ಮಹರ್ಷಿ ವಾಲ್ಮೀಕಿ ಸಭಾ ಭವನದಲ್ಲಿ ಸುಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯಾರ​‍್ಣ ಕಾರ್ಯಕ್ರಮ

Dance performance by students of Sujani Natya School at Maharishi Valmiki Sabha Bhavan.

ಮಹರ್ಷಿ ವಾಲ್ಮೀಕಿ ಸಭಾ ಭವನದಲ್ಲಿ ಸುಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯಾರ​‍್ಣ ಕಾರ್ಯಕ್ರಮ

ಶಿಗ್ಗಾವಿ 21 :  ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿಯನ್ನು ಬಿಂಭಿಸುವ ಪಾರಂಪರಿಕ ಸಾಂಸ್ಕೃತಿಕ ಕಲೆಯಾದ ಭರತನಾಟ್ಯವನ್ನು ಸುಜನಿ ನಾಟ್ಯ ಶಾಲೆಯ ಶಿಕ್ಷಕಿಯಾಗಿರುವ ವಿದುಷಿ ಸುನಿತಾ ಜಗನ್ನಾಥ ಅವರು ಗ್ರಾಮೀಣ ಮಕ್ಕಳಿಗೆ ಕಲಿಸುವ ಮೂಲಕ ಪ್ರಾಚೀನ ಭಾರತ ಸಮಾಜದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಜಾಗೃತಗೊಳಿಸುತ್ತಿದ್ದಾರೆ ಎಂದು ತಾಲೂಕು ಶಿಕ್ಷಣ ಸಮೀತಿಯ ಉಪಾಧ್ಯಕ್ಷ ದತ್ತಣ್ಣ ವಿ. ವೆರ್ಣೇಕರ ಹೇಳಿದರು.ಪಟ್ಟಣದಲ್ಲಿ ಸುಜನಿ ನಾಟ್ಯ ಶಾಲೆ ಶಿಗ್ಗಾವಿ ವತಿಯಿಂದ ಆಯೋಜಿಸಲಾಗಿದ್ದ ನೃತ್ಯಾರ​‍್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭರತನಾಟ್ಯವನ್ನು ಸಂಪೂರ್ಣ ಏಕಾಗ್ರತೆಯಿಂದ ಮಾಡಿದಾಗ ನೃತ್ಯ ಪ್ರಕಾರಗಳು ಯೋಗದಂತೆ ದೇಹವನ್ನು ಸದೃಡಗೊಳಿಸುತ್ತವೆ. ಈ ನೃತ್ಯ ಪ್ರಕಾರವು ಮೌಖಿಕ ಸಂವಹನ, ಆಂತರಿಕ ಶಾಂತತೆ ಮತ್ತು ದೇಹದ ಅಂಗಾಂಗಗಳ ಸಮತೋಲತೆಯನ್ನು ಕಾಪಾಡಿ ಏಕಾಗ್ರತೆಯನ್ನು ಹೆಚ್ಚಿಸುವುದರಿಂದ ಈ ಕಲೆ ಮಕ್ಕಳಿಗೆ ನೀಡಬೇಕಾದ ಅತ್ಯೂತ್ತಮ ಶಿಕ್ಷಣ ಮತ್ತು ಸಂಸ್ಕಾರದ ರೂಪವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಭಾರತದ ಪಾರಂಪರಿಕ ಕಲಾ ಜಗತ್ತಿನಲ್ಲಿ ಬೆರೆಯುವಂತೆ ಅವಕಾಶ ಕಲ್ಪಿಸಿಕೊಡುವ  ಮೂಲಕ ಭರತ ನಾಟ್ಯದಂತ ಅದ್ಭುತ ಕೆಲೆಯಲ್ಲಿ ಪರಿಪೂರ್ಣರಾಗುವಂತೆ ಮಾಡಬೇಕು ಎಂದರು. 

ನಿವೃತ್ತ ಉಪ ಪ್ರಾಚಾರ್ಯ ಜಿ.ಎನ್‌.ಯಲಿಗಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಜನಿ ನಾಟ್ಯ ಶಾಲೆಯು ಕೇವಲ ನಾಲ್ಕು ವಿದ್ಯಾರ್ಥಿಗಳಿಂಗ ಪ್ರಾರಂಭವಾಗಿ, ವಿದುಷಿ ಸುನಿತಾ ಜಗನ್ನಾಥ ಅವರ ಉತ್ತಮ ತರಬೇತಿ ಮತ್ತು ಶ್ರಮದ ಫಲವಾಗಿ ಇಂದು ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯದ ಸಂಸ್ಕಾರವನ್ನು ಕಲಿಸುವನ್ನು ದೊಡ್ಡ ತರಬೇತಿ ಕೇಂದ್ರವಾಗಿ ಬೆಳದಿದೆ. ಇಲ್ಲಿ ಕಲಿತಿರುವ ಸುಮಾರು ವಿದ್ಯಾರ್ಥಿಗಳು ಸೀನಿಯರ್ ಕೋರ್ಸಗಳನ್ನು ಮುಗಿಸಿಕೊಂಡು ಭರತ ನಾಟ್ಯದಲ್ಲಿ ಪರಿಪೂರ್ಣರಾಗಿ, ಅದರ ಘಮವನ್ನು ಕಲಾ ಪ್ರೇಮಿಗಳಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ. ಇನ್ನು ಕೆಲವರು ಜೂನೀಯರ್ ಕೋರ್ಸಗಳನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಜನಿ ನಾಟ್ಯ ಶಾಲೆ ವರದಾನವಾಗಿದ್ದು, ಅವರ ಕಲಾಸೇವೆಗೆ ನಮ್ಮ ತಾಲೂಕು ಶಿಕ್ಷಣ ಸಮೀತಿ ಸದಾ ಆಸರೆಯಾಗಿ ನಿಲ್ಲುತ್ತದೆ ಎಂದು ಹೇಳಿದರು. ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ  ವಿದುಷಿ ಸುನಿತಾ ಜಗನ್ನಾಥ ನೆನಪಿನ ಕಾಣಿಕೆಯನ್ನು ವಿತರಿಸಿದರು. 

ಕಾರ್ಯಕ್ರಮದಲ್ಲಿ ಜಿ.ಎಸ್‌.ದೇಸಾಯಿ, ರಂಜನಾ ಪ್ರಕಾಶ ಓಂದಕರ, ವೀರ​‍್ಪ ಕುಲಕರ್ಣಿ, ಸಹನಾ ನೆಲ್ಲಿಕೊಪ್ಪ, ಡಿ.ಆರ್‌. ತೋಟಗೇರ, ಜಗನ್ನಾಥ ಎಂ.ಪಿ ಇತರರಿದ್ದರು.