ವೀರರಾಣಿ ಚನ್ನಮ್ಮಾ 201ನೇ ಜಯಂತೋತ್ಸವ ಅರ್ಥಪೂರ್ಣ ಆಚರಣೆಗೆ ಆಗ್ರಹ

ವೀರರಾಣಿ ಚನ್ನಮ್ಮಾ 201ನೇ ಜಯಂತೋತ್ಸವ ಅರ್ಥಪೂರ್ಣ ಆಚರಣೆಗೆ ಆಗ್ರಹ Demand for meaningful celebration of Veerarani Channamma's 201st birth anniversary

ವೀರರಾಣಿ ಚನ್ನಮ್ಮಾ 201ನೇ ಜಯಂತೋತ್ಸವ ಅರ್ಥಪೂರ್ಣ ಆಚರಣೆಗೆ ಆಗ್ರಹ 

ಬೆಳಗಾವಿ 16: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರ ಚನ್ನಮ್ಮಾಜಿಯವರ 200ನೇ ಜಯಂತಿಯನ್ನು ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲಾಗಿದೆ. ಈ ಬಾರಿಯೂ ಎರಡು ನೂರಾ ಒಂದನೇ ಜಯಂತೋತ್ಸವ ವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಅರ್ಥಪೂರ್ಣವಾಗಿ ಆಚರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿಯು ಆಗ್ರಹಿಸಿದೆ. 

  

   ಈ ಸಂಬಂಧವಾಗಿ ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರನ್ನು ಭೇಟಿ ಮಾಡಿದ ನಿಯೋಗವು ಮನವಿಯನ್ನು ಸಲ್ಲಿಸಿದೆ ಕಿತ್ತೂರಿನ ಸ್ವಾತಂತ್ರ ಹೋರಾಟದಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ ರಾಣಿ ಚನ್ನಮ್ಮಾಜಿ ಅವರೊಂದಿಗೆ ಅಸಂಖ್ಯಾತ ವೀರರು ತಾಯಿನಾಡಿಗಾಗಿ ಹೋರಾಟ ಮಾಡಿದ್ದಾರೆ ವೀರಕೇಸರಿ ಅಮಟೂರು ಬಾಳಪ್ಪ ಸರ್ದಾರ ಗುರು ಸಿದ್ದಪ್ಪ ಬಿಚ್ಚಗತ್ತಿಯ ಚನ್ನಬಸಪ್ಪ ಗಜವೀರ ಕರವೀರ ವಡ್ಡರ ಎಲ್ಲಣ್ಣ ಹೀಗೆ ನೂರಾರು ಜನ  ಕಿತ್ತೂರಿನ ಬಂಟರು ತಾಯ್ನಾಡಿಗಾಗಿ ರಕ್ತ ತರ​‍್ಣ ನೀಡಿದ್ದಾರೆ. 

     

  ಹಾಗಾಗಿ ಆ ಎಲ್ಲಾ ಮಹಾಪುರುಷರ ಸ್ವಾಮಿ ನಿಷ್ಠೆ ನಾಡ ಪ್ರೇಮ ಶೂರತನ ಸಮರಾ​‍್ಣ ಮನೋಭಾವಗಳ ಬಗ್ಗೆ ಯುವಜನರಲ್ಲಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಬೇಕಿದೆ ನಾಡಿನ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಎಲ್ಲಾ ಕಿತ್ತೂರಿನ ಕಲೆಗಳನ್ನು ಮುಂದಿನ ನಮ್ಮ ಪೀಳಿಗೆಗೆ ಸ್ಮರಿಸಬೇಕಿದೆ ಆದ್ದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಣಿ ಚೆನ್ನಮ್ಮ ಅಧ್ಯಯನ ಪೀಠವು ಈ ಬಗ್ಗೆ ವಿಶೇಷ ಆ ಶಕ್ತಿ ವಹಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿಯೋಗದ ಮುಖಂಡರು ಆಗ್ರಹಿಸಿದರು.  


  ಕಿತ್ತೂರಿನ ಇತಿಹಾಸ ಹಾಗೂ ಚನ್ನಮ್ಮಾಜಿಯ ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಅಧ್ಯಯನ ಪೀಠದಿಂದ ಕಾರ್ಯಕ್ರಮ ನೀಡುವಂತೆ ಹಿರೇಬಾಗೇವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಳೆದು ಐದು ವರ್ಷಗಳ ಹಿಂದೇನೆ ಮನವಿ ಮಾಡಿದೆ ಆದರೂ ಸಹ ಆರ್ ಸಿ ಯು 2020ರಲ್ಲಿ ನೀಡಲಾಗಿದ್ದ ಮನವಿಗೆ ಈವರೆಗೂ ಸ್ಪಂದಿಸಿಲ್ಲ ಹಾಗಾಗಿ ಈ ಬಾರಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ್ ವಸ್ತ್ರದ ಹಾಗೂ ಡಾ.ಅ.ಬ.ಇಟಗಿ  ಅವರು ವಿ ಸಿ ಅವರನ್ನು ಆಗ್ರಹಿಸಿದರು.   


   ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದಲ್ಲಿನ ಆರ್‌ಸಿಯು ನೂತನ ಕ್ಯಾಂಪಸ್ಸಿನಲ್ಲಿನ ಪ್ರಗತಿ ಕಾರ್ಯ ಅಲ್ಲಿನ ಆರಾಧ್ಯ ದೈವ ಮಲ್ಲಯ್ಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಹಲವಾರು ರಚನಾತ್ಮಕ ಕಾರ್ಯಗಳ ಕುರಿತಂತೆ ಕುಲಪತಿ ಪ್ರೊ ಸಿ . ಎಂ ತ್ಯಾಗರಾಜ ಮಾಹಿತಿ ನೀಡಿದರು ಆರ್‌ಸಿಯು ಅಭಿವೃದ್ಧಿ ಬಗ್ಗೆ ಪ್ರಗತಿಪರ ಸಲಹೆ ಮತ್ತು ಸಹಕಾರ ಇರಲಿ ಎಂದು ನಿಯೋಗದ ಮುಖಂಡರಲ್ಲಿ ಆಶಯ ವ್ಯಕ್ತಪಡಿಸಿದರು.  


 ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಎಸ್‌.ಗಾಣಿಗಿ, ಆನಂದ ನಂದಿ, ಬಸವರಾಜ ಮಠಪತಿ ಇತರರು ಉಪಸ್ಥಿತರಿದ್ದರು.