ಕ್ರಿಕೆಟ್ ಪಂದ್ಯಾವಳಿ ಕ್ರೀಡಾಪಟು ಉತ್ತಮ ಆಟ ಪ್ರದರ್ಶನ
Cricket tournament athlete performs well
ಕ್ರಿಕೆಟ್ ಪಂದ್ಯಾವಳಿ ಕ್ರೀಡಾಪಟು ಉತ್ತಮ ಆಟ ಪ್ರದರ್ಶನ
ಕೊಪ್ಪಳ 24: ನಗರದ ತಾಲೂಕ ಕ್ರೀಡಾಂಗಣದಲ್ಲಿ ಜರುಗಿರುವ ಕೆಎಸ್‌ಎಲ್ ಸೀಸನ್ 5 ಕ್ರಿಕೆಟ್ ಪಂದ್ಯಾವಳಿ ಸೋಮವಾರದಂದು ಜರುಗಿದ ಪಂದ್ಯದಲ್ಲಿ ಕೆಕೆಆರ್ ಮತ್ತು ಕೆ ಎಸ್ ಕೆ ತಂಡದ ನಡುವೆ ಜರುಗಿದ ಪಂದ್ಯಾವಳಿಯಲ್ಲಿ ಟಾಸ್ಕ್ ಗೆದ್ದ ಕೆ ಎಸ್ ಕೆ ತಂಡ ಬ್ಯಾಟಿಂಗ್ ಆರಿಸಿಕೊಂಡು ನಿಗದಿತ 15 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 121 ರನ್ ಗಳಿಸಿತು, ಇದರಲ್ಲಿ ಮರದಾನ ಅಲಿ ಯವರು ಮೂರು ಸಿಕ್ಸರ್ ಬಾರಿಸಿ 38 ರನ್ನು ಗಳಿಸಿದರು, ಕ್ರೀಡಾಪಟು ಕೀರ್ತಿ ಕುಮಾರ್ ಅವರು 29 ರನ್ನು ಗಳಿಸಿ ಯಶಸ್ವಿಗೆ ಕಾರ್ಣಿಕರ್ತರಾದರೆ ನಂತರ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 94 ರನಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನು ಅನುಭವಿಸಿದರು, ಇದರಲ್ಲಿ ಗಣೇಶ್ ಎಂಬ ಕ್ರೀಡಾಪಟು ಉತ್ತಮ ಆಟ ಪ್ರದರ್ಶನ ಮಾಡಿ 45 ರನ್ ಗಳಿಸಿದರು ಸಹ ತಂಡಕ್ಕೆ ಗೆಲುವು ಸಿಗಲಿಲ್ಲ, ಗೆಲುವು ಸಾಧಿಸಿದ ಕೆ ಎಸ್ ಕೆ ತಂಡದಲ್ಲಿ ಆಜಂ ಖಾಜಿ ಎಂಬ ಕ್ರೀಡಾಪಟು ಮೂರು ಓವರ್ ಗಳಲ್ಲಿ ಎರಡು ವಿಕೆಟ್ ಕಬಳಿಸಿದರು, ಅದೇ ರೀತಿ ಕ್ರೀಡಾಪಟು ಅತಿಕ್ ಅಹಮದ್ ರವರು ಮೂರು ಓವರ್ ಗಳಲ್ಲಿ ಕೇವಲ 13 ರನ್ ನೀಡಿ ಐದು ವಿಕೆಟ್ ಪಡೆದುಕೊಂಡು ಯಶಸ್ವಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಶ್ರಮಿಸಿ ಪ್ರಶಸ್ತಿಯನ್ನು ಸಹ ಅತಿಕ್ ಅಹಮದ್ ರವರು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು, ಸದ್ರಿ ಪಂದ್ಯಾವಳಿಯಲ್ಲಿ ಒಟ್ಟಾರೆಯಾಗಿ ಅತಿಕ್ ಅಹಮದ್ ರವರು ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದ ಕೀರ್ತಿ ತನ್ನದಾಗಿಸಿಕೊಂಡಿದ್ದರೆ ಕ್ರೀಡಾಪಟು ಮರದಾನ್ ಅಲಿ ಯವರು ಅತಿ ಹೆಚ್ಚು ರನ್ ಗಳಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದು ಯಶಸ್ಸಿನ ಕೀರ್ತಿ ತನ್ನದಾಗಿಸಿಕೊಂಡಿದ್ದಾರೆ, ಅಭಿನಂದನೆ, ಹೆಚ್ಚು ರನ್ ಗಳಿಸಿದ ಕ್ರೀಡಾಪಟು ಮರ್ದಾನ ಅಲಿ ಹಾಗೂ ಅತಿ ಹೆಚ್ಚು ವಿಕೆಟ್ ಪಡೆದುಕೊಂಡು ಪಂದ್ಯ ಪುರುಷ ಪ್ರಶಸ್ತಿ ಪಡೆದ ಅತಿಕ ಅಹಮದ್ ರವರಿಗೆ ಕ್ರೀಡಾಭಿಮಾನಿಗಳು ಕ್ರೀಡಾಪಟುಗಳು ಸಾರ್ವಜನಿಕರು ಸಂಘಟನೆಯ ಮುಖ್ಯಸ್ಥರು ಕಾರ್ಯಕ್ರಮ ಸಂಘಟಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 