ಪ್ರಾಂತ ರೈತ ಸಮ್ಮೇಳನ ಯಶಸ್ವಿಗೆ ಸಹಕರಿಸಿ: ಬಗಲಿ
ಇಂಡಿ 15: ಅಖಿಲ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಕರ್ನಾಟಕದ ಪ್ರಾಂತ ವತಿಯಿಂದ ಪ್ರಾಂತ ರೈತ ಸಮ್ಮೇಳನ ಕಾರ್ಯಕ್ರಮ ವಿಜಯಪೂರ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ಆವರಣದಲ್ಲಿ ಡಿಸೆಂಬರ್ 16, 17ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಾನ್ನಿಧ್ಯವನ್ನು ಅಮೃತಾನಂದ ಸ್ವಾಮಿಗಳು ಗುರುದೇವ ಆಶ್ರಯ ಬಾಲಗಾಂವ -ಕಾತ್ರಳ ಅವರು ಗೋ ಪೂಜೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ನಂತರ ಎಲ್ಲಾ ರೈತರು ಕೂಡಿ ವಿಜಯಪೂರ ಸಿದ್ದೇಶ್ವರ ದೇವಾಲಯದಿಂದ ದರ್ಬಾರ್ ಹೈಸ್ಕೂಲವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಈ ನಂತರ ಎರಡು ದಿನಗಳ ಕಾಲ ರೈತ ಸಂಘದ ವಿವಿಧ ಪದಾಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಅಖಿಲ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇಂಡಿ ತಾಲೂಕಿನ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಅಖಿಲ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಗುರುನಾಥ್ ಬಗಲಿ ಅವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.