ವಿಧಾನಸೌಧದಲ್ಲಿ ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತಲು ಆಗ್ರಹ

Demand to raise voice in favor of internal reservation in Vidhan Sabha

ವಿಧಾನಸೌಧದಲ್ಲಿ ಒಳಮೀಸಲಾತಿಯ  ಪರವಾಗಿ ಧ್ವನಿ ಎತ್ತಲು ಆಗ್ರಹ 

ಹಾವೇರಿ 15: ಸುಪ್ರೀಂಕೋರ್ಟಿನ ತೀರ​‍್ು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೇ ಕಾಲಾಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿವನ್ನು ಖಂಡಿಸಿ ಹಾಗೂ ಬೆಳಗಾವಿಯಲ್ಲಿ ಜರುಗುವ ಅದಿವೇಶದಲ್ಲಿ ಧ್ವನಿ ಎತ್ತಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸುವಂತೆ ವಿಧಾನಸಭಾ ಉಪಸಭಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ರುದ್ರ​‍್ಪ ಲಮಾಣಿ ಅವರ ಕಚೇರಿ ಮುಂದೆ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ 2 ಘಂಟೆಗಳ ಕಾಲ ತಮಟೆ ಚಳುವಳಿ ಮಾಡಿ ಮನವಿ ಸಲ್ಲಿಸಲಾಯಿತು.       

                ಆಗಸ್ಟ್‌ 1 ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ​‍್ು ಪ್ರಕಟಿಸಿತು . ತೀರ​‍್ು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಸರ್ಕಾರ ಅಮೆಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ,2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು . ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ,ಆಯೋಗಕ್ಕೆ ಬೇಕಾದ ಕಛೇರಿ,ಸಿಬ್ಬಂದಿ, ಹಣಕಾಸಿನ ನೆರವುಕೊಡದೆ ಕಾಲಾಹರಣ ನೆಡೆಸಲಾಗುತ್ತಿದೆ . ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ,ಸರಕಾರದ ಮುಂದೆ ನ್ಯಾ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿ ಇದೆ.ಮಾಧುಸ್ವಾಮಿ ಯವರ ಸಮಿತಿ ಏಕೆ,ಏಡಿ ಸಮಸ್ಯೆಗೆ ಪರಿಹಾರಒದಗಿಸಿದೆ,2011ರ ಜನಗಣತಿಯ ಅಂಕಿಅಂಶಗಳ ಅಧಾರದಲ್ಲಿ ವರ್ಗೀಕರಣ ಮಾಡಿದೆ.ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ.ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.ಒಳಮೀಸಲಾತಿ ಜಾರಿ ಆಗುವ ವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು.ಆದರೆ ಈ ಭರವಸೆ ಜಾರಿಯಾಗಿಲ್ಲ,ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇದೆ.ಇದು ಖಂಡನಾರ್ಹ.  


        ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಇದೇ ಡಿ 16 ರಂದು ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆಕೊಡಲಾಗಿದೆ.ವಿಧಾನಸೌಧದಲ್ಲಿ ಒಳಮೀಸಲಾತಿಯ  ಪರವಾಗಿ ಧ್ವನಿ ಎತ್ತಲು ಆಗ್ರಹಿಸಲಾಗುವುದು.ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟಿನ ತೀರ​‍್ು ಬಂದ ಮೊದಲವಾರದಲ್ಲೆ ಒಳಮೀಸಲಾತಿಯನ್ನು ಜಾರಿಮಾಡಿದೆ . ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ . ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆಂದು ಹಸಿಸುಳ್ಳು ಹೇಳಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ.ಮಾದಿಗ ಮತ್ತು ಉಪಜಾತಿಗಳ ಈ ಹೋರಾಟಕ್ಕೆ ಸಹಕಾರ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  

    

           ಈ ಸಂದರ್ಭದಲ್ಲಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಉಡಚ್ಪಪ ಮಾಳಗಿ,ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ಜಿಲ್ಲಾ ಮುಖಂಡರಾದ ಎಂ ಆಂಜನೇಯ,ಮಂಜಪ್ಪ ಮರೋಳ,ಕಿಟ್ಟಪ್ಪ ಕರ್ಜಗಿ,ಬಸಣ್ಣ ಮುಗಳಿ,ಅಶೋಕ ಮರೆಣ್ಣನವರ, ಶ್ರೀಮತಿ ನೀಲಮ್ಮ ಪೂಜಾರ,ಹನಮಂತಪ್ಪ ಸಿ ಡಿ,ಮಹೇಶಪ್ಪ ಹರಿಜನ,ಶಿವು ಮುದಿಮಲ್ಲಣ್ಣನವರ,ಚಂದ್ರ​‍್ಪ ದಾಸನಕೇರಿ,ಶಂಭುಲಿಂಗಪ್ಪ ದೀವಟರ,ರಘು ಮಾಳಗಿ,ಮಹಾಂತೇಶಪ್ಪ ಚಿನ್ನಿಕಟ್ಟಿ,ಮುತ್ತಪ್ಪ ದೊಡ್ಡಮನಿ,ಅರುಣ ಭೋವಿ, ಮಂಜುನಾಥ ಸಿದ್ದಣ್ಣನವರ,ಅಶೋಕ ಅರೆಕಟ್ಟಿ,ಸುಭಾಷ ದೊಡ್ಡಮನಿ,ಮುತ್ತಣ್ಣ ಮುಷ್ಠಿ,ಗುಡ್ಡಪ್ಪ ಕನವಳ್ಳಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.