ನೈಸರ್ಗಿಕ್ ವಿಜ್ಞಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಲು ಸಹಕಾರಿ: ಪ್ರೊ. ಅಶೋಕಕುಮಾರ
ಲೋಕದರ್ಶನ ವರದಿ
ಹಾವೇರಿ, 23: ಗಣಿತದ ಪರಿಕಲ್ಪನೆಗಳು ಮತ್ತು ಭಾಷೆಯನ್ನು ಬಳಸುತ್ತ ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸುವ ಕಾರ್ಯ ಯುವಪೀಳಿಗೆಯಿಂದ ಆಗಬೇಕಾಗಿದ್ದು, ಮಾದರಿ ವಿವರಣೆ, ವಿಭಿನ್ನ ಘಟಕಗಳ ಪರಿಣಾಮಗಳ ಅಧ್ಯಯನ ಕುರಿತು ವಿದ್ಯಾಥರ್ಿಗಳು ಆಸಕ್ತಿ ತೋರಬೇಕೆಂದು ಅಂಕೋಲಾದ ಗೋಖಲೆ ಸೆಂಟೆನರಿ ಕಾಲೇಜಿನ ಪ್ರೊ. ಅಶೋಕಕುಮಾರ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ "ಗಣಿತಶಾಸ್ತ್ರದ ಮಾದರಿ ಮತ್ತು ರಾಮಾನುಜಂರ ಮಾಂತ್ರಿಕ ಚೌಕ" ವಿಷಯ ಕುರಿತು ಮಾತನಾಡುತ್ತಿದ್ದರು.
ಗಣಿತಶಾಸ್ತ್ರದ ಮಾದರಿಗಳು ನೈಸಗರ್ಿಕ ವಿಜ್ಞಾನಗಳಲ್ಲಿ, ಅದರಲ್ಲೂ ವಿಶೇಷವಾಗಿ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿಯ ವ್ಯವಸ್ಥೆಯ ವಿವರಣೆಗಳ ಬಗ್ಗೆ ಬೆಳಕು ಚೆಲ್ಲಲು ಸಹಾಯಕಾರಿ.
ಈ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳು ಸಂಶೋಧನಾ ಕಾರ್ಯದಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಶ್ರೀನಿವಾಸ ರಾಮಾನುಜಂ ಭಾರತದ ಒಬ್ಬ ಶ್ರೇಷ್ಠ ಗಣಿತಜ್ಞರಾಗಿ 'ಸಂಖ್ಯೆಗಳ ವಿಶ್ಲೇಷಣಾತ್ಮಕ ಸಿದ್ಧಾಂತಕ್ಕೆ' ಗಣನೀಯ ಕೊಡುಗೆ ನೀಡುವುದರ ಜೊತೆಗೆ ದೀರ್ಘ ವೃತ್ತದ ಕಾರ್ಯಗಳು ಮತ್ತು ಅನಂತ ಸರಣಿಗಳ ಬಗ್ಗೆ ಅವರ ಸಾಧನೆ ಅಪಾರ. ಮಾಂತ್ರಿಕ ಚೌಕದಲ್ಲಿ ಜೋಡಿಸಲಾದ ಸಂಖ್ಯೆಗಳ ಮಾದರಿಗಳು ಕಣರ್ಿಯವಾಗಿ, ಅಡ್ಡಡ್ಡಲಾಗಿ, ಲಂಬವಾಗಿ ಮತ್ತು ಹೆಚ್ಚೆಚ್ಚು ಮೂಲಗಳಲ್ಲಿ, ಕೇಂದ್ರ ಚೌಕದಲ್ಲಿ ಸೇರಿಸಿದಾಗ ಅದೇ ಮೊತ್ತವನ್ನು ಉತ್ಪತ್ತಿ ಮಾಡುತ್ತವೆ ಎಂಬುದರ ಮಹತ್ವವನ್ನು ಯುವ ಪೀಳಿಗೆ ಅರಿಯಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ವಹಿಸಿದ್ದರು. ಕಾರ್ಯಕ್ರಮ ಸಂಯೋಜಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ. ಜಿ. ಕೆ. ಮಂಕಣಿ ಸ್ವಾಗತಿಸಿ, ಪರಿಚಯಿಸಿದರು. ಕಿರಣಸ್ವಾಮಿ ಗುಂಡೂರಮಠ ನಿರೂಪಿಸಿದರು. ರೋಹನ ಪಾಟೀಲ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 