ಸಹಕಾರಿ ಸಂಘಕ್ಕೆ ಸತತ ಪರಿಶ್ರಮ ಅಗತ್ಯ : ಸಚಿವ ಶಿವಾನಂದ ಪಾಟೀಲ

ಸಹಕಾರಿ ಸಂಘಕ್ಕೆ ಸತತ ಪರಿಶ್ರಮ ಅಗತ್ಯ : ಸಚಿವ ಶಿವಾನಂದ ಪಾಟೀಲ Cooperative societies need continuous effort: Minister Shivanand Patil

ದೇವರಹಿಪ್ಪರಗಿ 28:  ಪತ್ತಿನ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರೂ ಸತತ ಪರಿಶ್ರಮ ಪಟ್ಟರೆ ಸಂಘವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯಬಹುದಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು, ಪಟ್ಟಣದ ಜನರ ಸ್ವಾವಲಂಬಿ ಬದುಕಿಗೆ ಆರ್ಥಿಕ ಅನುಕೂಲಗಳನ್ನು ಕಲ್ಪಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಕ್ಕರೆ ಸಚಿವರು ಹಾಗೂ ವಿಜಯಪುರ ವ್ಹಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಶ್ರೀ ಶ್ರೀ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘ ನಿಯಮಿತ ರಜತ ಮಹೋತ್ಸವ ಸಮಾರಂಭದ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಮಾತನಾಡಿದ

ಅವರು, ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘ ಕಳೆದ 25 ವರ್ಷದಲ್ಲಿ ಅನೇಕ ಏಳುಬೀಳುಗಳ ಮದ್ಯೆಯೂ ಗ್ರಾಹಕರ ವಿಶ್ವಾಸದೊಂದಿಗೆ ಮುನ್ನಡೆದಿದ್ದು ಶ್ಲಾಘನೀಯ, 1904ರಲ್ಲಿ ಆರಂಭವಾದ ಸಹಕಾರ ಚಳವಳಿ ಈವರೆಗೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಬಡವರ, ಸಾಮಾನ್ಯ ಜನರ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ರಾಜಕೀಯ ಬೆಳವಣಿಗೆಗೆ ಪ್ರೇರಣಾ ಶಕ್ತಿಯಾಗಿದೆ. ಎಲ್ಲಾ ಹಿರಿಯ ಸದಸ್ಯರ ಪರಿಶ್ರಮ ಹಾಗೂ ಸಹಕಾರದಿಂದ ಪಟ್ಟಣದಲ್ಲಿ ಸಾಕಷ್ಟು ಪತ್ತಿನ ಸಂಘಗಳಿದ್ದರೂ ಬಡ ಕುಟುಂಬಗಳಿಗೆ, ವ್ಯಾಪಾರ ಸಾಲ ನೀಡಿ ಉತ್ತಮ ಸೇವೆ ನೀಡಿದೆ. ಜೊತೆಗೆ ಸಂಘ ಶತಮಾನೋತ್ಸವ ಆಚರಿಸಲಿ ಎಂದು ಹಾರೈಸಿದರು.ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಮಾತನಾಡಿ,ಹಿರಿಯರು ಪ್ರಾಂಜಲ ಮನಸ್ಸಿನಿಂದ  ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ, ವ್ಯಾಪಾರಸ್ಥರಿಗೆ ಸಕಾಲಕ್ಕೆ ಸಾಲ ನೀಡುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.  

ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಿ ಬ್ಯಾಂಕ್ ಏಳಿಗೆಗೆ ಸಹಕರಿಸಬೇಕು. ಸಂಘ ಕಳೆದ 25 ವರ್ಷಗಳಿಂದ ಗ್ರಾಹಕರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವುದು ಪ್ರಶಂಸನೀಯ, ಸಂಘ ಅಧ್ಯಕ್ಷರು ಯುವ ಮುಖಂಡರಾದ ರಾಜೀವ್ ಗುತ್ತೇದಾರ ಹಾಗೂ ಸದಸ್ಯರ ಸಹಕಾರದಿಂದ ಮುಂದೆ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷರಾದ ರಾಜೀವ್ ಗುತ್ತೇದಾರ ಅವರು ಮಾತನಾಡಿ, ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘ 2000ರಲ್ಲಿ ಪ್ರಾರಂಭವಾಗಿ 25 ವರ್ಷ ಯಶಸ್ವಿಯಾಗಿ ಪೂರೈಸಿ 150ಕೋಟಿ ರೂ ದುಡಿಯುತ್ತಿದ್ದು,ಸತತ ಲಾಭಾಂಶದಿಂದ ಗ್ರಾಹಕರ ವಿಶ್ವಾಸದೊಂದಿಗೆ ಮುನ್ನಡೆದಿದ್ದು,

ಸಂಘದ ದಶಮಾನೋತ್ಸವ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಿಸಿದೆ, ಸಾವಿರಾರು ಜನರಿಗೆ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದೆ.ಹಿರಿಯ ಸದಸ್ಯರ ವಿಶ್ವಾಸ, ಸಹಕಾರದಿಂದ ಸಂಘ ಬೆಳೆದು ಬಂದಿದೆ. ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ದುಡಿಯುವ ಮೂಲಕ ಇನ್ನೂ ಹೆಚ್ಚಿನ ಸೇವೆಯನ್ನು ಸಾರ್ವಜನಿಕರಿಗೆ ನೀಡಲಿದ್ದೇವೆ ಎಂದು ಹೇಳಿದರು. ಹೊರ್ತಿ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ ಅವರು ಮಾತನಾಡಿ, ಸಹಕಾರ ತತ್ವಗಳ ಪಾಲನೆ ಬಗ್ಗೆ ಮಾತನಾಡಿದರು.ಸಮಾರಂಭದ ಸಾನಿಧ್ಯವನ್ನು ಸ್ಥಳೀಯ ಜಡಿಮಠದ ಶ್ರೀ ಷ.ಬ್ರ ಜಡೇಸಿದ್ದೇಶ್ವರ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. 

ಸಂಘದ ಉಪಾಧ್ಯಕ್ಷರಾದ ಹಸನಸಾಬ ವಡ್ಡೋಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಬೆಳ್ಳಿ ಸಂಭ್ರಮದ ಸವಿ ನೆನಪಿನ ಕಾಣಿಕೆಯನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ವಿತರಿಸಿದರು.ಸ್ಥಳೀಯ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಮಹಾದೇವ ಹಿರೇಕುರುಬರ ಅವರು ಗಣ್ಯರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿಜಯಪುರ ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ, ವಿವಿಧ ಸಹಕಾರಿ ಬ್ಯಾಂಕ್ ಅಧ್ಯಕ್ಷರುಗಳಾದ ಗುರುಶಾಂತ ನಿಡೋಣಿ, ಶಂಕರ ಕನಸೆ, ಭೀಮರಾಯ ಬಿರಾದಾರ,ರಾಜಶೇಖರ ಒಂಟೆತ್ತಿನ, ಶಾಂತಪ್ಪ ಬಿರಾದಾರ,ಪ.ಪಂ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ, ಮುಖಂಡರುಗಳಾದ ದೇವೇಂದ್ರ​‍್ಪ ಗುತ್ತೆದಾರ, ಸೋಮನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಜ್ಞಾನೇಶ್ವರ ಸುಗತೇಕರ, ರಿಯಾಜಅಹ್ಮದ ತಾಂಬೋಳಿ,ಬಸೀರಅಹ್ಮದ ಬೇಪಾರಿ,ಆಡಳಿತ ಮಂಡಳಿಯ ನಿರ್ದೇಶಕರಾದ ಡಾ.ಆರ್‌.ಆರ್‌.ನಾಯಕ, ಸಿದ್ದಪ್ಪ ಅಡಕಿ, ಅಶೋಕ ಮಶಾನವರ,ಗುರುಬಾಳ ಯರಗಲ್, ಸಿದ್ದಪ್ಪ ಮಸಬಿನಾಳ, ಸುಧೀರ ಈಳಗೇರ,ಕೇಸು ರಾಠೋಡ, ಮಡಿವಾಳಪ್ಪ ವಾಲಿಕಾರ,ಕಾಶೀಬಾಯಿ ಕಕ್ಕಳಮೇಲಿ,ಕಸ್ತೂರಿಬಾಯಿ ಮೂಲಿಮನಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಪಟ್ಟಣದ ಪ್ರಮುಖರು, ಗಣ್ಯರು, ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು ಹಾಗೂ ಇತರರು ಉಪಸ್ಥಿತರಿದ್ದರು.