ಮದಕರಿ ನಾಯಕ ಜಯಂತಿ ಅಧಿಕೃತ ಆಚರಣೆಗೆ ಒತ್ತಾಯ

ಮದಕರಿ ನಾಯಕ ಜಯಂತಿ ಅಧಿಕೃತ ಆಚರಣೆಗೆ ಒತ್ತಾಯ  Demand for official celebration of Madakari Nayaka Jayanti

ಗದಗ 28: ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ದೊರೆ ರಾಜವೀರ ಮದಕರಿ ನಾಯಕರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.  

ಈ ಕುರಿತು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ಶ್ರೀಕಾಂತ ಪೂಜಾರ ಪತ್ರಿಕಾ ಪ್ರಕಟಣೆ ನೀಡಿ, "ಯಾರ ಜಯಂತಿ ಆಚರಿಸುತ್ತಿದ್ದೇವೆ ಮತ್ತು ಯಾರ ಭಾವಚಿತ್ರ ಇಡಬೇಕು ಎಂಬ ಮೂಲಭೂತ ತಿಳುವಳಿಕೆಯಿಲ್ಲದೆ ಜಿಲ್ಲಾಡಳಿತ ನಡೆದುಕೊಂಡಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ" ಎಂದು ಟೀಕಿಸಿದ್ದಾರೆ.  

ಮದಕರಿ ನಾಯಕರ ಬಗ್ಗೆ ಸಮಾಜಕ್ಕೆ ಅಪಾರ ಗೌರವವಿದ್ದು, ಅವರ ಭಾವಚಿತ್ರ ಇಟ್ಟಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಕೆಂಪೇಗೌಡ ಜಯಂತಿಯಲ್ಲಿ ಈ ರೀತಿಯ ಗೊಂದಲ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ.  

ನಾಡಿಗಾಗಿ ಹೋರಾಡಿದ ಮಹನೀಯರ ಜಯಂತಿಗಳನ್ನು ಗೌರವಯುತವಾಗಿ ಹಾಗೂ ಸರಿಯಾದ ರೀತಿಯಲ್ಲಿ ಆಚರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದ ಅವರು, ಮುಂದಿನ ದಿನಗಳಲ್ಲಿ ವೀರ ಮದಕರಿ ನಾಯಕರ ಜಯಂತಿಯನ್ನು ಜಿಲ್ಲಾಡಳಿತ ಅಧಿಕೃತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು ಎಂದು ಆಗ್ರಹಿಸಿದ್ದಾರೆ.