ಜನತಾ ಬಜಾರ್ ಅಧ್ಯಕ್ಷರ ರಾಜಿನಾಮೆಗೆ ಒತ್ತಾಯ
Demand for resignation of Janata Bazaar President
ಬಳ್ಳಾರಿ 27: ನಗರದಲ್ಲಿನ ಜನತಾ ಬಜಾರ್ ನ ಅಧ್ಯಕ್ಷರಾಗಿರುವ ಕೆ.ಎ.ವೇಮಣ್ಣ ಅವರನ್ನು ರಾಜೀನಾಮೆ ನೀಡುವಂತೆ ಜನತಾ ಬಜಾರ್ ಮಾಜಿ ಅಧ್ಯಕ್ಷ ಜಿ.ನೀಲಕಂಠಪ್ಪ ಆಗ್ರಹಿಸಿದ್ದಾರೆ.ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ನಾಳೆ ಕಾರ್ಯಕಾರಿ ಸಭೆ ನಡೆಯಲಿದ್ದು, ನೀವು ಜ. 30 ದಿನಾಂಕ ನಮೂದಿಸಿ ಸಭೆಯು ನಡೆಯುವ ಮುನ್ನವೇ ಅಧ್ಯಕ್ಷ ಸ್ಥಾನದ ರಾಜಿನಾಮೆ ಪತ್ರಕ್ಕೆ ಸಹಿ ಮಾಡಿಕೊಡಬೇಕು ಎಂದು ವೇಮಣ್ಣ ಅವರಿಗೆ ಕೋರಿದ್ದಾರೆ.ಇಲ್ಲದಿದ್ದ ಪಕ್ಷದಲ್ಲಿ ಸಭೆಗೆ ಕೋರಂನ ಕೊರತೆ ಆಗುವ ಸಂಭವವಿದೆ. ಅಧ್ಯಕ್ಷರ ಆಕಾಂಕ್ಷಿಗಳು 4 ಸದಸ್ಯರಿದ್ದಾರೆ. ಮುಂಬರುವ ದಿನಗಳಿಗೆ ಇದರಲ್ಲಿ ಕೊನೆ ಪಕ್ಷ ಇಬ್ಬರಾದರೂ ಅಧ್ಯಕ್ಷರಾಗಲಿ ಮತ್ತು ಇಬ್ಬರು ಉಪಾಧ್ಯಕ್ಷರಾಗಲಿ ನನ್ನ ಮತ್ತು ಕೆಲವು ನಿರ್ದೇಶಕರ ಅಭಿಪ್ರಾಯವಾಗಿದೆ.ತಮ್ಮ ಅಧ್ಯಕ್ಷರ ಅಧಿಕಾರವಧಿ ಒಂದು ವರ್ಷವೆಂದು ಈ ಹಿಂದೆ ಮಾತಾಗಿದ್ದು, ಜನವರಿ ತಿಂಗಳಿಗೆ ತಮ್ಮ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ.
ಆದರೆ, ತಾವುಗಳು ಬರುವ ಮಾರ್ಚ್ ತಿಂಗಳಲ್ಲಿ ರಾಜಿನಾಮೆ ಕೊಡುತ್ತೀರೆಂದು ನಮಗೆ ತಿಳಿದು ಬಂದಿದ್ದು, ಇದಕ್ಕೆ ನನ್ನ ಮತ್ತು ಕೆಲವು ನಿರ್ದೇಶಕರ ಒಪ್ಪಿಗೆ ಇರುವುದಿಲ್ಲ.ನೀವು ತಕ್ಷಣ ರಾಜೀನಾಮೆ ನೀಡದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂದಿದ್ದಾರೆ.ಜನತಾ ಬಜಾರ್ ನ ಹಾಲಿ ಆಡಳಿತ ಮಂಡಳಿಯ ಅವಧಿ ಬರುವ 2027 ರ ಮಾರ್ಚ್ ವರೆಗೆ ಮಾತ್ರ ಇದೆ. ಈ ಹಿಂದೆ ನಿಮಗೆ ಒಂದು ವರ್ಷ ನಿಗಧಿಯಾಗಿತ್ತು ಮಾತಿಗೆ ಬದ್ಧರಾಗಿರಿ ಎಂದಿದ್ದಾರೆ.ಮುಂದಿನ 13 ತಿಂಗಳ ಅವಧಿಯಲ್ಲಿ ಆರು, ತಿಂಗಳಿಗೆ ಒಬ್ಬರಂತೆ ಅಧ್ಯಕ್ಷ ಉಪಾಧ್ಯಕ್ಷರಾಗಲು ನಿರ್ದೇಶಕರುಗಳಾದ, ಪಲ್ಲೇದ ಮೈತ್ರಿ, ಕೇದಾರ್, ವೆಂಕಟೇಶ್ ಹೆಗಡೆ ಹಾಗು ಹಲಕುಂದಿ ಮಲ್ಲಿಕಾರ್ಜುನಗೌಡ ಸಿದ್ದರಾಗಿ ಈಗಾಗಲೇ ನಿರ್ದೇಶಕರುಗಳಿಗೆ ಪಾರ್ಟಿ ಕೊಟ್ಡು ತಮ್ಮ ಬೆಂಬಲ ಪಡೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೂ ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಶ್ರೀನಿವಾಸ್ ಮೋತ್ಕರ್ರ ಅವರು ಬೆಂಬಲವೂ ಆಕಾಂಕ್ಷಿಗಳಿಗೆ ಬೇಕಾಗಿದೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 