ಅಮಿತ್ ಷಾ ರಾಜಿನಾಮೆಗೆ ಆಗ್ರಹಿಸಿ ಡಿಎಸ್ ಎಸ್ ಪ್ರತಿಭಟನೆ
ಬಳ್ಳಾರಿ 20: ಭಾರತ ರತ್ನ ಡಾ. ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುವ, ಪ್ರಜಾಪ್ರಭುತ್ವ ವಿರೋಧಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆ ನೀಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ ಬಣ) ಒತ್ತಾಯಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಿತು.ಸಮಿತಿಯ ರಾಜ್ಯ ಸಂಚಾಲಕ ಎ.ಮಾನಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾ ಮತ್ತು ಬಿಜೆಪಿ ವಿರುದ್ದ ಘೋಷಣೆ ಕೂಗಲಾಯ್ತು.ರಾಜ್ಯ ಸಭೆಯಲ್ಲಿ 75ನೇ ವರ್ಷದ ಸಂವಿಧಾನ ಚರ್ಚೆಯಲ್ಲಿ ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನಸ್ಥಿತಿ ಏನೆಂದು ದೇಶದ ಜನರಿಗೆ ಗೊತ್ತಾಗುತ್ತದೆ.
ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ಗುಜರಾತಿನಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದರು ಅವರನ್ನು ಸಮರ್ಥನೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದಾದರೂ ಒಂದು ರೈಲ್ವೆ ಸ್ಟೇಷನ್‌ನಲ್ಲಿ ಚಹಾ ಮಾರುತ್ತಾ ಕುಳಿತು ಕೊಳ್ಳುತ್ತಿದ್ದರು. ಇವರನ್ನು ಸಮರ್ಥನೆ ಮಾಡಿದ ಸಂಸದರು ಸಹ ಯಾರೋ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು ಸಂವಿಧಾನ ಎಂದರೆ ಸಂಘ ಪರಿವಾರದ ರೋಲ್ ಪುಸ್ತಕ ಅಲ್ಲ ಈ ದೇಶದ ಸಮಗ್ರತೆ, ಏಕತೆ, ಜಾತ್ಯಾತೀತ ರಾಷ್ಟ್ರವಾದ ದೇಶದಲ್ಲಿ ಅಮಿತ್ ಶಾ ಅವರಂತ ಮನುಸ್ಥಿತಿ ಉಳ್ಳವರು ಗೃಹ ಸಚಿವರಾಗಿ ಮುಂದುವರಿಯ ಬಾರದು. ಕೂಡಲೇ ದೇಶದ ಜನರ ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕೆಂದು ಸಮಿತಿಯ ರಾಜ್ಯ ಸಂಘಟನ ಸಂಚಾಲಕ ಎ ಮಾನಯ್ಯ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಬಿ ಗಂಗಪ್ಪ ಸಂಘಟನಾ ಸಂಚಾಲಕರಾದ ಕೆ.ದೇವದಾಸ್, ಹೆಚ್ ಆಂಜಿನೇಯ್ಯ, ಮುಖಂಡರುಗಳಾದ ಬಿ.ರಮೇಶ್, ಕೆಂಚಪ್ಪ, ನಾಗೇಂದ್ರ್ಪ ದುರುಗಪ್ಪ, ಡಾ. ಕೆ. ಬಸಪ್ಪ, ರುದ್ರಮುನಿ ವಕೀಲರು, ಜಿ.ಪೊಂಪಾಪತಿ ಕುಡತಿನಿ, ಮಲ್ಲಿಕಾರ್ಜುನ ಕುಡತಿನಿ, ಟಿ.ಸಿದ್ದೇಶ್, ಮಹೇಶ್ ಇಂದಿರಾನಗರ, ತಾಲ್ಲೂಕು ಸಂಚಾಲಕರುಗಳಾದ ಹೆಚ್. ಮಲ್ಲಪ್ಪ ಬಳ್ಳಾರಿ, ದೊಡ್ಡ ಬಸಪ್ಪ ಸಿರುಗುಪ್ಪ, ಜಗದೀಶ್ ಕುಮಾರ್ ಕಂಪ್ಲಿ, ಮಾರ್ಪ ಕುರುಗೋಡು, ಸಂಘಟನ ಸಂಚಾಲಕರಾದ ಹೆಚ್.ಶಂಕರ್. ರಾಜಣ್ಣ, ಭತ್ರಿ ಮಹೇಶ್, ಭೀಮಶಂಕರ್, ದುರ್ಗದಾಸ್, ಹನುಮಂತ ಕುಡತಿನಿ, (ಹೆಚ್.ಕೆ ತಿರುಮಲ ಯರಗುಡಿ, ಬಾಪೂಜಿ ಗಂಗಣ್ಣ, ಮಲ್ಲಿ, ಗಂಗಾಧರ, ಸಿದ್ದಾರ್ಥ ಮೊದಲಾದವರು ಭಾಗವಹಿಸಿದ್ದರು.