ಪ್ರಾಮಾಣಿಕವಾಗಿ ನ್ಯಾಯ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶ: ನ್ಯಾ.ಪ್ರಭಾವತಿ ಹಿರೇಮಠ

ಪ್ರಾಮಾಣಿಕವಾಗಿ ನ್ಯಾಯ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶ: ನ್ಯಾ.ಪ್ರಭಾವತಿ ಹಿರೇಮಠ  Delivering justice honestly is the primary objective of the law: Justice Prabhavathi Hiremath

ಲೋಕದರ್ಶನ ವರದಿ 

ಬಾಗಲಕೋಟೆ 04: ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವುದೇ ಕಾನೂನಿನ ಪ್ರಮುಖ ಉದ್ದೇಶವಾಗಿದ್ದು, ಕಾನೂನು ಪದವೀಧರರು ಸಮಾಜದಲ್ಲಿ ನ್ಯಾಯ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಪ್ರಭಾವತಿ ಹಿರೇಮಠ ಹೇಳಿದರು.  

ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಗ್ಯಾಲರಿ ಸಭಾಂಗಣದಲ್ಲಿ ಶನಿವಾರ ನಡೆದ ಬಿ.ವಿ.ವಿ. ಸಂಘದ ಎಸ್‌.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ 2023ಹಿ2026್ಫೂ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ 114 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದವರು ಕಾನೂನು ಆಳಕ್ಕೆ ಇಳದಷ್ಷು ಅದು ಸರಳವಾಗುತ್ತದೆ, ಕಾನೂನು ಪದವಿದರಿಗೆ ಸಾಕಷ್ಟು ಅವಕಾಶಗಳಿವೆ, ವಕೀಲ ವೃತ್ತಿಯಲ್ಲಿ ಹೆಸರಿನ ಜೊತೆ ಹಣವು ಕೂಡಾ ಬರುತ್ತದೆ ಆದರೆ ನಾವು ಪ್ರಾಮಾಣಿಕವಾಗಿ ಜನರಿಗೆ ನ್ಯಾಯವನ್ನು ಒದಗಿಸುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು ಎಂದರು.  

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ವಿಶೇಷ ಸಾರ್ವಜನಿಕ ಅಭಿಯೋಜಕ ಕೆ.ಜಿ. ಪುರಾಣಿಕಮಠ ಅವರು ಕಾನೂನು ವೃತ್ತಿಯಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಮತ್ತು ವೃತ್ತಿ ನಿಷ್ಠೆ ಅತ್ಯಂತ ಮುಖ್ಯವಾಗಿದ್ದು, ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಪದವೀಧರರಿಗೆ ಕರೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅವರು ಮಾತನಾಡಿ, ಗುಣಮಟ್ಟದ ಕಾನೂನು ಶಿಕ್ಷಣದ ಮೂಲಕ ಸಮಾಜಮುಖಿ ವಕೀಲರನ್ನು ರೂಪಿಸುವ ಕಾರ್ಯವನ್ನು ಸಂಘ ನಿರಂತರವಾಗಿ ನಡೆಸುತ್ತಿದೆ ಎಂದು ಹೇಳಿದರು.  

ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಘದ ಆಡಳಿತಾಧಿಕಾರಿ ವಿ.ಆರ್‌. ಶಿರೋಳ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಒಟ್ಟು 114 ಪದವೀಧರರು ಕಾನೂನು ಪದವಿ ಸ್ವೀಕರಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಪಿ. ಚೆಂದ್ರಿಕಾ ಸ್ವಾಗತಿಸಿದರು. ಶೃದ್ಧಾ ಕಮತಗಿ ಹಾಗೂ ನರಸಿಂಹರಾವ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು, ಡಾ. ಸುಧೀಂದ್ರ ವಂದಿಸಿದರು.  ಸಂಘದ ಸದಸ್ಯರು, ವಿವಿಧ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು, ಪ್ರಾಧ್ಯಾಪಕರು, ಫಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.