ಸಾಂಸ್ಕೃತಿಕ ಶ್ರೀಮಂತಿಕೆ ಮೆರೆದ ಹಾರೂಗೇರಿ : ಡಾ.ಮಾಳಿ
Cultural richness of Harugeri: Dr. Mali
ಹಾರೂಗೇರಿ : ಬೆಳಗಾವಿ ಜಿಲ್ಲಾ ಸಮ್ಮೇಳನ ವೈಶಿಷ್ಠ್ಯ ಪೂರ್ಣ, ಅದ್ದೂರಿ, ಅಚ್ಚುಕಟ್ಟಾಗಿ ಜರುಗಲು ಈ ಭಾಗದ ಕನ್ನಡ ಮನಸ್ಸುಗಳ ಸಾಂಸ್ಕೃತಿಕ ಶ್ರೀಮಂತಿಕೆ, ಕನ್ನಡಾಭಿಮಾನ ಮೆರೆದಿದ್ದು ಹಾರೂಗೇರಿ ಜನತೆಯ ಹೆಗ್ಗಳಿಕೆ. ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ಶ್ರೀ ವೃಷಭೇಂದ್ರ ಮಹಾವಿದ್ಯಾಲಯದಲ್ಲಿ ರವಿವಾರ ಸಂಜೆ ನಡೆದ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ ಕನ್ನಡ ಮನಸ್ಸುಗಳಿಗೆ ಕೃತಜ್ಞತಾ ಸಮರ್ಣ ಸಮಾರಂಭದಲ್ಲಿ ಕೃತಜ್ಞತಾ ನುಡಿಗಳನ್ನಾಡಿದ ಅವರು ರಾಜರೂ ಇಲ್ಲಿ ಕನ್ನಡ ಕೈಂಕರ್ಯದಲ್ಲಿ ಸೇವಕನಂತೆ ಕೆಲಸ ಮಾಡಿದ್ದು ವಿಶೇಷ. ಊರಿನ ಹಿರಿಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಮಸ್ತ ಗುರುಬಳಗ, ಸಂಘ-ಸಂಸ್ಥೆ ಹಾಗೂ ಎಲ್ಲರ ಸಹಕಾರದಿಂದ ಹಾರೂಗೇರಿ ಸಮ್ಮೇಳನ ಸಮಸ್ತ ಕನ್ನಡಿಗರ ಮನ ಗೆಲ್ಲುವಂತಾಗಿದ್ದು, ತಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆಂದು ಹೇಳಿದರು.
ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯಮಟ್ಟದ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ರಾಮಣ್ಣ ಗಸ್ತಿ ಮಾತನಾಡುತ್ತ ಸಾಹಿತಿಗಳಿಗಾಗಿ ಧಾರವಾಡದಂತ ನಗರಗಳನ್ನೇ ನೆಚ್ಚಿಕೊಂಡಿದ್ದ ಕಾಲದಲ್ಲಿ ಡಾ.ವಿ.ಎಸ್.ಮಾಳಿ ಅವರು ಹಾರೂಗೇರಿಗೆ ಕಾಳಿಟ್ಟ ಮೇಲೆ ಬರಡಾಗಿದ್ದ ಕನ್ನಡ ಸಾಹಿತ್ಯ ಮೊಳೆಯಿತು. ಸಾಂಸ್ಕೃತಿಕ ವಾತಾವರಣ, ಕನ್ನಡ ಪ್ರೇಮ ಬೆಳೆಯಿತು. ಅವರಲ್ಲಿರುವ ವಿದ್ವತ್ತು, ಮೌಲ್ಯಯುತ ಗುಣ, ಸೌಜನ್ಯ, ಸರಳತೆ ಸ್ವಭಾವದ ವ್ಯಕ್ತಿತ್ವದಿಂದಾಗಿ ಅಪಾರ ಗಣ ಸಂಪಾದಿಸಿದ್ದಾರೆಂದು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಉಪಆಯುಕ್ತ ಡಾ.ಸಿದ್ದು ಹುಲ್ಲೋಳಿ ಮಾತನಾಡಿ ದಾನಿಗಳ ಅಪಾರ ನೆರವು, ಎಲ್ಲರ ಪರಿಶ್ರಮ, ಸಂಘಟನಾತ್ಮಕ ಕ್ರೀಯಾಶೀಲತೆಯಿಂದಾಗಿ ಬೆಳಗಾವಿ ಜಿಲ್ಲಾ ಸಮ್ಮೇಳನ ರಾಜ್ಯಮಟ್ಟಕ್ಕಿಂತಲೂ ಅದ್ದೂರಿ ಸಮ್ಮೇಳನವನ್ನಾಗಿ ನಡೆಸಲು ಸಾಧ್ಯವಾಯಿತೆಂದು ಹೇಳಿದರು.
ಹಿರಿಯರಾದ ಡಿ.ಸಿ.ಸದಲಗಿ, ನಮ್ಮೂರ ಜಾನಪದ ಸಾಹಿತಿ ಬಿ.ಎ.ಜಂಬಗಿ ಹಾರೂಗೇರಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಡಾ.ಮಾಳಿಯವರ ಕೊಡುಗೆಯನ್ನು ಶ್ಲಾಘಿಸಿದರು. ರಾಯಬಾಗ ತಾಲೂಕು ಕಸಾಪ ಅಧ್ಯಕ್ಷ ಈರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮೃತಾ ಮುಂಗುರವಾಡಿ, ಸಿದ್ಧಾರೂಢ ಅಥಣಿ ಅನಿಸಿಕೆಗಳನ್ನು ಹಂಚಿಕೊಂಡರು, ಕುಮಾರಿ ಸುರಭಿ ಮೊಕಾಶಿ ಕನ್ನಡ ಸಂಗೀತ ಹಾಡಿದರು. ವಚನ ಬಾಡಗಿ ವಚನ ವಾಚಿಸಿ, ಸಭಿಕರ ಮೆಚುಗೆಗೆ ಪಾತ್ರರಾದರು.
ಮಾಜಿ ಶಾಸಕ ಬಿ.ಸಿ.ಸರಿಕರ, ಗಣ್ಯರಾದ ಆರ್.ಎಸ್.ಯಲಶೆಟ್ಟಿ, ಶ್ರೀಶೈಲಗೌಡ ಉಮರಾಣಿ, ಬಸಗೌಡ ಆಸಂಗಿ, ಅರ್ಷದ ಪಠಾಣ, ಆರ್.ಟಿ.ಮಾಳಿ, ಬಾಬು ಪರಮಗೌಡರ, ನೇಮಣ್ಣ ಕೊತ್ತಲಗಿ, ಬಾಬು ಹಳ್ಳೂರ, ಪಿ.ಬಿ.ಕಲ್ಚಿಮ್ಮಡ್, ಡಾ.ರತ್ನಾ ಬಾಳಪ್ಪನವರ, ಅನುಸೂಯಾ ಮುಳವಾಡ, ಆಶಾಕುಮಾರಿ ನಾವಿ, ರೇಖಾ ಗುಪ್ತೆ, ಸುಜಾತಾ ಉಮರೆ, ಗೀತಾ ಮಾಳಶೆಟ್ಟಿ, ಆಶಾ ಹೊನವಾಡೆ, ಲತಾ ಹುದ್ದಾರ ಮತ್ತಿತರರು ಉಪಸ್ಥಿತರಿದ್ದರು. ಶ್ರೀಧರ ಹೊಳ್ಕರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಾಧ್ಯಾಪಕ ಆರ್.ಎ.ಭಾವಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 