ಚೆನ್ನೈ, ಏ 10 ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಅವರು ಅತಿ ಹೆಚ್ಚು ಚುಕ್ಕಿ ಎಸೆತಗಳನ್ನು ಎಸೆಯುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೂತನ ದಾಖಲೆ ಮಾಡಿದ್ದಾರೆ. ಬಲಗೈ ವೇಗದ ಬೌಲರ್ ದೀಪಕ್ ಚಹಾರ್, ಮಂಗಳವಾರ ರಾತ್ರಿ ಕೊಲ್ಕತಾ ನೈಟ್ ರೈಡಸರ್್ ವಿರುದ್ಧದ ಪಂದ್ಯದಲ್ಲಿ 20 ಚುಕ್ಕೆ ಎಸೆತಗಳನ್ನು ಮಾಡಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಚುಕ್ಕಿ ಎಸೆತಗಳನ್ನು ಮಾಡಿದ ಮೊದಲ ಬೌಲರ್ ಎಂಬ ಸಾಧನಗೆ ಚಹಾರ್ ಭಾಜನರಾದರು. ರಾಹುಲ್ ಚಹಾರ್ ರಾತ್ರಿ ನಡೆದ ಪಂದ್ಯದಲ್ಲಿ ಕ್ರಿಸ್ ಲೀನ್(0), ರಾಬಿನ್ ಉತ್ತಪ್ಪ(6) ಹಾಗೂ ನಿತೀಶ್ ರಾಣಾ(0) ಅವರ ವಿಕೆಟ್ಗಳನ್ನು ಬಹುಬೇಗ ಕೆಡವಿ ಕೆಕೆಆರ್ ಕಡಿಮೆ ಮೊತ್ತಕ್ಕೆ ಆಲ್ಔಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ, 19ನೇ ಓವರ್ನಲ್ಲಿ 5 ಚುಕ್ಕಿ ಎಸೆತಗಳನ್ನು ಮಾಡಿದ್ದರು. ಇವರ ಶಿಸ್ತಿನ ದಾಳಿಯ ನೆರವಿನಿಂದ ಕೊಲ್ಕತಾ ನೈಟ್ ರೈಡಸರ್್ 108 ರನ್ಗಳಿಗೆ ಸೀಮಿತವಾಗಿತ್ತು. ಸುಲಭ ಗುರಿ ಮುಟ್ಟಲು ಸಿಎಸ್ಕೆ ಕೂಡ ಪರದಾಡಿತ್ತು. 18ನೇ ಓವರ್ನಲ್ಲಿ ಇನ್ನೂ 16 ಎಸೆತಗಳು ಬಾಕಿ ಇರುವಂತೆ ಚೆನ್ನೈ ಗುರಿ ಮುಟ್ಟಿ ಗೆಲುವು ಪಡೆದಿತ್ತು. ಈ ಪಂದ್ಯದ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು.