ಸಾಕಷ್ಟು ಮಳೆಯಿಂದ ಬೆಳೆ ಮತ್ತು ಮನೆಗಳು ಹಾನಿ, ಪ್ರವಾಹದಿಂದ ಸಂಕಷ್ಟ: ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ವಾಗ್ದಾಳಿ
Crops and houses damaged due to heavy rain
ವಿಜಯಪುರ 30 : ದಿನಾಂಕ: 25-09-2025 ರಂದು ಭೀಮಾನದಿ ಪ್ರವಾಹ ಕಾರಣಕ್ಕಾಗಿ ಉಸ್ತುವಾರಿ ಮಂತ್ರಿಗಳಾದಂತಹ ಎಂ.ಬಿ. ಪಾಟೀಲರು ಪತ್ರಿಕಾ ಗೋಷ್ಠಿ ಮಾಡಿದ್ದಾರೆ. ಪತ್ರಿಕಾ ಗೋಷ್ಠಿ ವಿಷಯವನ್ನೇ ನೋಡಿದಾಗ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಪತ್ರಿಕೆಗೆ ವಿಷಯ ಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಆಗಿ ಬೆಳೆಗಳು ಮತ್ತು ಮನೆಗಳು ಹಾನಿ ಆಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇದು ಒಂದು ಕಡೆ, ಇನ್ನೊಂದು ಕಡೆ ಸಿಂದಗಿ ಮತ್ತ ಇಂಡಿ ಮತಕ್ಷೇತ್ರದ ಹಳ್ಳಿಗಳಲ್ಲಿ ಪ್ರವಾಹ ಬಂದು ಊರುಗಳು ನೀರಿನಲ್ಲಿವೆ. ಆದರೆ ಅವರು ಪತ್ರಿಕಾಗೋಷ್ಠಿ ಮಾಡಿ ವಿಜಯಪುರ ಜಿಲ್ಲೆಯ ಕಷ್ಟದಲ್ಲಿ ಇರತಕ್ಕಂತಹ ನಿರಾಶ್ರಿತರಿಗೆ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸ ಮಾಡಿಲ್ಲ ನಿರಾಶ್ರಿತರಿಗೆ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸ ಮಾಡಿಲ್ಲ ನಿರಾಶ್ರಿತರಿಗೆ ಯಾವ ರೀತಿ ಸಹಾಯ ಮಾಡುತ್ತದೆ ಎಂಬ ಸ್ಪಷ್ಟತೆ ಇಲ್ಲ ಕಾಂಗ್ರೆಸ್ ಸರ್ಕಾರದ 2 ವರ್ಷದ ವೈಫಲ್ಯಗಳನ್ನೆ ಮಟ್ಟ ಹಾಕಲು ಪತ್ರಿಕಾಗೋಷ್ಠಿ ಕರೆದ ಹಾಗಿದೆ. ಆದರೆ ಸರ್ಕಾರದ ವೈಫಲ್ಯಗಳು ಮುಚ್ಚುವುದು ಸಾಧ್ಯವಿಲ್ಲ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಮಹಾಪೂರವಾಗಿ ರಾಜ್ಯದ ತುಂಬಾ ಫಸರಿಸಿವೆ. ಅದಕ್ಕೆ ನಾನು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ಮನವಿ ಮಾಡುತ್ತೇನೆ. ಯಾವ ರೀತಿ ಭಾರತೀಯ ಜನತಾ ಪಕ್ಷದ ಸರ್ಕಾರದ 2019 ರಲ್ಲಿ ಆಗಿನ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರ್ಪನವರು ಘೋಷಣೆ ಮಾಡಿ ಪರಿಹಾರ ವಿತರಿಸಿದರು. ಅವರ ಎರಡು ಪಟ್ಟು ಈಗಿನ ಸರ್ಕಾರ ಪರಿಹಾರ ನೀಡುವ ಕೆಲಸ ಮಾಡಬೇಕು. ಯಾಕೆಂದರೆ ನಿಮ್ಮ 2 ವರ್ಷದಲ್ಲಿ ಬೆಲೆಗಳು ಗಗನಕ್ಕೇರಿವೆ. ನಮ್ಮ ತೆರಿಗೆ ದುಡ್ಡನ್ನೇ ಬೇರೆ ರಾಜ್ಯದಲ್ಲಿ ನೆರೆ ಬಂದಾಗ ಕೇರಳ ರಾಜ್ಯದ ವಯನಾಡು ಮತ್ತು ಹಿಮಾಚಲ ಪ್ರದೇಶಕ್ಕೆ ಪರಿಹಾರ ಘೋಷಣೆ ಮಾಡುತ್ತೀರಿ ಆಧರೆ ನಮ್ಮ ರಾಜ್ಯದ ಜನರಿಗೆ ಪರಿಹಾರ ಪೋಷಣೆ ಮಾಡಲು ಮೀನಾ ಮೇಷ ಹಾಕುತ್ತೀರಿ ಯಾಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 