ಲೋಕದರ್ಶನ ವರದಿ
ದಾಂಡೇಲಿ 08: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲೆಂದು ಸ್ನಾನಕ್ಕಾಗಿ ಕಾಳಿ ನದಿಗಿಳಿದ ನಿರ್ಮಲ ನಗರದ ನಿವಾಸಿಯಾದ ನಾಗೇಶ ಈರಪ್ಪಾ ಬಳ್ಳಾರಿ ಸುಮಾರು 50ರ ಪ್ರಾಯದ ಈತನನ್ನು ಮೊಸಳೆಯೊಂದು ಈಜುವಾಗ ಕೈಗೆ ಕಚ್ಚಿ ಹಿಡಿದು ಎಳೆದುಕೊಂಡು ಹೋಗಿ ಅನಂತರ ಅದೃಷ್ಟವಶಾತ ಪಾರಾದ ಘಟನೆ ದಾಂಡೇಲಿ ನಗರದ ಈಶ್ವರ ದೇವಸ್ಥಾನದ ಬಳಿ ನಡೆದಿದೆ. ಶುಕ್ರವಾರ ಮುಂಜಾನೆ 10 ಗಂಟೆಯ ಸುಮಾರು ಈ ಘಟನೆ ನಡೆದಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಬಿಜೆಪಿಯ ಚುನಾಯಿತ ನಗರಸಭಾ ಸದಸ್ಯ ರೋಶನ್ಜಿತ್, ಆರ್.ಎಫ್.ಒ ಮಂಜುನಾಥ ಮುಂತಾದವರು ಸ್ಥಳೀಯರೊಂದಿಗೆ ಮೊಸಳೆ ಕಚ್ಚಿಕೊಂಡು ಹೋದ ಈರಪ್ಪನಿಗಾಗಿ ಸುಮಾರು ಒಂದೂವರೆ ಘಂಟೆ ಕಾಲ ಹುಡುಕಾಟ ನಡೆಸಿದ್ದಾರೆ.
ಹುಡುಕಾಟ ನಡೆಸಿದ ಸ್ವಲ್ಪ ಸಮಯದ ನಂತರ 300 ಮೀಟರ ದೂರದ ನಡುಗಡ್ಡೆಯಂತಹ ನದಿಯ ಪ್ರದೇಶದಲ್ಲಿ ವ್ಯಕ್ತಿಯ ನರಳಾಟದ ಕ್ಷೀಣ ಧ್ವನಿ ಸದಸ್ಯ ರೋಶನ್ಜಿತ್ ಆಲಿಸಿದ್ದಾರೆ. ತಕ್ಷಣ ತನ್ನ ಸಂಗಡಿರೊಂದಿಗೆ ಧಾವಿಸಿದ ರೋಶನ್ಜಿತ್ ಗಾಯಗೊಂಡ ಸ್ಥಿತಿಯಲ್ಲಿ ದೊರೆತ ಇತನನ್ನು ಸಾರ್ವಜನಿಕರ ಸಹಾಯದಿಂದ ಬೋಟ ಮುಖಾಂತರ ದಡಕ್ಕೆ ತಂದು ದಾಂಡೇಲಿಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಯಶಸ್ವಿಯಾಗಿದ್ದಾರೆ ಅನಂತರ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಯರ್ಾಚರಣೆ ಸಂದರ್ಭ ರವಿ ನಾಯ್ಕ, ಯೋಗೆಶ, ಸ್ಯಾಂಡಿ ಮುಂತಾದವರು ಸ್ಥಳದಲ್ಲಿದ್ದರು.