ಲೋಕದರ್ಶನ ವರದಿ
ದಾಂಡೇಲಿ29 ಿರಸಿ ರೋಟರಿ ಕ್ಲಬ್ ಆಶ್ರಯದಲ್ಲಿ ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಇತ್ತಿಚೆಗೆ ನಡೆದ ವಲಯ ಮಟ್ಟದ ರೋಟರಿ ಕ್ಲಬ್ಗಳ ಕ್ರೀಡಾಕೂಟದಲ್ಲಿ ದಾಂಡೇಲಿಯ ರೋಟರಿ ಕ್ಲಬ್ ಆಟಗಾರರರು ಕ್ರಿಕೆಟ್ ಮತ್ತು ಕೆರಂ ಪಂದ್ಯಾವಳಿಯಲ್ಲಿ ಜಯಗಳಿಸಿದ್ದಾರೆ.
ದಾಂಡೇಲಿ ರೋಟರಿ ಕ್ಲಬ್ ಪದಾಧಿಕಾರಿ ಪುರುಷೋತ್ತಮ ಮಲ್ಯಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠರಾಗಿ ಆಯ್ಕೆಯಾದರು. ಕೆರಂನಲ್ಲಿ ಛಾಯಾಗ್ರಾಹಕ ಜಿ.ಇ.ಉಮೇಶ ಮೊದಲ ಸ್ಥಾನ ಪಡೆದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಮೂರು ರೋಟರಿ ಜಿಲ್ಲೆಗಳ ಅಂತರ ವಲಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.
ಆಟಗಾರರ ಸಾಧನೆಗೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿ ಹಾಗೂ ಕಾರ್ಯದಶರ್ಿ ಎಸ್.ಎಂ ಕುಮಾರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.