ಹಾವೇರಿ18: ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸ್ವಯಂ ದೃಢೀಕೃತ ಪ್ರಮಾಣಪತ್ರಗಳನ್ನು ಪಡೆಯಲಾಗುತ್ತದೆ. ಯಾವುದಾದರೂ ದಾಖಲೆಗಳು ಇಲ್ಲದಿದ್ದರೆ ಯಾರೂ ಆತಂಕಪಡುವುದು ಬೇಡ. ಯಾವುದೇ ಸಮಸ್ಯೆ ಇದ್ದರೆ ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ರಚಿಸಲಾದ ಸಮಿತಿಯನ್ನು ಸಂಪಕರ್ಿಸಲು ರೈತರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸಲಹೆ ನೀಡಿದರು.
ಸಾಲ ಮನ್ನಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಂದ ದಾಖಲೆಗಳ ನೋಂದಣಿ ಪ್ರಕ್ರಿಯೆ ಕುರಿತು ಶಿಗ್ಗಾಂವ ತಾಲೂಕು ಹಿರೇಬೆಂಡಿಗೇರಿ ಕನರ್ಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ರೈತರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉತ್ತರಿಸಿದರು.
ರಾಜ್ಯ ಸಕರ್ಾರ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ ಈಗಾಗಲೇ ಋಣಮುಕ್ತ ಪತ್ರವನ್ನು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದೇ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲಗಳ ಪೈಕಿ ಎರಡು ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯಡಿ ಜಿಲ್ಲೆಯ 1.10 ಲಕ್ಷಕ್ಕೂ ಹೆಚ್ಚು ರೈತರು ಅರ್ಹರಿದ್ದಾರೆ. ಸಾಲ ಮನ್ನಾಮಾಡಿ ಋಣಮುಕ್ತ ಪತ್ರ ನೀಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಗೊಳಿಸಿದೆ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿದ ರೈತರು ಪ್ರ ಪತ್ರ 95ರಲ್ಲಿ ಘೋಷಣಾ ಪತ್ರ ನೀಡಿ ಆಯಾ ಬ್ಯಾಂಕಿನ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬೇಕು. ಸಾಲಾ ಮಾಡಿದ ರೈತನ ಆಧಾರ್ ಕಾಡರ್್, ರೇಷನ್ ಕಾಡರ್್ ಹಾಗೂ ಭೂಮಿಯ ಖಾತೆ ಸಂಖ್ಯೆಯನ್ನು ಗಣಕಯಂತ್ರದಲ್ಲಿ ಅಪ್ಲೋಡ್ಮಾಡಬೇಕು. ಒಂದೊಮ್ಮೆ ರೇಷನ್ ಕಾಡರ್್ ಚಾಲ್ತಿಯಲ್ಲಿ ಇಲ್ಲದಿದ್ದರೆ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಆಹಾರ ವೆಬ್ಸೈಟ್ನಲ್ಲಿ ಪರಿಶೀಲಿಸಬೇಕು. ಶಾಂತ ರೀತಿಯಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯ ಪ್ರತಿ ವಾಣಿಜ್ಯ ಬ್ಯಾಂಕಿನಲ್ಲಿ ಆರು ನೂರರಿಂದ ಒಂದು ಸಾವಿರವರೆಗೆ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರುವ ರೈತರಿದ್ದಾರೆ. ಎಲ್ಲರನ್ನು ಒಮ್ಮೆಲೆ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿದಿನ 40 ಜನರಂತೆ ನೋಂದಾಯಿಸಿಕೊಳ್ಳಲಾಗುವುದು. ಬ್ಯಾಂಕಿನ ದೈನಂದಿನ ಕೆಲಸದ ಜೊತೆಗೆ ನೋಂದಣಿ ಕೆಲಸವು ನಡೆಸಬೇಕಾಗಿರುವುದರಿಂದ ಸಾಲ ಮನ್ನಾ ಸ್ವಯಂ ದೃಢೀಕರಣ ನೀಡಲು ಬ್ಯಾಂಕಿಗೆ ಬರುವ ರೈತರಿಗೆ ಟೋಕನ್ ಸಂಖ್ಯೆಗಳನ್ನು ನೀಡಲಾಗುತ್ತದೆ. ಸಂಖ್ಯೆಯ ಸರದಿಯಂತೆ ಎಲ್ಲರನ್ನೂ ನೋಂದಾಯಿಸಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರು ನಿಯಮಿತವಾಗಿ ಬೆಳೆ ಸಾಲ ತುಂಬಿದ ರೈತರಿಗೂ ಸಾಲ ಮನ್ನಾ ಯೋಜನೆಯ ಪೂರ್ಣ ಲಾಭ ದೊರಕುವಂತಾಗಬೇಕು ಎಂದು ಮನವಿ ಮಾಡಿಕೊಂಡರು. ಈ ಕುರಿತ ಮನವಿಯನ್ನು ಸಕರ್ಾರಕ್ಕೆ ಕಳುಹಿಸಲಾಗುವುದು, ಸಕರ್ಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ, ನಬಾಡರ್್ ಬ್ಯಾಂಕಿನ ಡಿಡಿಎಂ ಹಾಗೂ ಉಸ್ತುವಾರಿ ಅಧಿಕಾರಿ ಮಹದೇವ ಕೀತರ್ಿ ಇತರರು ಉಪಸ್ಥಿತರಿದ್ದರು.