ಡಿ,23 ಬಿಜೆಪಿ ವಿರುದ್ಧ ಕಾಂಗ್ರೇಸ್ ಪಕ್ಷದಿಂದ ಬೃಹತ್ ಪ್ರತಿಭಟನೆ
ಜಮಖಂಡಿ 22: ಸಂವಿಧಾನ ಶಿಲ್ಪಿ ಡಾ, ಬಿ.ಆರ್,ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆಯನ್ನು ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ,ಟಿ,ರವಿ ಅವರ ಅವಮಾನ ಮಾಡಿದನ್ನು ತೀವ್ರವಾಗಿ ಖಂಡಿಸಿ. ಡಿ,23 ರಂದು ಕಾಂಗ್ರೇಸ್ ಪಕ್ಷದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಅನಂದ ನ್ಯಾಮಗೌಡ ಹೇಳಿದರು.
ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬರು ದೇಶದ ಪ್ರಜೆಗಳಿಗರ ಸಮಾನ ಬದುಕು ಕಲ್ಪಿಸಿದ್ದಾರೆ. ಅಂತಹ ಮೇರು ವ್ಯಕ್ತಿಗಳಿಗೆ ತೇಜೋವಧೆ ಮಾಡುವು ಅಪರಾಧವಾಗಿದೆ. ಅವರೊಬ್ಬರು ಜನಪ್ರತಿನಿಧಿಯಾಗಿ ಸಂಸತ್‌ನಲ್ಲಿ ಅವಹೇಳನಕಾರಿ ಮಾತನಾಡಿದ್ದಾರೆ. ಇಂತಹ ಸಂಸತ್‌ನಲ್ಲಿ ಇಂತಹ ಹೇಳಿಕೆ ನೀಡಬಾರದು. ಇಂತಹವರು ಸಂಸದ ಸಭೆಯಲ್ಲಿಯೂ ಸಹ ಇರಬಾರದು. ತಕ್ಷಣ ರಾಜೀನಾಮೆಯನ್ನು ನೀಡಬೇಕೆಂದು ಅಗ್ರಹಿಸಿದರು.
ಬಿಜೆಪಿ ಪಕ್ಷವು ಮೊದಲಿನಿಂದಲೂ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಅನೇಕ ನಾಯಕರು ಹೇಳಿಕೆ ನೀಡುತ್ತಾ ದೇಶ ಜನತೆಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಇಂತಹವರಿಂದ ದೇಶ ರಕ್ಷಣೆ ಹೇಗೆ ಸಾಧ್ಯವಾಗುತ್ತದೆ. ಈ ಕೂಡಲೇ ಗೃಹ ಸಚಿವರು ಜವಾಬ್ದಾರಿ ಅರಿತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ವಿಪ ಸದಸ್ಯ ಸಿ,ಟಿ, ರವಿ ಅವರು ಮಹಿಳಾ ಹಿರಿಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಅತೀ ಹಗುರವಾಗಿ ಮಾತನಾಡಿದ್ದೂ ಕೂಡಾ ಖಂಡನೀಯವಾಗಿದೆ. ಮಹಿಳೆಯರಿಗೆ ದೇಶದಲ್ಲಿ ತಾಯಿ ಸ್ಥಾನ ನೀಡಿ ಗೌರವಿಸುತ್ತೇವೆ. ಮಹಿಳಾ ಸಚಿವೆಗೆ ಮಾತನಾಡಿದ ವಿರುದ್ದ ಕ್ರಮ ಜರುಗಿಸಬೇಕು. ಬರುವ ದಿನ ಸೋಮವಾರ ಡಿ, 23 ರಂದು ಬೆಳ್ಳಗೆ ಬೃಹತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ, ಅಂದು ಹಳೇ ತಹಶಿಲ್ದಾರ ಕಚೇರಿಯಿಂದ ಪ್ರಾಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದರು,
ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮೀನ, ಬಸವರಾಜ ಸಿಂಧೂರ. ಶ್ಯಾಮ ಘಾಟಗೆ, ಸಿದ್ದು ಮೀಸಿ, ಜಮಖಂಡಿ ಬ್ಲಾಕ ಅಧ್ಯಕ್ಷ ಮಹೇಶ ಕೋಳಿ, ರವಿ ಯಡಹಳ್ಳಿ ಮಾತನಾಡಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಗ್ರಾಮೀಣ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಪಾಟೀಲ, ತಾಲೂಕಾ ಗ್ಯಾರಂಟೀ ಯೋಜನೆ ಅನುಷ್ಠಾನ ಸಮೀತಿ ಅಧ್ಯಕ್ಷ ಕಲ್ಲಪ್ಪಾ ಗಿರಡ್ಡಿ, ಬಸವರಾಜ ಹರಕಂಗಿ, ಅಪ್ಪಣ್ಣಾ ಸಿರಹಟ್ಟಿ, ಸಾದಿಕ ಬಂಟನೂರ, ದಾನೇಶ ಘಾಟಗೆ, ರಪೀಕ್ ಬಾರಿಗಡ್ಡಿ, ದಿಲಾವರ ಶಿರೋಳ, ಈಶ್ವರ ವಾಳೆನ್ನವರ, ಪ್ರೇಮ ಬಳೋಲಗಿಡದ, ರೋಹಿತ ಸೂರ್ಯವಂಶಿ, ಪುಟ್ಟು ಪಾಣಿ, ವಿಶಾಲ ತೇಲಿ, ನವೀನ ಕಲೂತಿ, ಸುನೀಲ ತೇಲಿ, ಮಲ್ಲು ಶಿರಹಟ್ಟಿ, ಕುಮಾರ ಶಿವನಕ್ಕನವರ, ಮೀರಾ ಒಂಟಮೋರಿ ಸೇರಿದಂತೆ ಅನೇಕ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದರು.