣನವರ ಅವರನ್ನು ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ವರ್ಗಾವಣೆ ಮಾಡಿರುವ ಕ್ರಮ ಸೂಕ್ತವಲ್ಲ ಎಂದು ಸಾರ್ವಜನಿಕರು ಮತ್ತು ಅವರ ಅಭಿಮಾನಿ ಬಳಗ ಹೇಳಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗದಗ ಜಿಲ್ಲಾ ಅಧಿಕಾರಿಗಳ ಮುಖಾಂತರ ಬರೆದ ಪತ್ರದಲ್ಲಿ, ರವಿ ಡಿ ಚನ್ನಣ್ಣನವರ್ ಸೇವೆ ಸಲ್ಲಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮ ಸೇವೆಯ ಮೂಲಕ ತಮ್ಮದೆ ಆದ ಚಾಪನ್ನು ಮೂಡಿಸಿರುವ ದಕ್ಷ, ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸೇವೆ ಪೊಲೀಸ್ ಇಲಾಖೆಗೆ ಆಗತ್ಯತೆ ಇದೆ ಎಂದು ಹೇಳಲಾಗಿದೆ ರವಿ ಡಿ ಚನ್ನಣ್ಣನವರ ಅವರ ವರ್ಗಾವಣೆ ಆದೇಶವನ್ನು ಹಿಂಪಡೆದು ರಾಜ್ಯ ಸರ್ಕಾರ ಈ ಕೂಡಲೇ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಬೇಕೆಂದು ನಾಗರಾಜ ಯರಗುಡಿ. ಹಿಮಾಹುಸೇನ ಡಂಬಳ. ಶ್ರೀನಿವಾಸ ಮುಂದಿನಮನಿ. ಮಂಜುನಾಥ ವಾಲ್ಮೀಕಿ. ನವೀನಕುಮಾರ ಸೌದರಿ ಆಗ್ರಹಿಸಲಾಗಿದೆ .