ಹಾವೇರಿ07: ನೆಮ್ಮದಿ ಹಾಗೂ ಸ್ವಸ್ಥ್ಯ ಸಮಾಜ ನಿಮರ್ಾಣವಾಗಬೇಕಾದರೆ ಅಪರಾಧಗಳು ಸಂಖ್ಯೆ ಕಡಿಮೆಯಾಬೇಕು. ಈ ನಿಟ್ಟಿನಲ್ಲಿ ಹಾವೇರಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲ್ಯಾಘನೀಯ ಎಂದು ಜಿಲ್ಲಾಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಗುರುಭವನದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾದ ಅಪರಾಧ ತಡೆ ಮಾಸಾಚರಣೆ ಹಾಗೂ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಅತಿಯಾದ ಆಸೆಯಿಂದ ಇಂದು ಅಪರಾಧಗಳು ಹೆಚ್ಚಾಗಿ ನಡೆಯುತ್ತಿವೆ. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ . ಒಂದು ಉತ್ತಮ ನಾಗರಿಕ ಸಮಾಜ ನಿಮರ್ಾಣವಾಗಬೇಕಾದರೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಾರ್ವಜನಿಕರು ಕಾನೂನುಗಳನ್ನು ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪರಾಧಗಳು, ಕಳ್ಳತನ ಸುಲಿಗೆಯಂತ ಇತರೆ ಪ್ರಕರಣಗಳು ಕಡಿಮೆಯಾಗುತ್ತವೆ ಹಾಗೂ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಇಂದಿನ ಯುವ ಜನತೆ ಯಾವುದೇ ಆಸೆ ಆಮಿಷ್ಯಗೆ ಒಳಗಾಗಿ ಅನೇಕ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಹಾಗಾಗಿ ಯುವಜನತೆ ಯಾವುದೇ ಆಮಿಷಗಳಿಗೆ ಬಲಿಯಾಗದೆ ಉತ್ತಮ ಜೀವನ ಶೈಲಿಗಳನ್ನು ರೂಢಿಸಿಕೊಳ್ಳಬೇಕು. ರಾಜ್ಯದ ಜನರು ಶಾಂತಿಪ್ರೀಯರು, ಸಂವೇದಾನ ಶೀಲರಾಗಿದ್ದರಿಂದ ಕನರ್ಾಟಕದಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಕನರ್ಾಟಕವೂ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಜಿ.ಎ. ಜಗದೀಶ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಗಲಭೆ, ಸುಲಿಗೆ ಶೇ.75ರಷ್ಟು ಕಡಿಮೆಯಾಗಿವೆ. ಸಂಚಾರಿ ನಿಯಮಗಳ ಬಗ್ಗೆ, ಕಳ್ಳತನ, ದರೋಡೆ, ಕಾಣೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತವೆ. ಅವುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಕಾಣೆಯಾದ ಪ್ರಕರಣಗಳು:
ಜಿಲ್ಲೆಯಲ್ಲಿ 2012ರಿಂದ 2017ರವರಗೆ 80 ಮಹಿಳೆಯರ ಕಾಣೆ ಪ್ರಕರಣ ದಾಖಲಾಗಿದ್ದು, 80 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬಾಲಕರಲ್ಲಿ 70 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 64 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಇನ್ನೂ 6 ಪ್ರಕರಣಗಳು ಪತ್ತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಪ್ರಕರಣಗಳ ಪತ್ತೆ: ಕಳೆದ ಮೂರು ವರ್ಷಗಳಲ್ಲಿ ದರೋಡೆಯಲ್ಲಿ 16 ಪ್ರಕರಣಗಳು, ಕಳ್ಳತನ 19 ಪ್ರಕರಣಗಳು, ಹಗಲು ಮತ್ತು ರಾತ್ರಿ ಕಳ್ಳತನದಲ್ಲಿ 37 ಪ್ರಕರಣಗಳು, ಸಾಮಾನ್ಯ ಕಳ್ಳತನದಲ್ಲಿ 908 ಪ್ರಕರಣಗಳು ನಡೆದಿವೆ.
ಈ ವೇಳೆ ಅಪರಾಧ ತಡೆ ಮಾಸಾಚರಣೆ ಕರಪತ್ರ, ಸಂಚಾರಿ ನಿಯಮಗಳ ಜಾಗೃತಿ ಕರಪತ್ರಗಳ ನಗರಸಭೆ ಆಯುಕ್ತ ಬಿ.ಎಫ್. ಜಿದ್ದಿ ಬಿಡುಗಡೆಗೊಳಿಸಿದರು.
ಡಿಎಸ್ಪಿ ಎಲ್ ಕುಮಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ನಿರೀಕ್ಷಕ ಎಂ.ಐ. ಗೌಡಪ್ಪಗೌಡರ ವಂದಿಸಿದರು.
ಬೈಕ್ ರ್ಯಾಲಿಗೆ ಚಾಲನೆ: ನಗರದ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ಸಂಚಾರಿ ನಿಯಮಗಳ ಕುರಿತು ಬೈಕ್ ರ್ಯಾಲಿಗೆ ಜಿಲ್ಲಾಕಾರಿ ಡಾ. ಎಂ.ವಿ. ವೆಂಕಟೇಶ ಚಾಲನೆ ನೀಡಿದರು.
ಈ ಬೈಕ್ ರ್ಯಾಲಿ ಮೈಲಾರ ಮಹಾದೇವಪ್ಪ ವೃತ್ತದಿಂದ ಪ್ರಾರಂಭವಾಗಿ ಮಹಾತ್ಮ ಗಾಂ ವೃತ್ತ, ಜೆ.ಪಿ. ವೃತ್ತ, ಹೊಸಮನಿ ಸಿದ್ಧಪ್ಪ ವೃತ್ತ, ಜೆ.ಎಚ್. ಪಟೇಲ್ ವೃತ್ತ, ಬಸವೇಶ್ವರ ವೃತ್ತ, ಸುಭಾಸ್ ಸರ್ಕಲ್, ಎಂ.ಜಿ. ರಸ್ತೆ ಸೇರಿದಂತೆ ನಗರದ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾ ಗುರುಭವನಕ್ಕೆ ಬಂದು ತಲುಪಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಜಿ.ಎ. ಜಗದೀಶ, ಡಿಎಸ್ಪಿ ಎಲ್. ಕುಮಾರಪ್ಪ, ಬ್ಯಾಡಗಿ ಪಿಎಸ್ಐ ಮಾಹಾಂತೇಶ ಎಂ.ಎಂ., ಗ್ರಾಮೀಣ ಪಿಎಸ್ಐ ಶಶಿಧರ, ಪೊಲೀಸ ನಿರೀಕ್ಷಕ ಎಂ.ಐ. ಗೌಡಪ್ಪಗೌಡರ, ಪಿಎಸ್ಐ, ಎಎಸ್ಐ, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.
ಈ ಬೈಕ್ ರ್ಯಾಲಿಯಲ್ಲಿ ಡಿಎಸ್ಪಿ ಎಲ್. ಕುಮಾರಪ್ಪ, ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಪಲ್ಲವಿ ಜಿ., ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೆಎಸ್ಆರ್ಪಿ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.