ಬಾಣಂತಿಯರ ಸಾವು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗ ನಿಯೋಗ ಭೇಟಿ
ಕೊಪ್ಪಳ 09: ಈ ಇತ್ತೀಚೆಗೆ ಮೃತಪಟ್ಟ ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ರೇಣುಕಾ ಹಿರೇಮನಿ ಅವರ ನಿವಾಸಕ್ಕೆ ಭೇಟಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷ ಸಬಿಯಾ ಪಟೇಲ್ ಭೇಟಿ ನೀಡಿದರು.ಈ ಬಗ್ಗೆ ಮಾತನಾಡಿದವರು ಅವರು ಬಾಣಂತಿಯರ ಸಾವಿನ ಪ್ರಕರಣದಲ್ಲಿ ವೈದ್ಯಕೀಯವಾಗಿ ಮಾಡಬೇಕಾದ ನಿಯಮಾವಳಿಗಳನ್ನು ವೈದ್ಯರು ಮಾಡಿಲ್ಲ. ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಲು ಕಾಲಹರಣ ಮಾಡಿದ್ದಾರೆ.
ಉತ್ತಮ ಚಿಕಿತ್ಸೆ ನೀಡಿದ್ದರೆ ಬಾಣಂತಿಯರ ಜೀವ ಉಳಿಸಿಕೊಳ್ಳಬಹುದಿತ್ತು.ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಜ್ಯ ಸರಕಾರ ಬಾಣಂತಿಯರ ಸಾವು ಮುಂದುವರೆದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾವೀಗೀಡಾದ ಬಾಣಂತಿಯರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ನಿರ್ಲಕ್ಷ ವಹಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಓಷಧ ನಿಯಂತ್ರಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಓಷಧ ಪೂರೈಸಿದ ಕಂಪೆನಿ ಹಾಗೂ ನಿಯಂತ್ರಕರ ಆಸ್ತಿ ಮುಟ್ಟು ಗೋಲು ಹಾಕಿಕೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗ ನಿಯೋಗ ಒತ್ತಾಯಿಸಿದರು.ಸಂದರ್ಭದಲ್ಲಿ:- ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಸದಸ್ಯರು ಇದ್ದರು.