ಸಂಬಂಧ ಬೆಸೆಯುವ ಕೊಂಡಿಗಳಾಗಿವೆ ಸಾಂಸ್ಕೃತಿಕ ಉತ್ಸವಗಳು: ಎಸ್.ಆರ್.ಪಾಟೀಲ
Cultural festivals are the bonds that forge relationships: S.R. Patil
ಸಂಬಂಧ ಬೆಸೆಯುವ ಕೊಂಡಿಗಳಾಗಿವೆ ಸಾಂಸ್ಕೃತಿಕ ಉತ್ಸವಗಳು: ಎಸ್.ಆರ್.ಪಾಟೀಲ
ಬೀಳಗಿ 04: ಪಾರಂಪರಿಕ ಮೌಲ್ಯಗಳು, ಮಾನವೀಯ ಸಂಬಂಧಗಳು ಕುಸಿದು ಹೋಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಉತ್ಸವಗಳಂತಹ ಕಾರ್ಯಕ್ರಮಗಳು ಸಂಬಂಧ ಬೆಸೆಯುವ ಕೊಂಡಿಗಳಾಗಿವೆ ಎಂದು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಇಲ್ಲಿಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಏರಿ್ಡಸಿದ ರಜತ ಮಹೋತ್ಸವ ನಿಮಿತ್ಯ ನಡೆದ ಮಹಿಳಾ ಸಾಂಸ್ಕೃತಿಕ ಉತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಹಿಳಾ ತಾಯಂದಿರಿಂದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವಕ್ಕೆ ಒಂದು ಹೊಸ ಕಳೆ ಬಂದಂತ್ತಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳಾ ತಾಯಿಂದರ ಪಾತ್ರವು ಬಹಳ ಹಿರಿದಾಗಿದೆ. ಈ ನಿಟ್ಟನಲ್ಲಿ ಮಹಿಳಾ ತಾಯಿಂದಿರು ದೇಶದ ಪ್ರಗತಿಗೆ ಮುನ್ನಡಿಯಾಗಿದ್ದಾರೆ. ಬೀಳಗಿ ಪಟ್ಟಣ ಬ್ಯಾಂಕ ಹಾಗೂ ಬಾಪೂಜಿ ಬ್ಯಾಂಕ್ ಈ ಭಾಗದ ಜನರ ಒಂದು ಪ್ರೀತಿ ವಿಶ್ವಾಸದಿಂದ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಈ ಭಾಗದ ಮಹಿಳಾ ತಾಯಿಂದಿರು ಸ್ವಂತ ಕಾಲ ಮೇಲೆ ನಿಲ್ಲಲ್ಲು ಯಾವೂದಾದರು ಒಂದು ಯೋಜನೆ ಹಮ್ಮಿಕೊಂಡರೆ ಬ್ಯಾಂಕ್ ಆಧ್ಯತೆಯ ಮೇರಗೆ ಆರ್ಥಿಕ ನೆರವಿನ ಪ್ರೋತ್ಸಾಹ ನೀಡುತ್ತದೆ. ಮಹಿಳೆಯರು ಸ್ವಾವಲಂಬಿಯಾಗಿ ಸ್ವಾಭಿಮಾನದ ಬದುಕನ್ನು ನಡೆಸಲು ಸಶಕ್ತ ಜೀವನ ಸಾಗಿಸುವಂತಾಗಬೇಕು. ಉತ್ತರ ಕರ್ನಾಟಕದ ಉಡಿಗೆ ತೊಡಿಗೆ ತೊಟ್ಟು ಮಹಿಳೆಯರು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ್ದಾರೆ ಎಂದರು.
ಕಸಾಪ ತಾಲೂಕಾ ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿ ಯುವ ಜನಾಂಗ ಜನಪದ ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳಬೇಕು. ತಾಂತ್ರಿಕ ಬದುಕಿನಲ್ಲಿ ಕಳೆದು ಹೋಗಬಾರದು ಎಂದರು.
ಬ್ಯಾಂಕಿನ ನಿರ್ದೇಶಕ ಕೆ.ಎಸ್.ಪತ್ರಿ, ಹೇಮಾದ್ರಿ ಕೊಪ್ಪಳ, ಪಿ.ಬಿ.ಗುರಾಣಿ, ಎ.ಎಚ್.ಬೀಳಗಿ, ರಾಜೇಂದ್ರ ಬಾರಕೇರ, ಗಂಗಣ್ಣ ಕೆರೂರ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಪಾಟೀಲ, ಅನನ್ಯಾ ಪಾಟೀಲ್, ಶಶಿಕಲಾ ಜೋಳದ, ಬ್ಯಾಂಕಿನ ಸಾಲ ವಸೂಲಾತಿ ವಿಭಾಗದ ವ್ಯವಸ್ಥಾಪಕ ಶಾಹೀರ್ ಬೀಳಗಿ ಇತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 