ಸಾಹಿತ್ಯ ಕ್ಷೇತ್ರಕ್ಕೆ ದ್ಯಾಂಪೂರಿನ ಕೊಡುಗೆ ಅಪಾರ ಪುರಾಣ ಉದ್ಘಾಟಿಸಿ ಕವಿಗಳ ಸ್ಮರಿಸಿದ ಶ್ರೀಮಹಾದೇವ ದೇವರು

ಲೋಕದರ್ಶನ ವರದಿ

ಕುಕನೂರು 04: ಪುರಾಣ ಸಾಹಿತ್ಯ ಜನ್ಮ ತಾಳಿದ್ದು ದ್ಯಾಂಪೂರಿನಲ್ಲಿ. ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ದ್ಯಾಂಪೂರಿನ ಕವಿಗಳ ಕೊಡುಗೆ ಅಪಾರ ಎಂದು ಕುಕನೂರಿನ ಅನ್ನದಾನೀಶ್ವರ ಮಠದ ಮಹಾದೇವ ದೇವರು ಹೇಳಿದರು.

ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶರಣಸಬಸವೇಶ್ವರ 11ನೇ ವರ್ಷದ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರಾವಣ ಪವಿತ್ರ ಮಾಸ  ಧಾಮರ್ಿಕ ಹಾಗೂ ಶ್ರದ್ಧಾ ಭಕ್ತಿಯ ಸಂಕೇತ. ಪ್ರತಿಯೊಬ್ಬರು ಶ್ರಾವಣದಲ್ಲಿ ಪುರಾಣ-ಪ್ರವಚನ ಆಲಿಸಬೇಕು. ದ್ಯಾಂಪೂರಿನ ಕವಿಗಳಾದ ಚನ್ನಕವಿಗಳು, ಕಲ್ಲಿನಾಥಶಾಸ್ತ್ರೀಗಳು, ಡಾ. ನಿಜಲಿಂಗಯ್ಯನವರು ಪುರಾಣಗಳನ್ನು  ಬರೆದಿದ್ದಾರೆ  ರಾಜ್ಯದಲ್ಲಿ  ಪುರಾಣ ಸಾಹಿತ್ಯ ರಚಿಸುವ ಮೂಲಕ ಧಾಮರ್ಿಕ ಪರಂಪರೆಗಡ ದ್ಯಾಂಪೂರಿನ ಕೊಡುಗೆ ಅಪಾರ ಆಗಿದೆ. ಕವಿ ಸಿದ್ದಯ್ಯ ಪುರಾಣಿಕರ ತವರೂ ದ್ಯಾಂಪೂರು ಎಂದು ಶ್ಲಾಘೀಸಿದರು.

ಧಾಮರ್ಿಕ ಕಾರ್ಯಕ್ರಮಗಳಿಂದ ಸದ್ಭಾವನೆ ಮೂಡುತ್ತವೆ. ಶ್ರಾವಣ ಮಾಸ ಪ್ರತಿದಿನವೂ  ಮಹತ್ತರವಾಗಿದ್ದು,  ಪೂಜೆ, ಮಂತ್ರಪಠಣ, ಪುರಾಣ-ಪ್ರವಚನಗಳ ಆಲಿಕೆ ತಿಂಗಳಿನಾದ್ಯಂತ ನಡೆಯುತ್ತದೆ. ಪುರಾಣಗಳ ಕೇಳುವಿಕೆಯಿಂದ ಏಕಾಗ್ರತೆ  ಜೊತೆಗೆ  ಧಾಮರ್ಿಕ ಮನೋಭಾವನೆ ಬೆಳೆಯುತ್ತದೆ. ಜಗತ್ತು ಸುಂದರವಾಗ ಬೇಕಾದರೆ ಹಣ, ಅಂತಸ್ತಿನ ಮನೆ, ಸಿರಿ ಸಂಪತ್ತುಗಳಿಕೆ ಮುಖ್ಯವಲ್ಲ, ಜೀವನದಲ್ಲಿ ಹೃದಯ ಶ್ರೀಮಂತಿಕೆ ಅತ್ಯಂತ ಅಗತ್ಯವೆಂದರು.

ಮುಖಂಡ ರಾಮಣ್ಣ ನೋಟಗಾರ ಮಾತನಾಡಿ, ಗ್ರಾಮವೊಂದು ಗುರುತಿಸಿಕೊಳ್ಳಬೇಕಾದರೇ ಆ ಗ್ರಾಮದಲ್ಲಿ ನಿಷ್ಠೆಯಿಂದ ಜರುಗುವ ಧಾಮರ್ಿಕ ಕಾರ್ಯಕ್ರಮ ಪರಿಣಾಮ ಬೀರುತ್ತವೆ. ಶರಣಬಸವೇಶ್ವರ ಪುರಾಣ ಅತ್ಯಂತ ಅರ್ಥಗಭರ್ೀತವಾಗಿದ್ದು, ಪುರಾಣದಲ್ಲಿ ಬರುವ ಪ್ರತಿಯೊಂದು ಪ್ರಸಂಗ ಮನುಷ್ಯನ ಜೀವನದಲ್ಲಿ ಉತ್ತಮ ಪರಿಣಾಮಕಾರಿ ಭಾವನೆ ಕೊಡುತ್ತವೆಂದರು. ಗಾಯಕಿ  ಅಕ್ಷತಾ ಬಣ್ಣದಬಾವಿ ಸಂಗೀತ ಸೇವೆ ನೀಡಿದರು. ಗ್ರಾಮದ ಹಿರೇಮಠದ ಗುರು ಜಗದೀಶ ಹಿರೇಮಠ, ಹಾಲುಮತ ಸಮಾಜದ ಗುರು ವಿರುಪಾಕ್ಷಯ್ಯ ಗುರುವಿನಮಠ, ಪುರಾಣ ಸೇವಾ ಸಮಿತಿ ಅಧ್ಯಕ್ಷ ಈರಪ್ಪ ನೋಟಗಾರ, ಕಾರ್ಯದಶರ್ಿ  ರಾಜಶೇಖರಯ್ಯ ಶಿರೂರಮಠ, ಗ್ರಾಪಂ ಸದಸ್ಯ ಶಿವಯ್ಯ ಸಸಿಮಠ,  ಪ್ರವಚನಕಾರ ರುದ್ರಮುನಿ ಶಾಸ್ತ್ರೀ, ಹಾಮರ್ೋನಿಯಂ ವಾದಕ  ದೇವಪ್ಪ  ಮಾಸ್ತಾರ, ತಬಲಾ ವಾದಕ ಬಸವರಾಜ ಕುರಟ್ಟಿ, ಪ್ರಮುಖರಾದ ಡಾ. ಬಸವರಾಜ ಬಣ್ಣದಬಾವಿ,  ಬಸವರಾಜ ಮೇಟಿ,  ಮುತ್ತಯ್ಯ ಸರಗಣೇಚಾರ,  ಈಶಯ್ಯ ಶಿರೂರಮಠ, ಸುರೇಶ ಸದರಿ,  ರಾಮಪ್ಪ ಕೊರ್ಲಹಳ್ಳಿ,  ಹನುಮಪ್ಪ ನೋಟಗಾರ, ಗುಡದಪ್ಪ  ಹಲರ್ಾಪೂರ, ಮೈಲಾರಪ್ಪ ಹಲರ್ಾಪೂರ, ಈರಪ್ಪ ಸದರಿ, ಶಿವಯ್ಯ ಶಿರೂರಮಠ, ಗಿರಿಯಪ್ಪ ಬೀಡಿನಾಳ, ಬಸವರಾಜಸ್ವಾಮಿ ಕಂದಗಲ್ಲಮಠ, ಭೀಮರೆಡ್ಡಿ ಬೀಡಿನಾಳ, ಈರಣ್ಣ ಬೆಣಕಲ್, ಮಂಜುನಾಥ  ಕಾಯಗಡ್ಡಿ,  ಬಸವರೆಡ್ಡಿ ಬೀಡಿನಾಳ ಹಾಗೂ ಶ್ರೀಶರಣಬಸವೇಶ್ವರ ಭಜನಾ ಸಂಘದವರು ಹಾಗೂ ಇತರರಿದ್ದರು.