ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಮುಂದುವರಿದ ಧರಣಿ ಸತ್ಯಾಗ್ರಹ

Continued dharna satyagraha demanding cancellation of package tender

ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಮುಂದುವರಿದ ಧರಣಿ ಸತ್ಯಾಗ್ರಹ  

ಕೊಪ್ಪಳ 13: ಲೋಕೋಪಯೋಗಿ ಇಲಾಖೆಯ  ಕಾರ್ಯನಿರ್ವಾಹಕ ಇಂಜಿನಿಯರ್ ಜಿಲ್ಲೆಯಲ್ಲಿ ಕರೆದಿರುವ ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರ ಸಂಘ (ಪ.ಜಾ/ಪ.ಪಂಗಡ) ಜಿಲ್ಲಾ ಶಾಖೆ ಕೊಪ್ಪಳ ವತಿಯಿಂದ  ಪಿಡಬ್ಲ್ಯೂಡಿ ಕಚೇರಿಯ ಮುಂದೆ ನಡೆದ ಧರಣಿ ಸತ್ಯಾಗ್ರಹವು 2ನೇ ದಿನ ಮುಂದುವರಿಯಿತು. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,  ಹಿಂದುಳಿದ ವರ್ಗ, ಜಾತಿಯ  ಗುತ್ತಿಗೆದಾರರಿಗೆ ಜಾತಿವಾರು ಅನುಗುಣವಾಗಿ ಮೀಸಲಾತಿಯನ್ನು ಸರಕಾರ ನೀಡಿರುತ್ತದೆ,ಆದರೆ ಕಾರ್ಯನಿರ್ವಾಹಕ ಇಂಜೀನಿಯರ್ ಲೋಕೋಪಯೋಗಿ ಇಲಾಖೆ,ಮುಖ್ಯ ಇಂಜಿನಿಯರ್ ಪಿಡಬ್ಲ್ಯೂಡಿ ಕಲಬುರ್ಗಿ ,ಇವರು ಸೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,  ಹಿಂದುಳಿದ ವರ್ಗ, ಗುತ್ತಿಗೆದಾರರಿಗೆ ಟೆಂಡರ್ ನೀಡುವಲ್ಲಿ ಅನ್ಯಾಯ ಮಾಡುತ್ತಾ ಬಂದಿದ್ದು, ಕೆ ಟಿಪಿಪಿ ಕಾಯಿದೆ  ಉಲ್ಲಂಘನೆ ಮಾಡಿ ಪ.ಜಾ/ ಪ.ಪಂ ಗುತ್ತಿಗೆದಾರರಿಗೆ ಶೇ.24.10ಅ ಇದ್ದು ಇದರ ಪ್ರಕಾರ ನಿಯಮಾನುಸಾರ ಟೆಂಡರ್ ಕರೆಯ ಬೇಕಾಗಿರುತ್ತದೆ,ಆದರೆ  ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕಾಗಿ ಗುತ್ತಿಗೆದಾರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತಾರೆ,ಆದ್ದರಿಂದ ಈ ಪ್ಯಾಕೇಜ್ ಟೆಂಡರ್ ಕರೆದಿರುವಂತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಪ್ಯಾಕೇಜ್ ಟೆಂಡರನ್ನು ರದ್ದು ಪಡಿಸುವವರೆಗೂ ಈ ಧರಣಿ ಸತ್ಯಾಗ್ರಹವನ್ನು ಆಹೋರಾತ್ರಿ ಸಂಘಟನೆ ಮುಂದುವರಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

 ಧರಣಿ ಸತ್ಯಾಗ್ರಹದಲ್ಲಿ ಕಲ್ಯಾಣ ಕರ್ನಾಟಕ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರ್ ಸಂಘದ ವಿಭಾಗೀಯ  ಅಧ್ಯಕ್ಷ ಸಿದ್ದು ಕೆ.ಮಣ್ಣಿನವರ, ಜಿಲ್ಲಾ ಅಧ್ಯಕ್ಷ ಯಂಕಪ್ಪ ಹೊಸಳ್ಳಿ, ಮಂಜುನಾಥ ಮುಸಲಾಪುರ,ಗವಿ ಹೂಗಾರ,ಮರಿಸ್ವಾಮಿ ಕೆ. ಮಣ್ಣೀನವರ್,ರಾಮನಗೌಡ ಪಾಟೀಲ್,ಬಸವರಾಜ್ ನಾಯಕ್,ವೀರಭದ್ರ​‍್ಪ ನಾಯಕ್ ,ಪ್ರಶಾಂತ್ ನಾಯಕ್,ವೆಂಕಟೇಶ್ ನೆಲುಗಿಪುರ,ಗಾಳೆಪ್ಪ ಕುಕ್ಕನಪಳ್ಳಿ,ನಿಂಗಜ್ಜ ಚೌಧರಿ, ಶಹಪುರ,ಮಲ್ಲಪ್ಪ ಮುದ್ಲಾಪುರ್ , ಗಣೇಶ್ ಹೆಾರತಟ್ನಾಳ್,ನಿಂಗಜ್ಜ  ಸೇರಿದಂತೆ ಬಹಳಷ್ಟು ಗುತ್ತಿಗೆದಾರರು ಪಾಲ್ಗೊಂಡಿದ್ದರು.