ಸಹಕಾರ ಸಂಘಗಳ ಏಳ್ಗೆಗೆ ಸಹಕಾರಿ ಕಾನೂನು ಮತ್ತು ಗಣಕೀಕರಣ ತರಬೇತಿ ಅತ್ಯ ಅವಶ್ಯ
Cooperative law and computerization training are essential for the development of cooperative socie
ಗದಗ 13 : ಸಹಕಾರ ಇಲಾಖೆ, ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ದಿನಾಂಕ:13.02.2026 ರಂದು ನಾಟಕ ಕಲಾ ಬ್ರಹ್ಮ ಶ್ರೀ ಎಚ್. ವೆಂಕುಬರಾವ ಕಲಾಭವನ, ಶಿರಹಟ್ಟಿ ಬಸವೇಶ್ವರ ಸರ್ಕಲ್ ಹತ್ತಿರ ಶಿರಹಟ್ಟಿ ತಾ.ಶಿರಹಟ್ಟಿ ಜಿ.ಗದಗದಲ್ಲಿ ಜರುಗಿತು.
ಕೆ.ಸಿ.ಸಿ.ಬ್ಯಾಂಕ್ ಲಿ., ಧಾರವಾಡ ನಿರ್ದೇಶಕರಾದ ಶ್ರೀ ಗೋವಿಂದಗೌಡ ವ್ಹಿ. ಪಾಟೀಲ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಹಕಾರ ಸಂಘಗಳ ಏಳ್ಗೆಗೆ ಸಹಕಾರಿ ಕಾನೂನು ಮತ್ತು ಗಣಕೀಕರಣ ತರಬೇತಿ ಅವಶ್ಯಕತೆ ಇದೆ. ಸಹಕಾರಿ ಕಾಯಿದೆಯಲ್ಲಿ ಕಾಲಕಾಲಕ್ಕೆ ಬದಲಾವಣೆಯಾದ ಮಾಹಿತಿಯನ್ನು ಪಡೆದು ತಮ್ಮ ಸಂಘಗಳಲ್ಲಿ ಅಳವಡಿಸಿಕೊಳ್ಳಲು ಇಂತಹ ತರಬೇತಿ ಬಹಳ ಮುಖ್ಯ ಎಂದು ಹೇಳಿದರು. ಮುಂದುವರೆದು ಮಾತನಾಡುತ್ತಾ ಕೆ.ಸಿ.ಸಿ. ಬ್ಯಾಂಕಿನ ನೂತನ ಶಾಖೆಗಳನ್ನು ಪ್ರಾರಂಭಿಸಿ ಗ್ರಾಮೀಣ ಜನರಿಗೆ ನೆರವಾಗುವ ದೃಷ್ಠಿಯಿಂದ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗಿದೆ.
ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವುದು ಹೆಚ್ಚು ಠೇವಣಿಗಳನ್ನು ಸಂಗ್ರಹಿಸುವ ಮೂಲಕ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ ತರುವುದು, ನಿರುದ್ಯೋಗ ನಿವಾರಣೆಗೆ ಯುವಕರ ಕೈಗೆ ಕೆಲಸ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸಹಕಾರಿ ಆಂದೋಲನ ಬಹಳ ಉತ್ತಮವಾಗಿ ಬೆಳೆದಿದ್ದು, ಜಿ.ಡಿ.ಪಿ ಬೆಳೆವಣಿಗೆಗೆ ಸಹಕಾರಿಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಬಹುಸೇವಾ ಕೇಂದ್ರ ಯೊಜನೆ, ಇ.ಆರ್.ಪಿ. ಸಾಪ್ಟವೇರ್ ಹಾಗೂ ಸಿಸ್ಟಮ್ ಅಡಿಟ್, ಕಂಪ್ಯೂಟರೀಕರಣ, ಗ್ರಾಮ ಪಂಚಾಯತಿಗೊಂದು ಸಹಕಾರ ಸಂಘ ಯೋಜನೆಗಳು ಗ್ರಾಮೀಣ ಆರ್ಥಿಕ ಬಲವರ್ಧನೆಗೆ ಪೂರಕ ಅಂಶಗಾಳಗಿವೆ ಎಂದು ಹೇಳಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿಗಳಾದ ಶ್ರೀ ಬಿ.ಆರ್. ನಿಡಗುಂದಿಯವರು ಮಾತನಾಡುತ್ತಾ ಇ.ಆರ್.ಪಿ. ಮುಕ್ಯ ಉದ್ದೇಶಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಗತ್ಯ ಮತ್ತು ವ್ಯವಹಾರ ಬೆಂಬಲ ಸೇವೆಗಳನ್ನು ಒದಗಿಸಲು ಸಹಾಯ ಮಾಡುವುದು ಮತ್ತು ಅವುಗಳನ್ನು ಗ್ರಾಮಿಣ ಕೇಂದ್ರಗಳಾಗಿ ಪರಿವರ್ತಿಸುವುದು. ಗ್ರಾಮೀಣ ಜನರಿಗೆ ಅವರ ಮನೆ ಬಾಗಿಲಿಗೆ ಕಡಿಮೆ ವೆಚ್ಚದ ಸೇವೆಗಳು, ಹೆಚ್ಚಿನ ವ್ಯಾಪ್ತಿ ಮತ್ತು ಸಾಲ ವಿತರಣೆಯ ಸುಧಾರಣೆಗಾಗಿ ಸಹಕಾರಿ ಸಂಘ ಇತರ ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಪಿ.ಎ.ಸಿ.ಎಸ್. ಮತ್ತು ಮೇಲಿನ ಶ್ರೇಣಿಗಳ ನಡುವೆ ಸಹಯೋಗದ ಕಾರ್ಯವಿಧಾನ. ಪಿ.ಎ.ಸಿ.ಎಸ್. ಗಾಗಿ ಹೊಸ ವ್ಯವಹಾರಗಳು ಮತ್ತು ಆದಾಯ ಉತ್ಪಾದನೆಯ ಅವಕಾಶಗಳನ್ನು ಕಲ್ಪಿಸುವುದು ಮತ್ತು ಬದಲಾವಣೆಯನ್ನು ತರುವುದು ಹಾಗೂ ಯಶಸ್ವಿನಿ ಯೋಜನೆ ಮರ್ಚ 2026 ಅಂತ್ಯಕ್ಕೆ ಮುಕ್ತಾಯವಾಗಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘಗಳ ಸದಸ್ಯರುಗಳಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.
ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಸುನಿತಾ ಶಿದ್ರಾಮರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಬರುವ 539 ಪ್ಯಾಕ್ಸ್ ಸಂಘಗಳು ಕಂಪ್ಯೂಟರೈಜೇಶನ್‌ದಲ್ಲಿ ಆಯ್ಕೆಯಾಗಿವೆ, 479 ಸಿಸ್ಟಮ್ ಅಡಿಟ್ ಪೂರ್ಣಗೊಂಡಿವೆ. 372 ಸಂಘಗಳು ಡೈನಾಮಿಕ್ ಡೇ ಎಂಡ್ ಆಗಿವೆ. ಗದಗ ಜಿಲ್ಲೆಗೆ ಸಂಬಂಧಪಟ್ಟಂತೆ 160 ಪ್ಯಾಕ್ಸ್ ಸಂಘಗಳು ಕಂಪ್ಯೂಟರೈಜೇಶನ್‌ದಲ್ಲಿ ಆಯ್ಕೆಯಾಗಿವೆ 136 ಸಿಸ್ಟಮ್ ಅಡಿಟ್ ಪೂರ್ಣಗೊಂಡಿವೆ. 114 ಸಂಘಗಳು ಡೈನಾಮಿಕ್ ಡೇ ಎಂಡ್ ಆಗಿವೆ.
ಇ.ಆರ್.ಪಿ. ಯು ಬಳಕೆದಾರ ಸ್ನೇಹಿ ಸಾಪ್ಟವೇರ್ ಆಗಿದ್ದು, ಐಕಾನ ಆಧಾರಿತ ಇಂಟರ್ಫೇಸ್ ಮತ್ತು ವರ್ಕಪ್ಲೋ ಚಾಲಿತ ವಿನ್ಯಾಸ ಹೊಂದಿದೆ, ಪ್ರಾದೇಶಿತ ಭಾಷೆಗಳನ್ನು ಬೆಂಬಲಿಸುವ ಈ ಸಾಫ್ಟವೇರ್ ಸಂಘದ ಎಲ್ಲಾ ಚಟುವಟಿಕೆಗಳನ್ನು ಗಣಕೀಕರಿಸುತ್ತದೆ ಮತ್ತು ಮಧ್ಯಸ್ಥಗಾರರಿಗೆ ಅಗತ್ಯವಿರುವ ಎಲ್ಲಾ ವರದಿಗಳನ್ನು ಉತ್ಪಾದಿಸುತ್ತದೆ. ಬಳಕೆದಾರರ ನಿರ್ವಹಣೆ, ಸಂಚಿಕೆ ಲಾಭಾಂಶವನ್ನು ಲೆಕ್ಕಹಾಕಿ ವಿತರಿಸುವುದು, ಸದಸ್ಯತ್ವವನ್ನು ಕೊನೆಗೊಳಿಸುವ ಸಮಯದಲ್ಲಿ ಸದಸ್ಯರ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಪರೀಶೀಲಿಸುವುದು ಇದರ ಕ್ರಿಯಾತ್ಮಕ ವೈಶಿಷ್ಟವಾಗಿದ್ದು ಇದರ ಸದುಪಯೋಗ ಸಂಘದ ಮುಖ್ಯಕಾರ್ಯನಿರ್ವಾಹಕರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 