ದಾಂಡೇಲಿ ಶ್ರೇಯಸ್ ಕಾಮರ್ಿಕರ ಹೋರಾಟಕ್ಕೆ ಭಾಜಪಾ ಬೆಂಬಲ

ದಾಂಡೇಲಿ 13: ಕಾಮರ್ಿಕ ಮುಖಂಡ   ಬಿ.ಡಿ.ಹೀರೇಮಠ ಇವರು ದಾಂಡೇಲಿ ನಗರದ ಕೆರವಾಡ ಗ್ರಾಮದಲ್ಲಿರುವ ಶ್ರೇಯಸ್ ಪೇಪರ್ಸ್ ಕಾಮಿಕರ ಪರ ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಮಾಜಿ ಶಾಸಕ ಭಾ.ಜ.ಪಾ ಮುಖಂಡ ಸುನೀಲ ಹೇಗಡೆ ನೇತೃತ್ವದಲ್ಲಿ ಭಾಜಪಾ ನಗರ ಘಟಕದ ಸದಸ್ಯರು ಧರಣಿ ಸ್ಥಳಕ್ಕೆ ಧಾವಿಸಿ ಬೆಂಬಲ ಸುಚಿಸಿದರು. 

ಶ್ರೇಯಸ್ ಪೆಪರ್ಸ್ ಕಂಪನಿಯು ಅತ್ಯಂತ ದುರ್ಬಲ ಆಡಳಿತ ಮಂಡಳಿಯಿಂದಾಗಿ ಇತ್ತಿಚಿನ ಹಲವಾರು ವರ್ಷಗಳಿಂದ ಕಾಖರ್ಾನೆಯಲ್ಲಿ ಉತ್ಪಾದನೆ ಕುಂಠಿತಗೊಂಡು ನಷ್ಟದ ಹಾದಿಯಲ್ಲಿತ್ತು ಅಲ್ಲದೆ ಕಾಮರ್ಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಅಗುತ್ತಿರಲಿಲ್ಲ ಬೋನಸ್ ನೀಡುವಿಕೆಯಲ್ಲಿಯು ತಾರತಮ್ಯ ಎಸಗಲಾಗುತ್ತಿತ್ತು ಅಲ್ಲದೆ ಹಲವಾರು ಕಾಮರ್ಿಕರನ್ನು ಖಾಯಂಗೊಳಿಸದೆ ದೀನಗೂಲಿ ನೌಕರರಂತೆ ದುಡಿಸಿಕೊಳ್ಳಲಾಗುತ್ತಿತ್ತು. ಅದರಲ್ಲು ಧಾರವಾಡದ ಆಯ್.ಪಿ.ಎಫ್ ಭದ್ರತಾ ಎಜನ್ಸಿಯಲ್ಲಿ ಶ್ರೇಯಸ್ ಕಾಖರ್ಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಹಾಗೂ ಬೋನಸ್ ಹಣವನ್ನು ಕೆಲವರು ಸಂಪೂರ್ಣವಾಗಿ ನುಂಗಿ ಹಾಕಿದ ಆರೋಪವು ಕೇಳಿಬಂದಿದೆ.  

ಕಾಮರ್ಿಕರ ಈ ಸಮಸ್ಯೆಗಳನ್ನು ಪರಿಹರಿಸಲು ಕಾಮರ್ಿಕ ಸೇನಾ ಸಂಘಟನೆಯು ಅಧ್ಯಕ್ಷ ಬಿ.ಡಿ. ಹೀರೆಮಠ ಅವರ ನೇತೃತ್ವದಲ್ಲಿ ಸಂಘಟನೆ ಪದಾಧಿಕಾರಿಗಳು ಹಾಗೂ ಕಾಮರ್ಿಕರ ಶನಿವಾರ ದಿ. 9 ರಿಂದ ಕಖರ್ಾನೆಯ ಮುಂಬಾಗದಲ್ಲಿ ಶಾಂತಿಯುತವಾದ ಧರಣಿನಡೆಸುತ್ತಿದ್ದು ಧರಣಿ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ ದಾಂಡೇಲಿ ಭಾಜಪಾ ನಗರ ಘಟಕ  ಕಾಮರ್ಿಕರ  ಎಲ್ಲ ರೀತಿಯ ನ್ಯಾಯಯುತ ಹೋರಾಟಕ್ಕೆ ಬೆಂಬಲ  ನೀಡುವುದಾಗಿ ಘೋಷಿಸಿದೆ. ಈ ಸಂದರ್ಭದಲ್ಲಿ ಭಾ.ಜ.ಪಾ ನಗರ ಘಟಕ ಪ್ರ, ಕಾರ್ಯದಶರ್ಿ ನರೇಂದ್ರ ಚೌವ್ಹಾಣ ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ, ಭಾ.ಜ.ಪಾ ಚುನಾಯಿತ ಸದಸ್ಯರಾದ ಬುದ್ದಿವಂತ ಪಾಟೀಲ, ವಿಷ್ಣು ವಾಜವೆ, ದಶರಥ ಬಂಡಿವಡ್ಡರ, ರೋಶನ ಜೀತ ಹಾಗೂ ಮುಖಂಡ ಟಿ.ಎಸ್ ಬಾಲಮಣಿ ಉಪಸ್ಥಿಸರಿದ್ದರು.