ಹಿಂದಿನ ಭರವಸೆಯಂತೆ 33 ಗೇಟ್‌ಗಳನ್ನು ಕೂಡಲೆ ಅಳವಡಿಸಲು ಅಗ್ರಹ
Demand to install 33 gates immediately as promised earlier
ಹಿಂದಿನ ಭರವಸೆಯಂತೆ 33 ಗೇಟ್‌ಗಳನ್ನು ಕೂಡಲೆ ಅಳವಡಿಸಲು ಅಗ್ರಹ
ಹೊಸಪೇಟೆ 06: ತುಂಗಭದ್ರ ಜಲಾಶಯದ 19ನೇ ಗೇಟ್ ಹಿಂದಿನ ವರ್ಷ ಮುರಿದು ಬಿದ್ದಾಗ ಮುಂದಿನ ವರ್ಷಕ್ಕೆ ಜಲಾಶಯದ ಎಲ್ಲಾ 33 ಗೇಟ್‌ಗಳನ್ನು ನೂತನವಾಗಿ ತಯಾರಿಸಿ ಅಳವಡಿಸುತ್ತೇವೆಂದು ಭರವಸೆ ನೀಡಿದ್ದೀರಿ, ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಈಗ ತಾವು ಟೆಂಡರ್ ಕೊಟ್ಟರೂ ಸಹ ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ನೂತನ ಗೇಟ್‌ಗಳನ್ನು ತಯಾರಿಸಿ ಅಳವಡಿಸಲು ಅನುಕೂಲವಾಗುತ್ತದೆ. ಈಗಾಗಲೇ ಜಲಾಶಯದಲ್ಲಿ 22 ಟಿ.ಎಂ.ಸಿ. ನೀರು ಶೇಖರಣೆಯಾಗಿದೆ ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಬರುತ್ತಿದೆ. ತುಂಗಭದ್ರ ಜಲಾಶಯದ ಗೇಟುಗಳು ಗುಣಮಟ್ಟವಿಲ್ಲದ ಕಾರಣ ಈ ವರ್ಷ ಜಲಾಶಯದಲ್ಲಿ 80ಅ ಮಾತ್ರ ನೀರು ನಿಲ್ಲಿಸುತ್ತೇವೆಂದು ನೀವು ತಿಳಿಸಿದ್ದೀರಿ. ಹಾಗಾದರೆ ಜಲಾಶಯದಲ್ಲಿ 25 ಟಿ.ಎಂ.ಸಿ. ನೀರು ಶೇಖರಣೆಯಾದ ತಕ್ಷಣ ಕಾಲುವೆಗಳಿಗೆ ನೀರು ಬಿಟ್ಟರೆ, ರೈತರಿಗೆ ಒಳ್ಳೆಯದಾಗುವುದು ಮತ್ತು ಜಲಾಶಯದ ಸಂರಕ್ಷಣೆಯಾಗುವುದು. ಕಾರಣ ತಾವು ಕರ್ನಾಟಕ, ಆಂಧ್ರ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜಲಸಂಪನ್ಮೂಲ ಸಚಿವರ ಮತ್ತು ಕಾರ್ಯದರ್ಶಿಗಳ ಸಭೆ ಕರೆದು, ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ರೈತರಿಗೆ 02 ಬೆಳೆಗಳಿಗೆ ನೀರು ಕೊಟ್ಟು ನಂತರದ ಏಪ್ರೀಲ್, ಮೇ, ಮತ್ತು ಜೂನ್ ತಿಂಗಳುಗಳಲ್ಲಿ ನೂತನ ಗೇಟ್‌ಗಳನ್ನು ಅಳವಡಿಸಲು ನಿರ್ಧಾರ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ. ಒಂದುವೇಳೆ ತಾವು ಬೇಗನೆ ನಿರ್ಧಾರ ಕೈಗೊಳ್ಳದೇ ಹೋದರೆ 03 ರಾಜ್ಯಗಳ ರೈತರಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಚ್ಚರಿಕೆ ಇರಲಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 