ಲೋಕದರ್ಶನ ವರದಿ
ಶಿರಹಟ್ಟಿ 25: ಕೊರೊನಾ ಸೋಂಕು ಬಡವ, ಶ್ರೀಮಂತರೆಂಬುವುದನ್ನು ಲೆಕ್ಕಿಸದೆ ಬೇಜವಾಬ್ದಾರಿ ತೋರಿದ ಪ್ರತಿಯೊಬ್ಬರಿಗೂ ಅಂಟಿಕೊಳ್ಳುತ್ತಿದೆ. ಅಲ್ಲದೆ ಯಾವುದೆ ಜಾತಿಗೆ ಸೀಮಿತವಾಗದೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದನ್ನು ತಡೆಗಟ್ಟಲು ಜಾತಿಯತೆ, ಬಡವ ಬಲ್ಲಿದ ಎಂಬ ಧೋರಣೆಯನ್ನು ತೆಗೆದುಹಾಕಿ ಪ್ರತಿಯೊಬ್ಬರೂ ಸರಕಾರದ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಯದುಕೊಂಡಾಗ ಮಾತ್ರ ಅದನ್ನು ದೇಶದಿಂದ ಹೊಡೆದೊಡಿಸಲು ಸಾಧ್ಯ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಅಭಿಪ್ರಾಯಪಟ್ಟರು.
ಸ್ಥಳೀಯ ತಹಶೀಲ್ದಾರ ಕಛೇರಿಯಲ್ಲಿ ಶನಿವಾರ ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಕರ್ಾರ ಜನರ ಆರೋಗ್ಯ ದೃಷ್ಠಿಯಿಂದ ಹಲವು ಅಗತ್ಯ ಸೇವೆ ಕಲ್ಪಿಸಿದೆ, ಜನರು ಆರೋಗ್ಯ ಸೇತು ಆ್ಯಪ್ ಬಳಸಿ ಕೊರೋನಾ ವೈರಸ್ ಕುರಿತು ಅರಿವು ಹೊಂದಬೇಕು ಎಂದು ಹೇಳಿದರು.
ಸಾಮಾಜಿದೇಶಾದ್ಯಂತ ಮಹಾಮಾರಿ ಕೊರೊನಾವನ್ನು ತಡೆಗಟ್ಟಲು ವೈದ್ಯರು, ಪೌರ ಕಾಮರ್ಿಕರು, ಪೊಲೀಸ್ ಸಿಬ್ಬಂದಿ, ಆಡಳಿತ ವರ್ಗದವರು ನಿತ್ಯ ಶ್ರಮಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು
ಜನರ ಅಗತ್ಯ ಸೇವೆಗೆ ಅವಕಾಶ: ತಾಲೂಕಿನಲ್ಲಿ ಉಜ್ವಲ ಯೋಜನೆಯಡಿ 5090 ಬಡ ಕುಟುಂಬದವರಿಗೆ ಉಚಿತ ಸಿಲಿಂಡರ ಹಾಗೂ ರೇಷನ್ ಕಾಡರ್್ ಇಲ್ಲದಿರುವ 130 ಕುಟುಂಬದ ಅಜರ್ಿಗೆ ರೇಷನ್ ವಿತರಣೆ, ಉದ್ಯೋಗ ಖಾತ್ರಿ ಯೋಜನೆಯಡಿ 10008(ಹತ್ತು ಸಾವಿರದ ಎಂಟು)ಮಾನವ ದಿನ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆರೋಗ್ಯ ದೃಷ್ಠಿಯಿಂದ ಓಡಾಟಕ್ಕೆ ಕಡಿವಾಣ: ಸೋಂಕು ತಡೆಗಟ್ಟುವ ದೃಷ್ಠಿಯಿಂದ 3 ಕಡೆ ಚೆಕ್ಕ್ ಪೋಸ್ಟ್ ನಿಮರ್ಿಸಿ ಜನರ ಓಡಾಟಕ್ಕೆ ಕಡಿವಾಣ ಹಾಕಿದ್ದು, ಬೇರೆ ಬೇರೆ ಊರುಗಳಿಂದ ಬಂದ 3000 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, 2-3 ದಿನಗಳಲ್ಲಿ ಸರ್ವರ ಕ್ವಾರಂಟೈನ್ ಅವಧಿ ಸಂಪೂರ್ಣ ಮುಗಿಯುತ್ತದೆ. ಅಲ್ಲದೇ 9 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು, 9 ಜನರ ವರದಿ ನೆಗಟಿವ ಬಂದಿದೆ. ಹೀಗಾಗಿ ಜನರ ಅಗತ್ಯ ವಸ್ತುಗಳ ಖರೀದಿಗೆ ಸ್ವಲ್ಪ ಅವಕಾಶ ನೀಡಲಾಗಿದೆ ಎಂದು ತಹಶೀಲ್ದಾರ ಅವರು ಸಂಸದರಿಗೆ ಮಾಹಿತಿ ನೀಡಿದರು.
ಜನರು ಅಳಿಲು ಸೇವೆಗೆ ಮುಂದಾಗಬೇಕು: ವಿಶ್ವವ್ಯಾಪ್ತಿ ಹರಡಿರುವ ಕೊರೋನಾ ಸೋಂಕು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸಕರ್ಾರ ಲಾಕ್ಡೌನ್ ನಿಮರ್ಿಸಿ ಆಥರ್ಿಕ ಸಂಕಷ್ಟ ಎದುರಿಸುತ್ತಿದ್ದು. ಬಡವರಿಗೆ, ನಿರ್ಗತಿಕರಿಗೆ ಜೀವನಾಂಶಕ ವಸ್ತು ಪೋರೈಕೆ ಮಾಡಲು ಹಾಗೂ ಆರೋಗ್ಯ ಸಲಕರಣೆ ಕ್ರೋಢೀಕರಣ ಮಾಡಲು ಸಕರ್ಾರದ ಜೊತೆ ನಾವುಗಳು ಇದ್ದೇವೆ ಎಂಬ ಸಂದೇಶ ಸಾರಲು ಸರ್ವರೂ ಅಳಿಲು ಸೇವೆಗೆ ಮುಂದಾಗಬೇಕು ಎಂದು ಸಂಸದ ಶಿವಕುಮಾರ ಉದಾಸಿ ಕರೆ ನೀಡಿದರು.
ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ, ತಾಪಂ ಇಒ ನಿಂಗಪ್ಪ ಓಲೇಕಾರ, ವಿ.ವಿ. ಕಪ್ಪತ್ತನವರ, ರಾಮಣ್ಣ ಡಂಬಳ, ಫಕ್ಕೀರೇಶ ರಟ್ಟಿಹಳ್ಳಿ ಇದ್ದರು.