ಜನ್ನತ್ ನಗರದ ಕಸ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ
Demand to solve the problem of garbage disposal and waste treatment plant in Jannat Nagar
ಧಾರವಾಡ / ಹುಬ್ಬಳಿ 13 : ಜನ್ನತ್ ನಗರದ ಗಟಾರ ಸಮಸ್ಯೆ, ಕಸ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕದ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಹಿ ಕಮ್ಯುನಿಸ್ಟ್, ಎಸ್.ಯು.ಸಿ.ಐ.(ಸಿ)ಪಕ್ಷದ ಉತ್ತರ ಸ್ಥಳೀಯ ಸಮಿತಿ ವತಿಯಿಂದ ಹು-ಧಾ ಮಹಾನಗರ ಪಾಲಿಕೆ ವಲಯ ಕಛೇರಿ-12 ರ ವಲಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಜನ್ನತ್ ನಗರದ ಮುಖ್ಯ ಗಟಾರವು ಕಸದಿಂದ ತುಂಬಿದ್ದು ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ.
ಗಟಾರದಲ್ಲಿ ಯಾವಾಗಲೂ ನೀರು ನಿಲ್ಲುವುದರಿಂದ ಗಟಾರದ ಅಕ್ಕಪಕ್ಕದ ಎಲ್ಲಾ ಮನೆಗಳ ಗೋಡೆಗಳು ತಂಪು ಹಿಡಿದಿದ್ದು, ನೆಲದಿಂದ ನೀರು ಒಸರುತ್ತಿದೆ. ಅಷ್ಟೇ ಅಲ್ಲದೆ ಜೋರಾಗಿ ಮಳೆ ಬಂದಾಗ, ನೀರು ಹಿಮ್ಮುಖವಾಗಿ ಬಂದು ಮನೆಗಳಲ್ಲಿ ಬಾತ್ರೂಮ್ ಗಳ ಮೂಲಕ ಮನೆ ಒಳಗೆಲ್ಲ ನೀರು ತುಂಬಿ ಬದುಕುವುದೇ ದುಸ್ತರವಾಗುತ್ತದೆ. ಅದೇ ರೀತಿ ಜನ್ನತ್ ನಗರ ಸಮೀಪ ಇರುವ ತ್ಯಾಜ್ಯ ಸಂಸ್ಕರಣ ಘಟಕದಿಂದ ಹೊರ ಬರುವ ಹೋಗೆಯಿಂದ ಇಡೀ ಜನ್ನತನಗರದ ಜನಗಳಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಮುಖ್ಯ ಗಟಾರವನ್ನು ಕೂಡಲೇ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗಬೇಕು. ಮುಂದೆಯೂ ನಿಯಮಿತವಾಗಿ ಮುಖ್ಯ ಗಟಾರವನ್ನು ಸ್ವಚ್ಛಗೊಳಿಸಿಸಬೇಕು.
ಅರ್ಧ ಗಟಾರದ ಮೇಲೆ ಸ್ಲ್ಯಾಬ್ ಇದ್ದು, ಜನರು ಕಸ ಚೆಲ್ಲದಂತೆ ಪೂರ್ತಿ ಗಟಾರದ ಮೇಲೆ ಸ್ಲ್ಯಾಬ್ ಹಾಕಲು ಕ್ರಮ ಕೈಗೊಳ್ಳಬೇಕು. ಗಟಾರಕ್ಕೆ ಕಸ ಚೆಲ್ಲದಂತೆ ಜಾಗೃತಿ ಮೂಡಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ತ್ಯಾಜ್ಯ ಸಂಸ್ಕರಣಾ ಘಟಕದ ಸಮಸ್ಯೆಗೆ ವೈಜ್ಞಾನಿಕ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಮನವಿ ಮಾಡಲಾಯಿತು. ಮನವಿ ಸ್ವೀಕರಿಸಿದ ವಲಯ ಆಯುಕ್ತರಾದ ಶಂಕರ ಪಾಟೀಲ್ ಅವರು ನಾಳೆ ಜನ್ನತನಗರಕ್ಕೆ ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಉತ್ತರ ಸ್ಥಳೀಯ ಸಮಿತಿ ಕಾರ್ಯದರ್ಶಿ ಭವಾನಿಶಂಕರ್ ಎಸ್ ಗೌಡ, ಸದಸ್ಯರಾದ ಮಮತಾಜ್ ಮಗಳಾನಿ, ಜಮುನಾ ಕಲಾಲ್, ರೇಷ್ಮಾ ಶೇಖ್, ಮಹಬೂಬಿ ಶೇಖ್, ಶಾನೂರ್ ಲಾಲಮಿಯ, ಶಿರಿನ್ ಬಾನು ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 