ಗುತ್ತಿಗೆ ಕಾರ್ಮಿಕ ಇಲಾಖೆ ಕನಿಷ್ಟ ವೇತನ ನಿಗಧಿಪಡಿಸುವಲ್ಲಿ ವಿಫಲ : ಪಂಪಾಪತಿ ರಾಟಿ

Contract Labour Department failed to fix minimum wage: Pampapati Rathi

ಗುತ್ತಿಗೆ ಕಾರ್ಮಿಕ ಇಲಾಖೆ ಕನಿಷ್ಟ ವೇತನ ನಿಗಧಿಪಡಿಸುವಲ್ಲಿ ವಿಫಲ : ಪಂಪಾಪತಿ ರಾಟಿ

ಕೊಪ್ಪಳ 10: 2022-23 ನೇ ಸಾಲಿನಲ್ಲಿ ವಲಯ 3 ರಿಂದ ವಲಯ 4 ನ್ನು ವಿಂಗಡಿಸುವಾಗ ಭಾರಿ ತಪ್ಪನ್ನು ಕಾರ್ಮಿಕ ಇಲಾಖೆ ಮಾಡಿದ್ದು ರಾಜ್ಯ ಗುತ್ತಿಗೆ-ಹೊರ ಗುತ್ತಿಗೆ ಕಾರ್ಮಿಕರಿಗೆ ಕೋಟ್ಯಂತರ ರೂ.ಗಳ ಅನ್ಯಾಯವಾಗಿದೆ, ರಾಜ್ಯದ ಕಾರ್ಮಿಕ ಇಲಾಖೆಯ ಕನಿಷ್ಟ ವೇತನ ನಿಗಧಿ ಪಡಿಸುವಲ್ಲಿ ವಿಫಲತೆಯಾಗಿದೆ ಎಂದು ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಮಾಜಿ ಸದಸ್ಯ ಪಂಪಾಪತಿ ರಾಟಿ ಹೇಳಿದರು. 

ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶ ಮಾತನಾಡಿ  ಕಾರ್ಮಿಕ ಇಲಾಖೆ ಕನಿಷ್ಟ ವೇತನ 66 ಕಾಯ್ದೆಯನ್ನು ಉಲ್ಲಂಘಿಸಿದೆ. ರಾಜ್ಯ ಸರ್ಕಾರಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ-ಅರೆ ಸರ್ಕಾರಿ ಖಾಸಗಿ ಕಂಪನಿಗಳಿಗೆ ಕೋಟ್ಯಂತರ ರೂ.ಗಳ ಲಾಭವಾಗಿದೆ. ಇದರಿಂದ ರಾಜ್ಯದ ಅನೇಕ ಇಲಾಖೆಗಳಲ್ಲಿ ಅನೇಕ ಹುದ್ದೆಗಳಲ್ಲಿ ಅನೇಕ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಲಕ್ಷಾಂತರ ಗುತ್ತಿಗೆ-ಹೊರ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನದಲ್ಲಿ ವಂಚಿಸಿದಂತಾಗಿದೆ. ಕಾರ್ಮಿಕ ಇಲಾಖೆ 3 ವಲಯದಿಂದ 4 ನೇ ವಲಯಕ್ಕೆ ವಿಂಗಡಿಸುವಾಗ 2022 ರಲ್ಲಿದ್ದ ಮೂಲ ವೇತನವನ್ನು 2023ರಲ್ಲಿ ಕಡಿಮೆಗೊಳಿಸಿದೆ. ಕಾಯ್ದೆಯಂತೆ ಹಿಂದೆ ನಿಗಧಿಪಡಿಸಿದ ವೇತನಕ್ಕಿಂತ ಕಡಿಮೆಗೊಳಿಸಿ ನೀಡಲು ಅವಕಾಶವಿರುವುದಿಲ್ಲ.  

ಈ ಕುರಿತು 08 ಮೇ 2023 ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು, ಇದಕ್ಕೆ ತಕ್ಷಣ ಸ್ಪಂದಿಸಿದ  ಆಯುಕ್ತರು ಈ ಕುರಿತು ಸಮಿತಿಯನ್ನು ರಚಿಸಲಾಗುತ್ತದೆ ಎಂದು  13 ಸೆಪ್ಟಂಬರ್ 2023 ರಂದು ಪತ್ರ ಬರೆದು ತಿಳಿಸಿದ್ದಾರೆ, ಸುಮಾರು 3 ವರ್ಷಗಳಾದರೂ ಸರಕಾರ ಸ್ಪಂದಿಸದೆ ಇರುವುದರಿಂದ ಪುನಃ  19ನೇ ಮಾರ್ಚ2025 ರಂದು ಆಯುಕ್ತರು ಕಾರ್ಮಿಕ ಇಲಾಖೆ ಅವರಿಗೆ ಬರೆದು ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದಾಗಿ ತಿಳುಹಿಸಲಾಗಿದೆ,ಈ ಕುರಿತು ತಕ್ಷಣ ಸ್ಪಂದಿಸಿದ  ಆಯುಕ್ತರು ಈ ಬಾರಿಯ ಕನಿಷ್ಟ ವೇತನ ದರಪಟ್ಟಿಯಲ್ಲಿ ಸರಿಪಡಿಸಲಾಗುವುದು 4 ವಲಯ ರದ್ದುಪಡಿಸಿ 3 ವಲಯಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.  

ರಾಜ್ಯದ ಲಕ್ಷಾಂತರ ಗುತ್ತಿಗೆ ಕಾರ್ಮಿಕರಿಗೆ ಮೂರು ವರ್ಷಗಳಿಂದ ಪ್ರತಿವರ್ಷ ನೂರಾರು ಕೋಟಿ ನಷ್ಟ ಅನುಭವಿಸಿದ್ದಾರೆ,ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ  ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಲು ನಮ್ಮ ಸಂಘಟನೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿದೆ, ರಾಜ್ಯದ ಜಲಸಂಪನ್ಮೂಲ ಇಲಾಖೆ ಹೊರಟಿಸಿರುವ ರಾಜ್ಯದ ಎಲ್ಲಾ ನಿಗಮಗಳಲ್ಲಿ ಸುಮಾರು 20 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ನಿರಂತರವಾಗಿರುವ ರೈತರ ಹೊಲಗದ್ದೆಗಳಿಗೆ ನಗರಗಳಿಗೆ ಗ್ರಾಮಗಳಿಗೆ ನೀರು ಒದಗಿಸುವ ಗುತ್ತಿಗೆ ಕಾರ್ಮಿಕರನ್ನು ಗುತ್ತಿಗೆದಾರರಿಂದ ನೇಮಿಸಿಕೊಳ್ಳುವ ಬದಲು ಕೇಂದ್ರ ಸರ್ಕಾರದ ಅಡಿಯ ಇರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಕಾರ್ಮಿಕರನ್ನು ಪಡೆದು ಕೆಲಸ ನಿರ್ವಹಿಸುವ ಕುರಿತು ವರದಿ ನೀಡಲು ಪತ್ರ ಬರೆದಿದ್ದಾರೆ,  

ರಾಜ್ಯದ ಕಾರ್ಮಿಕ ಇಲಾಖೆಯಿಂದ ಮಾಹಿತಿಯ ಸಲಹೆಗಳನ್ನು ಪಡೆಯಬಹುದಾಗಿತ್ತು, ರಾಜ್ಯದ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಕಾರ್ಮಿಕ ಕಾಯ್ದೆಯ ಕಾನೂನುಗಳ ಸಮರ​‍್ಕವಾದ ಮಾಹಿತಿ ಇಲ್ಲದೆ ಇರುವುದೇ ಇದಕ್ಕೆ ಕಾರಣವಾಗಿದೆ, ಜಲ ಸಂಪನ್ಮೂಲ ಇಲಾಖೆಯ ಎಲ್ಲಾ ನಿಗಮಗಳ ಅಧಿಕಾರಿಗಳು ಈ ತಪ್ಪನ್ನು ಮಾಡದಂತೆ ಒತ್ತಾಯಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹುಸೇನ್ ಬಾಷ, ಬಸಪ್ಪ ಚಲವಾದಿ, ರಮೇಶ್, ರಮೇಶ್‌. ಎನ್ ಉಪಸ್ಥಿತರಿದ್ದರು